ಮಂಗಳೂರು: ಮಂಗಳೂರಿನಲ್ಲಿ ನಡೆದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಲಷ್ಕರ್–ಎ–ತಯಬಾ’ ನಂಟು ಇರುವುದು ಬಹಿರಂಗವಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಲಷ್ಕರ್–ಎ–ತಯಬಾ’ದ ಅಫ್ಸರ್ ಪಾಷಾ ಕುಕ್ಕರ್ ಬಾಂಬ್ ತಯಾರಿಸುವುದು ಹೇಗೆ? ಎಂಬುದನ್ನು ತರಬೇತಿ ನೀಡಿದ್ದ ಎನ್ನಲಾಗಿದೆ.
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಅಫ್ಸರ್ ಪಾಷಾ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ವ್ಯಕ್ತಿ ಎಂಬ ಅಂಶ ನಾಗಪುರ ಪೊಲೀಸರ ತನಿಖೆಯಿಂದ ಬಯಲಾಗಿದೆ.
‘ಲಷ್ಕರ್–ಎ–ತಯಬಾ’ ನಿಷೇಧಿತ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾನು ಬಾಂಗ್ಲಾದೇಶದಲ್ಲಿ ಬಾಂಬ್ ತಯಾರಿಕೆ ತರಬೇತಿ ಪಡೆದಿದ್ದಾನೆ.
ಜೈಲಿನಲ್ಲಿದ್ದುಕೊಂಡೇ ಈತ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ.ಮಂಗಳೂರಿನಲ್ಲಿ ನಡೆದ ಉಗ್ರರಿಗೆ ಬೆಂಬಲವಾಗಿ ಬರೆದ ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಮೊಹಮ್ಮದ್ ಶಾರೀಕ್, ಕೆಲದಿನ ಜೈಲಿನಲ್ಲಿದ್ದ. ಇದೇ ಸಂದರ್ಭದಲ್ಲಿ ಶಾರೀಕ್‌ಗೆ ಕುಕ್ಕರ್ ಬಾಂಬ್ ತಯಾರಿಸುವುದು ಹೇಗೆ? ಎಂಬುದನ್ನು ಅಫ್ಸರ್ ಪಾಷಾ ಹೇಳಿಕೊಟ್ಟಿದ್ದ’ ಎಂದು ನಾಗಪುರ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಬಾಂಬ್ ಸ್ಫೋಟಕ್ಕೆ ಮುನ್ನ ಅಫ್ಸರ್ ಪಾಷಾ ಬ್ಯಾಂಕ್ ಖಾತೆಗೆ ₹ 5 ಲಕ್ಷ ಜಮೆ ಆಗಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಬ್ದುಲ್ ಜಲೀಲ್ ಎಂಬಾತನ ಮೂಲಕ ಹಣ ಜಮೆ ಆಗಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಇದಾದ ನಂತರ ಶಾರೀಕ್, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಸಜ್ಜಾಗಿದ್ದ’ ಎಂದು ಹೇಳಿದ್ದಾರೆ. ‘ಮಂಗಳೂರು ಬಾಂಬ್ ಸ್ಫೋಟದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.
ಆದರೆ ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಅಫ್ಸರ್ ಪಾಷಾ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದುವರೆಗೂ ಲಭ್ಯವಾಗಿರಲಿಲ್ಲ. ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣದಲ್ಲಿ ವಿಚಾರಣೆ ನಡೆಸಿದಾಗ, ಅಫ್ಸರ್ ಪಾಷಾ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಈ ಬಗ್ಗೆ ಎನ್‌ಐಎ, ಎಟಿಎಸ್ ಹಾಗೂ ಕೇಂದ್ರ ಗುಪ್ತದಳ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ನಾಗಪುರ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: Mumbai: ಚಲಿಸುತ್ತಿದ್ದ ರೈಲಿನಲ್ಲಿ ಗುಂಡು ಹಾರಿಸಿದ ರೈಲ್ವೇ ರಕ್ಷಣಾ ಪಡೆ ಯೋಧ : ಎಎಸೈ ಸಹಿತ 4 ಮಂದಿ ಸಾವು!
