Home » Child Death: ಉಡುಪಿಯಲ್ಲಿ ನೀರಿನ ಹೊಂಡಕ್ಕೆ ಬಿದ್ದು 3 ವರ್ಷದ ಬಾಲಕಿ ಸಾವು ; ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವು !

Child Death: ಉಡುಪಿಯಲ್ಲಿ ನೀರಿನ ಹೊಂಡಕ್ಕೆ ಬಿದ್ದು 3 ವರ್ಷದ ಬಾಲಕಿ ಸಾವು ; ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವು !

0 comments
Child death

Child Death: ನೀರಿನ ಹೊಂಡಕ್ಕೆ ಬಿದ್ದು 3 ವರ್ಷದ ಬಾಲಕಿ ಸಾವು :

ಉಡುಪಿ (Udupi) ಜಿಲ್ಲೆಯ ಹೆಬ್ರಿ (Hebri) ತಾಲೂಕಿನ ನಾಲ್ಕೂರು ಗ್ರಾಮದ ಕಕ್ಕೆ ಅರಮನೆ ಜೆಡ್ಡು ಸಮೀಪದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ (child death) ಆಘಾತಕಾರಿ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಕೃತಿಕಾ (3ವ.) ಎಂದು ಗುರುತಿಸಲಾಗಿದೆ.

ಕೃತಿಕಾ ಆಗಸ್ಟ್ 1 ರಂದು ರಾತ್ರಿಯ ವೇಳೆ ಅಜ್ಜಿ ಮಂಜುಳಾ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಾತ್ ಆಗಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಿದ್ದಿದ್ದಾಳೆ. ಘಟನೆ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ. ಸದ್ಯ ಮಗಳನ್ನು ಅಗಲಿದ ಪೋಷಕರು ಕಂಬನಿ ಮಿಡಿದಿದ್ದು, ಘಟನೆ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವು :

ಮೊಬೈಲ್ ಚಾರ್ಜರ್​​ (mobile charger) ವೈರ್​ನಿಂದ ವಿದ್ಯುತ್​ ಪ್ರವಹಿಸಿ​ 8 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ (Uttar kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ. ಸಂಜನಾ ದಂಪತಿಯ ಮಗು ದುರಂತದಿಂದ ಸಾವನ್ನಪ್ಪಿದೆ.

ಪೋಷಕರು ಮೊಬೈಲ್​ ಅನ್ನು ಚಾರ್ಜ್​ಗೆ ಇಟ್ಟಿದ್ದು, ನಂತರ ಮೊಬೈಲ್ ತೆಗೆದುಕೊಂಡು ಹೋದವರು ಸ್ವಿಚ್ ಆಫ್ ಮಾಡದೆ ಚಾರ್ಜರ್ ಅಲ್ಲೇ ಬಿಟ್ಟಿದ್ದರು. 8 ತಿಂಗಳ ಮಗು ಆನ್​ ಇದ್ದ ಚಾರ್ಜರ್​ನ್ನು​ ಬಾಯಿಗೆ ಹಾಕಿದೆ. ತಕ್ಷಣ ಮಗುವಿಗೆ ಶಾಕ್ ಹೊಡೆದಿದ್ದು, ಘಟನೆ ಪರಿಣಾಮ ಮಗು ಮೃತಪಟ್ಟಿದೆ.

ಇದನ್ನೂ ಓದಿ: Bengaluru: ಕ್ಯಾಬ್ ನಲ್ಲಿ ಹೋಗುತ್ತಿದ್ದಾಗ ಮಹಿಳೆಯ ಮಾತನ್ನು ಕದ್ದು ಕೇಳಿದ ಡ್ರೈವರ್ ; ಅಂತದ್ದು ಏನು ನಡೆದಿತ್ತು ಗುಸು ಗುಸು !

You may also like