Husband And Wife: ಪತಿ ಪತ್ನಿಯ (Husband And Wife) ಸಂಬಂಧ ಎಲ್ಲಾ ಸಂಬಂಧಗಳಿಗಿಂತ ಮೀರಿದುದಾಗಿದೆ. ಆದರೆ ಈ ಸಂಬಂಧ ನಡುವೆ ಸಂಶಯಕ್ಕೆ ಜಾಗ ನೀಡಿದರೆ ನಂತರ ನಡೆಯುವುದು ಅನಾಹುತವೇ ಸರಿ. ಹೌದು, ಇಲ್ಲೊಬ್ಬ ಸಂಶಯದ ಪತಿರಾಯ ಪತ್ನಿಯ ಮೇಲೆ ಹಲ್ಲೆ ಮಾಡಿದ ರೀತಿ ಕೇಳಿದರೆ ನಿಜಕ್ಕೂ ಕ್ರೂರವಾಗಿದೆ.
ಇವರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ನಿವಾಸಿಗಳಾಗಿದ್ದು, ಗಂಡ ಬಾಸ್ಕರ್ ಏಕಾಏಕಿ ಪತ್ನಿಯ ಮೇಲೆ ತನ್ನ ಗಂಡಸ್ತನ ತೋರಿಸಲು ಮುಂದಾಗಿದ್ದಾನೆ. ಮನೆಯಲ್ಲಿ ಇಬ್ಬರೇ ಇದ್ದ ಸಮಯವನ್ನು ನೋಡಿಕೊಂಡ ಪಾಪಿ ಪತಿರಾಯ ಬಾಸ್ಕರ ತನ್ನ ಪತ್ನಿಯ ಗುಪ್ತಾಂಗದ ಮೇಲೆ ಕ್ರಿಕೆಟ್ ಆಡುವ ವಿಕೆಟ್ ನಿಂದ ಸಿಕ್ಕಾಪಟ್ಟೆ ಹಲ್ಲೆ ನಡೆಸಿರುವ ಘೋರ ಅಮಾನವೀಯ ಘಟನೆ ನಡೆದಿದೆ.
ಸದ್ಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಬಾಸ್ಕರ, ಮೊದಲೇ ಮೆಂಟಲಿ ಅಪ್ಸೆಟ್ ಇರುತಕ್ಕಂತಹ ವ್ಯಕ್ತಿ ಆಗಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಆದ್ರೆ ಇತ್ತೀಚೆಗೆ ತನ್ನ ಹೆಂಡತಿ ಮೇಲೆ ಅನುಮಾನವೆಂಬ ಪೆಡಂಭೂತವನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದನಂತೆ. ಯಾವಾಗ ನೋಡಿದ್ರು ಹೆಂಡತಿ ಮೇಲೆ ಅನುಮಾನ ಪಡುತ್ತಾ ಮನೆಯಲ್ಲಿ ಸುಖಾ ಸುಮ್ಮನೆ ಜಗಳ ಮಾಡ್ತಿದ್ದನಂತೆ. ಇದು ಅತಿರೇಖವಾಗಿ ಇಂದು ಹೆಂಡತಿ ಮೇಲೆ ವಿಕೃತಿ ಮೆರೆದಿರೋದು ಬೆಳಕಿಗೆ ಬಂದಿದೆ.
ಸೈಕೋ ಬಾಸ್ಕರ ಮನಸೋಇಚ್ಛೆ ಅಕೆಯ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿರೋ ಪರಿಣಾಮ ಇಡೀ ಮನೆಯಲ್ಲಾ ರಕ್ತದ ಕಲೆಗಳು ಅಗಿರುವುದು ಪೊಲೀಸರು ಪರಿಶೀಲನೆ ಮಾಡುವ ವೇಳೆ ಬೆಳಕಿಗೆ ಬಂದಿದೆ.
ಘಟನೆ ನಡೆದ ಬಳಿಕ ಏನೂ ಆಗದಂತೆ ಮುಗ್ದತೆ ತೋರಲು ಮುಂದಾಗಿರುವ ಭಾಸ್ಕರ ತಾನೇ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು. ಕೂಡಲೇ ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಸೈಕೋ ಭೂಪನ ವಿರುದ್ದ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಗಂಭೀರ ಸ್ಥಿತಿಯಲ್ಲಿರುವ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: Odisha: ಮಕ್ಕಳನ್ನು ಅಡವಿಟ್ಟು ಟೊಮ್ಯಾಟೋ ಖರೀದಿಸಿದ ರೈತ ; ಆದ್ರೂ ಮೋಸ ಹೋದ ಆ ವ್ಯಾಪಾರಿ !
