Price Hike: ಬೆಲೆ ಏರಿಕೆಯಿಂದ (Price Hike)ಬೇಸತ್ತ ಜನಸಾಮಾನ್ಯರಿಗೆ ಇಲ್ಲಿದೆ ಮಹತ್ವ ಮಾಹಿತಿ. ಸದ್ಯ ಹಾಲು ಸೇರಿದಂತೆ ದಿನಸಿ ವಸ್ತುಗಳ ಜೊತೆಗೆ ಇಂದಿನಿಂದ ಮನೆ ನಿರ್ಮಾಣದ ಸಿಮೆಂಟ್, ಮರಳು, ಎಂ-ಸ್ಯಾಂಡ್ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಹೌದು, ಹಾಲು(Milk ), ದಿನಸಿ ಪ್ರದಾರ್ಥಗಳು, ಮದ್ಯ ಹಾಗೂ ಇನ್ನಿತರ ಸೇವೆಗಳ ಬೆಲೆಗಳು ವ್ಯಾಪಕವಾಗಿ ಏರಲಿವೆ. ರಾಜ್ಯದಲ್ಲಿ ಯಾವ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ ಎಂಬುದರ ಕುರಿತು ಮಾಹಿತಿ, ಅಂಕಿಅಂಶ, ವಿವರ ಇಲ್ಲಿದೆ.
ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ನಂದಿನಿಯ ಯಾವ ಯಾವ ಉತ್ಪನ್ನದ ಬೆಲೆ ಎಷ್ಟೆಷ್ಟು ಏರಲಿದೆ? ಹಾಲು ಸೇರಿದಂತೆ ಮಜ್ಜಿಗೆ ಮತ್ತು ಮೊಸರಿನ ಬೆಲೆ ಎಷ್ಟಾಗಲಿದೆ? ಬನ್ನಿ ಅದರ ಸಂಪೂರ್ಣವಾದ ಮಾಹಿತಿ ಇಲ್ಲಿ ತಿಳಿಯೋಣ.
ಟೋನ್ಡ್ ಹಾಲು (ನೀಲಿ ಪೊಟ್ಟಣ) 39 ರಿಂದ 42 ರೂ ಆಗಿದೆ.
ಹೋಮೋಜಿನೈಸ್ಡ್ ಹಾಲು 40 ರಿಂದ 43 ರೂ ಆಗಿದೆ.
ಹಸುವಿನ ಹಾಲು (ಹಸಿರು ಪೊಟ್ಟಣ) 43 ರಿಂದ 46 ರೂ ಆಗಿದೆ.
ಶುಭಂ(ಕೇಸರಿ ಪೊಟ್ಟಣ)/ಸ್ಪೆಷಲ್ ಹಾಲು 45 ರಿಂದ 48 ರೂ ಆಗಿದೆ.
ಮೊಸರು, ಪ್ರತಿ ಕೆಜಿಗೆ 47 ರಿಂದ 50 ರೂ ಆಗಿದೆ.
ಹೋಟೆಲ್‌ಗಳ ಉಪಹಾರ ದರ ಏರಿಕೆ:
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ಹೋಟೆಲ್‌ಗಳ ತಿಂಡಿ–ತಿನಿಸುಗಳ ಬೆಲೆಯನ್ನು ಶೇ 10ರಷ್ಟು ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇವತ್ತಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಇದರಿಂದಾಗಿ ಕಾಫಿ, ಚಹದ ಬೆಲೆ ಸರಾಸರಿ ₹ 15ರಿಂದ ₹ 20ಕ್ಕೆ ತಲುಪಿದೆ. ಅದೇ ರೀತಿ, ಹಲವೆಡೆ ದಕ್ಷಿಣ ಭಾರತದ ಊಟದ ಬೆಲೆಯೂ ₹ 100ರ ಗಡಿ ದಾಟಿದೆ. ಈಗ ದರ ಏರಿಕೆಯಿಂದ ಊಟದ ಬೆಲೆಯಲ್ಲಿ ₹ 10 ಹೆಚ್ಚಳವಾದರೆ, ತಿಂಡಿ ಬೆಲೆಯಲ್ಲಿ ₹ 5 ಏರಿಕೆಯಾಗಲಿದೆ. ಕಾಫಿ, ಚಹದ ಬೆಲೆ ₹ 2ರಿಂದ ₹ 3 ಹೆಚ್ಚಳವಾಗಲಿದೆ. ಸದ್ಯ ತರಕಾರಿ ಮತ್ತು ಇತರೆ ದಿನಸಿ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.
