ಬೆಂಗಳೂರು: ಪ್ರಿಯಕರನ ಕಿರುಕುಳಕ್ಕೆ ಮನನೊಂದು ರೂಪದರ್ಶಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನಿಂದ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿದ್ಯಾಶ್ರೀ (25ವ.) ಎಂದು ಗುರುತಿಸಲಾಗಿದೆ.ಈಕೆಯ ಪ್ರಿಯಕರ ಅಕ್ಷಯ್ ಕುಮಾರ್ ಎಂಬಾತನೇ ಕಿರುಕುಳ ನೀಡಿದ ಆರೋಪಿ.
ವಿದ್ಯಾಶ್ರೀ ಅವರ ತಾಯಿ ತ್ರಿವೇಣಿ ನೀಡಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಕ್ಷಯ್ ಕುಮಾರ್‌ನನ್ನು ಬಂಧಿಸಲಾಗಿದೆ.
ವಿದ್ಯಾಶ್ರೀ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೈರಿಯಲ್ಲಿ ನನ್ನ ಸಾವಿಗೆ ಅಕ್ಷಯ್ ಕುಮಾರ್ ಕಾರಣ ಎಂದು ಬರೆದಿಟ್ಟಿದ್ದಾಳೆ. ಪೊಲೀಸರಿಗೆ ತನಿಖೆಯ ವೇಳೆ ಈ ವಿಚಾರ ಕಂಡು ಬಂದ ಹಿನ್ನೆಲೆಯಲ್ಲಿ ಅಕ್ಷಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಶ್ರೀ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.ರೂಪದರ್ಶಿಯಾಗಿಯೂ ಗುರುತಿಸಕೊಂಡಿದ್ದರು. ಅಕ್ಷಯ್ ಕುಮಾರ್ ಬಸವೇಶ್ವರ ನಗರವೊಂದರಲ್ಲಿ ಜಿಮ್ ಟ್ರೈನರ್ ಆಗಿದ್ದ.
2021ರಲ್ಲಿ ಫೇಸ್‌ಬುಕ್ ಮುಖಾಂತರ ಇಬ್ಬರ ಪರಿಚಯವಾಗಿ ಕ್ರಮೇಣ ಪ್ರೀತಿಗೆ ತಿರುಗಿತ್ತು.ಈ ನಡುವೆ ವಿದ್ಯಾಶ್ರೀ ಹಂತ ಹಂತವಾಗಿ ಅಕ್ಷಯ್‌ಗೆ 1.60 ಲಕ್ಷ ಹಣ ಕೊಟ್ಟಿದ್ದರು. ಹಣ ಕೇಳಿದರೆ ಮನ ಬಂದಂತೆ ಯುವತಿಗೆ ಬೈಯುತ್ತಿದ್ದ. ಅಲ್ಲದೇ ತನ್ನನ್ನ ಕಡೆಗಣಿಸಿ ತನ್ನಿಂದ ದೂರವಾಗುತ್ತಿರುವುದಾಗಿ ಭಾವಿಸಿ ಮನೆಯಲ್ಲಿ ಆಕೆ ಯಾರೂ ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
