Tirupati Laddu: ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಸಾದ ದೈವೀ ಶಕ್ತಿಯ ಪ್ರತೀಕ. ತಿರುಪತಿ ಲಡ್ಡುಗೆ (Tirupati Laddu) ಕರ್ನಾಟಕದ ನಂದಿನಿ ತುಪ್ಪ ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸುಮಾರು 50 ವರ್ಷಗಳ ನಂತರ ಇದೀಗ ತಿರುಪತಿ ತಿರುಮಲ ಟ್ರಸ್ಟ್ (ಟಿಟಿಡಿ) ತನ್ನ ಪ್ರಸಿದ್ಧ ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪ ಖರೀದಿಯನ್ನು ಸ್ಥಗಿತಗೊಳಿಸಿದೆ.
ಕಳೆದ 50 ವರ್ಷಗಳಿಂದ ತಿಮ್ಮಪ್ಪನ ಲಡ್ಡು (Laddu) ತಯಾರಿಕೆಗೆ ಹಾಗೂ ಅದರ ರುಚಿಗೋಸ್ಕರ ನಂದಿನಿ ತಪ್ಪವನ್ನೇ ಬಳಕೆ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ನಂದಿನಿ ತುಪ್ಪದಿಂದ ಮಾಡಿದ ಲಡ್ಡು ಸಿಗುವುದಿಲ್ಲ. ತಿರುಪತಿ ಲಡ್ಡು ತಯಾರಿಕೆಗಾಗಿ ಸರಬರಾಜು ಆಗುತ್ತಿದ್ದ ತುಪ್ಪವನ್ನು ಇನ್ನುಮುಂದೆ ಕಳುಹಿಸಿಕೊಡಲಾಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ನೀಡಬೇಕು.
ಇಷ್ಟು ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಸಲ ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್ ಅನ್ನು ಕೈಬಿಟ್ಟಿದೆ. ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಕರ್ನಾಟಕದಲ್ಲಿ ಹಾಲಿನ ಕೊರತೆ ಉಂಟಾಗಿದೆ. ಹಾಗಾಗಿ ಇದೀಗ ನಂದಿನಿ ಹಾಲಿನ ಬೆಲೆ ಜಾಸ್ತಿಯಾಗಿದೆ. ಜೊತೆಗೆ ನಂದಿನಿ ತುಪ್ಪದ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್ ನಿರ್ಧರಿಸಿದೆ ಎನ್ನಲಾಗಿದೆ.
ಅಂದಹಾಗೆ ತಿರುಪತಿ ಲಡ್ಡು ನೀಡೋದಕ್ಕೆ ಶುರುವಾಗಿ 300 ವರ್ಷ ಆಯ್ತು. ತಿರುಪತಿಯಲ್ಲಿ ಪೂಜೆ, ದರ್ಶನ ಪಡೆದ ಬಳಿಕ ಲಡ್ಡು (Laddu) ನೀಡಲಾಗುತ್ತೆ. ಪೂಜೆಯ ಬಳಿಕ ಭಕ್ತರು ಸರತಿ ಸಾಲಲ್ಲಿ ನಿಂತು ತಿರುಪತಿ ಲಡ್ಡು ಪಡೆಯುತ್ತಾರೆ. ದರ್ಶನ ಪಡೆದ ಬಳಿಕ ಕೊಡೋ ನಂದಿನಿ ತುಪ್ಪದ ಲಡ್ಡು ವಿಶ್ವದಾದ್ಯಂತ ಪ್ರಸಿದ್ಧ. ಹಾಗೇ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನೇ ಬಳಕೆ ಮಾಡುತ್ತಿರುವುದು ವಿಶೇಷ.
ಇದನ್ನು ಓದಿ: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಬೈರಪ್ಪ ನಿಧನ ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತ
