Home » Chetan Ahimsa: ಸೌಜನ್ಯ ಸಪೋರ್ಟ್ ಗೆ 3 ನೇ ನಟ ; ಧರ್ಮಸ್ಥಳದ ಶಕ್ತಿಗಳು ಮೌನ ಆಗಿರೋದ್ಯಾಕೆ ಎಂದು ಪ್ರಶ್ನಿಸಿದ ಚೇತನ್ !

Chetan Ahimsa: ಸೌಜನ್ಯ ಸಪೋರ್ಟ್ ಗೆ 3 ನೇ ನಟ ; ಧರ್ಮಸ್ಥಳದ ಶಕ್ತಿಗಳು ಮೌನ ಆಗಿರೋದ್ಯಾಕೆ ಎಂದು ಪ್ರಶ್ನಿಸಿದ ಚೇತನ್ !

0 comments

Chetan Ahimsa: ನಟ ಚೇತನ್ (Chetan Ahimsa) ಒಂದೆರಡಲ್ಲ ಸಾಕಷ್ಟು ವಿವಾದಾತ್ಮಕ ಹೇಳಿಕೆ ಹುಟ್ಟುಹಾಕಿ ಪ್ರತಿಸಲ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಏನೇ ಸುದ್ಧಿ ಹರಿದಾಡಿದರೂ ಅದಕ್ಕೆ ನಟ ಚೇತನ್ ಪ್ರತಿಕ್ರಿಯೆ ಇದ್ದೆ ಇರುತ್ತದೆ. ಇದೀಗ ನಟ ಚೇತನ್ ಅಹಿಂಸಾ ಧರ್ಮಸ್ಥಳದ (Dharmastala) ಸೌಜನ್ಯ (Sowjanya) ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದಾರೆ. ಸೌಜನ್ಯ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ನಟರಲ್ಲಿ ಇವರು ಮೂರನೆಯವರು.

ಹೌದು, ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ (dunia Vijay) ಕೂಡ ಈ ಪ್ರಕರಣದ ಕುರಿತು ಮೌನ ಮುರಿದಿದ್ದು, ಈ ಕೇಸ್ ನಲ್ಲಿ ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳಕ್ಕೆ ಹೋಗುವುದಿಲ್ಲ, ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಬಹುಭಾಷಾ ನಟ ಕಿಶೋರ್ (Actor Kishore)​ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿ ಬೇಸರ ಹೊರಹಾಕಿದ್ದರು. ಇದೀಗ ನಟ ಚೇತನ್ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಧರ್ಮಸ್ಥಳದ ಶಕ್ತಿಗಳು ಮೌನ ಆಗಿರೋದ್ಯಾಕೆ ಎಂದು ಚೇತನ್ ಪ್ರಶ್ನಿಸಿದ್ದಾರೆ.

“ದೇಗುಲ ಪಟ್ಟಣವಾದ ಧರ್ಮಸ್ಥಳದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯಳ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿ 11 ವರ್ಷಗಳೇ ಕಳೆದರೂ, ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ. ಪೊಲೀಸರು, ವೈದ್ಯರು, ವ್ಯವಸ್ಥೆಯ ತನಿಖೆಯಲ್ಲಿನ ವೈಫಲ್ಯಗಳನ್ನು ಕುಟುಂಬ ಮತ್ತು ಕಾರ್ಯಕರ್ತರು ಬಹಿರಂಗಪಡಿಸಿದ್ದಾರೆ. ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ? ಅವರು ಅಪರಾಧದಲ್ಲಿ ತಮ್ಮದೆ ಆದ ಪಾಲ್ಗೊಳ್ಳುವಿಕೆಯನ್ನು ಮರೆಮಾಡುತ್ತಿದ್ದಾರಾ? ಮರೆಮಾಡುತ್ತಾರೆಯೇ?” ಎಂದು ಚೇತನ್‌ ಪ್ರಶ್ನೆ ಮಾಡಿದ್ದಾರೆ.

ಸದ್ಯ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೋರಾಟದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಘಟನೆಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ, ಪ್ರತಿಭಟಿಸುತ್ತಿವೆ. ಸಾಲು ಸಾಲು ಸಂಘಟನೆಗಳು ಮುಖ್ಯಮಂತ್ರಿಯತ್ತ ಮನವಿ ಪತ್ರವನ್ನು ಒಯ್ಯುತ್ತಿದ್ದು, ಪ್ರಕರಣದ ಮರು ತನಿಖೆಗೆ ಒತ್ತಾಯಿಸುತ್ತಿವೆ. ಇದೀಗ ನಟ ಚೇತನ್ ಹೇಳಿಕೆ ಇನ್ನಷ್ಟು ಸಂಚಲನ ಮೂಡಿಸಿದೆ.

ಇದನ್ನೂ ಓದಿ: Dharmasthala Sowjanya: ಪೂಂಜಾ ಮೇಲೆ ಭರವಸೆ ಇಲ್ಲ; ನಾವು ಚಿಕ್ಕ ತೋಡು, ಅದು ಮಹಾ ಸಮುದ್ರ – ಆದರೂ ನಾವು ಈಜುತ್ತೇವೆ ಎಂದ ಸೌಜನ್ಯಾ ತಾಯಿ !

You may also like