ತರಕಾರಿ ಬೆಲೆ ಹೆಚ್ಚಳ :
ಟೊಮೆಟೋ – 150 ರೂ.
ಮೆಣಸಿನಕಾಯಿ – 50 ರೂ.
ಕ್ಯಾರೆಟ್ – 50 ರೂ.
ಶುಂಠಿ – 100 ರೂ.
ಹುರಳಿಕಾಳು – 125 ರೂ.
ಬದನೆಕಾಯಿ – 60 ರೂ.
ಹುಕೋಸು – 50 ರೂ.
ಸೌತೆಕಾಯಿ – 40 ರೂ.
ಡಬ್ಬಲ್ ಬೀನ್ಸ್ – 240 ರೂ.
ಬಟಾಣಿ – 198 ರೂ.
ನುಗ್ಗೇಕಾಯಿ – 65 ರೂ.
ನವಿಲಿಕೋಸು – 80 ರೂ.
ಅವರೇಬೇಳೆ – 250 ರೂ.
ಬೆಂಡೆಕಾಯಿ – 70 ರೂ.
ಬೆಳ್ಳುಳ್ಳಿ – 150 ರೂ.
ಸಬ್ಬಕ್ಕಿ/ನುಗ್ಗೆ ಸೊಪ್ಪು – 100 ರೂ.
ಕೊತ್ತಂಬರಿ ಸೊಪ್ಪು – 90 ರೂ.
ಕೆಂಪು ಎಲೆಕೋಸು – 100 ರೂ.
ಹೆಸರು ಮೊಳಕೆ ಕಾಳು – 100 ರೂ.
ಕರಿಬೇವು – 50 ರೂ.
ಸುವರ್ಣಗಡ್ಡೆ – 75 ರೂ.
ಹಾಗಲಕಾಯಿ – 60 ರೂ.
ಮದ್ಯ ಬೆಲೆ ಏರಿಕೆ:
2023-23ರ ಕರ್ನಾಟಕ ಬಜೆಟ್‌ನಲ್ಲಿ ಅಬಕಾರಿ ಸುಂಕದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಬಿಯರ್ ಸೇರಿದಂತೆ ಮದ್ಯದ ಬೆಲೆಗಳು ಹೆಚ್ಚಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತದಲ್ಲಿ ನಿರ್ಮಿತವಾಗಿರುವ ವಿದೇಶಿ ಮದ್ಯದ (ಐಎಂಎಫ್‌ಎಲ್) ಮೇಲಿನ ಸುಂಕವನ್ನು ಎಲ್ಲಾ ಸ್ಲ್ಯಾಬ್‌ಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಮಾಡಿದ್ದಾರೆ. ಬಿಯರ್ ಮೇಲಿನ ಸುಂಕವನ್ನು ಶೇಕಡಾ ಹತ್ತರಷ್ಟು ಏರಿಕೆ ಮಾಡಿದ್ದಾರೆ.
ಅದಲ್ಲದೆ ಇಂದಿನಿಂದ ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್, ಟೈಲ್ಸ್, ಕಬ್ಬಿಣ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದೆ. ಕಬ್ಬಿಣದ ಅದಿರು, ಜಲ್ಲಿಕಲ್ಲು ಸೈಜಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು, ಕರಿಕಲ್ಲು, ಬಿಳಿಕಲ್ಲು, ಮಲ್ಟಿಕಲ ಗ್ರಾನೈಟ್, ಡೋಲೋಮೈಟ್, ಸಿಲಿಕಾ, ಅಲಂಕಾರಿಕ ಶಿಲೆ ಇತ್ಯಾದಿ ಖನಿಜಗಳ ಮೇಲೆ ರಾಯಲ್ಟಿ ಹೆಚ್ಚಿಸುವ ಮೂಲಕ ಇಲಾಖೆಗೆ ಹೊಸ ರಾಜಸ್ವ ಗುರಿ ನಿಗದಿಪಡಿಸಲು ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಜಲ್ಲಿಕಲ್ಲು, ಸೈಜಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು ಸೇರಿ ನಿರ್ಮಾಣ ವಸ್ತುಗಳ ಬೆಲೆ ಏರಿಕೆ ಮಾಡಿದಲ್ಲಿ, ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಖಾಸಗಿ, ಸರ್ಕಾರಿ ಕಾಮಗಾರಿಗಳು, ಮನೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನು ಓದಿ: Pill For Heart Disease: ಹೃದಯ ರೋಗ ತಡೆಗೆ ಬಂದೇ ಬಿಡ್ತು ಒಂದೇ ಒಂದು ಮಾತ್ರೆ !
