4
ಉಡುಪಿ: ಪ್ರಯಾಣಿಕರ ಬಸ್ ತಂಗುದಾಣದೊಳಗೆ ನಾಯಿಯೊಂದು ಸತ್ತಿರುವ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಗ್ರಾಮ ಪಂಚಾಯತ್ ನಾಯಿಯ ಮೃತ ದೇಹ ತೆರವುಗೊಳಿಸುವ ಬದಲು ತಂಗುದಾಣದೊಳಗೆ ಇದ್ದ ನಾಯಿಯ ಶವದ ಮೇಲೆಯೇ ಒಂದು ಲೋಡ್ ಮಣ್ಣು ಸುರಿದ ಘಟನೆ ನಂದಳಿಕೆ ಗ್ರಾಮದಲ್ಲಿ ನಡೆದಿದೆ..
ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಮಾವಿನಕಟ್ಟೆ ಮೀರಾ ಅನಂತಕುಡ್ವ ಬಸ್ ತಂಗುದಾಣದಲ್ಲಿ ನಾಯಿಯೊಂದು ಸತ್ತಿದ್ದು, ಈ ಕುರಿತು ಸಾರ್ವಜನಿಕರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರು.
ನಾಯಿಯ ಶವವನ್ನು ವಿಲೇ ಮಾಡುವ ಬದಲು ಅದರ ಮೇಲೆಯೇ ಮಣ್ಣು ಸುರಿದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತಂಗುದಾಣದೊಳಗೆ ಮಣ್ಣಿನ ರಾಶಿ ತುಂಬಿರುವುದರಿಂದ ಅದರೊಳಗೆ ನಿಲ್ಲಲಾಗದೇ ಸಾರ್ವಜನಿಕರು ಮಳೆಯಲ್ಲೂ ಹೊರಗೆ ನಿಲ್ಲುವಂತಾಗಿದೆ.
ಇದನ್ನು ಓದಿ: Holiday: ಈ ಊರಲ್ಲಿ ಭಾನುವಾರ ಬಂದರೆ ಸಾಕು, ಪ್ರಾಣಿಗಳಿಗೆ ವಿಶೇಷ ಸಂಭ್ರಮ
