Home » Hijab: ಹೊಸ ನಿಯಮ; ಹಿಜಾಬ್ ಧರಿಸದ ಮಹಿಳೆಯರು ಕೆಲಸದಿಂದ ವಜಾ! ಹೊಸ ನಿಯಮಕ್ಕೆ ಮುಂದಾದ ಈ ದೇಶ!!!

Hijab: ಹೊಸ ನಿಯಮ; ಹಿಜಾಬ್ ಧರಿಸದ ಮಹಿಳೆಯರು ಕೆಲಸದಿಂದ ವಜಾ! ಹೊಸ ನಿಯಮಕ್ಕೆ ಮುಂದಾದ ಈ ದೇಶ!!!

0 comments
Hijab

Hijab: ರಾಜ್ಯದಲ್ಲಿ ಹಿಜಾಬ್ (Hijab) ವಿಚಾರವಾಗಿ ಕಳೆದ ದಿನಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ಇರಾನ್ ನಲ್ಲೂ ಈ ಹಿಂದೆ ಹಿಜಾಬ್ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಇದೀಗ ಇರಾನ್‌ನಲ್ಲಿ ಹಿಜಾಬ್‌ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕ್ರಮಗಳನ್ನು ಅನುಸರಿಸುವ ಕಾನೂನು ಜಾರಿಗೆ ಬಂದಿದೆ.

ಮೂರು ದಿನಗಳ ಹಿಂದಷ್ಟೇ, ಇರಾನ್‌ ನಲ್ಲಿ ಹೊಸ ಹಿಜಾಬ್‌ ಕಾನೂನು ಜಾರಿಗೆ ತರಲಾಗಿದೆ. ಕಡ್ಡಾಯವಾಗಿ ಹಿಜಾಬ್‌ ಧರಿಸದ ಮಹಿಳೆಯರನ್ನು ಬಂಧಿಸುವ ಮತ್ತು ದಂಡ ವಿಧಿಸುವ ಉದ್ದೇಶದಿಂದ ಇರಾನ್ ಸಂಸತ್ತು ವಿವಾದಾತ್ಮಕ ಹಿಜಾಬ್ ಮತ್ತು ಪರಿಶುದ್ಧತೆಯ ಮಸೂದೆಯನ್ನು ಜಾರಿಗೆ ತಂದಿದೆ ಎನ್ನಲಾಗಿದೆ.

ಪೊಲೀಸರು 133,100ಕ್ಕೂ ಹೆಚ್ಚು ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದು,‌ ಹಿಜಾಬ್‌ ಧರಿಸದ ಮಹಿಳೆಯರ ಕಾರುಗಳನ್ನು ಜಪ್ತಿ ಮಾಡಲಾಗುವುದು, ಕೆಲಸದಿಂದ ತೆಗೆದು ಹಾಕಲಾಗುತ್ತದೆ ಹಾಗೂ ಕಾನೂನಿನ ಮೂಲಕ ಕಠಿಣ ಕ್ರಮಗೊಳ್ಳಲಾಗುತ್ತದೆ ಎಂದು ಪೊಲೀಸರು ಎಸ್‌ ಎಂಎಸ್‌ ಮೂಲಕ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ನಿಗದಿತ ಅವಧಿಯವರೆಗೆ ಕಾರನ್ನು ಬಳಸಬಾರದೆಂದು 2,000 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಹಲವಾರು ಮಹಿಳೆಯರನ್ನು ಪರೀಕ್ಷೆಗಳನ್ನು ಬರೆಯದಂತೆ ನಿರ್ಬಂಧಿಸಲಾಗಿದೆ. ಅವರನ್ನು ವಿಶ್ವವಿದ್ಯಾಲಯಗಳಿಂದ ಅಮಾನತುಗೊಳಿಸಲಾಗಿದೆ. ಬ್ಯಾಂಕಿಂಗ್ ಸೇವೆಗಳು ಮತ್ತು ಸಾರ್ವಜನಿಕ ಸಾರಿಗೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಹಾಗೂ ಕಡ್ಡಾಯ ಹಿಜಾಬ್‌ ಧರಿಸುವ ನಿಯಮವನ್ನು ಪಾಲಿಸದ ನೂರಾರು ವ್ಯಾಪಾರಗಳನ್ನು ಬಲವಂತವಾಗಿ ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.

 

ಇದನ್ನು ಓದಿ: ಬಸ್ ತಂಗುದಾಣದೊಳಗೆ ಸತ್ತ ನಾಯಿ : ತಂಗುದಾಣದೊಳಗೆ ಒಂದು‌ ಲೋಡ್ ಮಣ್ಣು ಸುರಿದ ಗ್ರಾಮ ಪಂಚಾಯತ್ 

You may also like

Leave a Comment