Home » Gruha Jyothi Scheme: ಫ್ರೀ ವಿದ್ಯುತ್​ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಹೈ ವೋಲ್ಟೇಜ್ ಶಾಕ್, ಬಂದೇ ಬಿಡ್ತು ಬಿಲ್ಲು !

Gruha Jyothi Scheme: ಫ್ರೀ ವಿದ್ಯುತ್​ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಹೈ ವೋಲ್ಟೇಜ್ ಶಾಕ್, ಬಂದೇ ಬಿಡ್ತು ಬಿಲ್ಲು !

0 comments
Gruha Jyothi Scheme

Gruha Jyothi Scheme: ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡಿದಾಗಿನಿಂದ ಕೆಲವು ಫಲಾನುಭವಿಗಳು ಉಚಿತ ಕರೆಂಟ್ ಅಂತ ಇಷ್ಟ ಬಂದಂತೆ ವಿದ್ಯುತ್ ಬಳಕೆ ಮಾಡಿದ್ದು, ಜುಲೈ ತಿಂಗಳ ಬಿಲ್ ಶೂನ್ಯ ಅಂದವರಿಗೆ 200 ಯೂನಿಟ್ ಹೆಚ್ಚುವರಿ ಬಿಲ್ ನ್ನು ಬೆಸ್ಕಾಂ ಸಿಬ್ಬಂದಿ ನೀಡಿದ್ದಾರೆ.

ಸದ್ಯ ಕರ್ನಾಟಕದಲ್ಲಿ (Karnataka) ಗೃಹ ಜ್ಯೋತಿ ಯೋಜನೆ (Gruha Jyothi Scheme) ಕೆಲವೇ ದಿನಗಳ ಹಿಂದೆ ಅನುಷ್ಠಾನಗೊಂಡಿದ್ದು, ಇದೀಗ ಕೆಲ ಗ್ರಾಹಕರು ವಿದ್ಯುತ್ ಬಿಲ್ ನೋಡಿ ಗ್ರಾಹಕರು ಆಕ್ರೋಶಗೊಂಡಿದ್ದಾರೆ.

ಬಹುತೇಕ ಫಲಾನುಭವಿಗಳು ಫ್ರೀ ಬಿಲ್ ನಿರೀಕ್ಷೆಯಲ್ಲಿದ್ದರು. ಆದ್ರೆ ಕೆಲವರಿಗೆ ಮಾತ್ರ ಬೆಸ್ಕಾಂ ಸಿಬ್ಬಂದಿ ಬಿಲ್ ಕೈಗಿಟ್ಟಿದ್ದು ಶಾಕ್ ಆಗಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡಿದಾಗಿನಿಂದ ಕೆಲವು ಫಲಾನುಭವಿಗಳು ಉಚಿತ ಕರೆಂಟ್ ಅಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದ್ದು, ಜುಲೈ ತಿಂಗಳ ಬಿಲ್ ಶೂನ್ಯ ಅಂದವರಿಗೆ 200 ಯೂನಿಟ್ ಹೆಚ್ಚುವರಿ ಬಿಲ್ ಬೆಸ್ಕಾಂ ಸಿಬ್ಬಂದಿ ಕೈಗಿಟ್ಟಿದ್ದಾರೆ. ಸರ್ಕಾರದ 200 ಯೂನಿಟ್ ಗಿಂತ ಹೆಚ್ಚಾಗಿ ಯೂನಿಟ್ ಬಳಕೆ ಹಿನ್ನಲೆ ಬಿಲ್ ನೀಡಿದ್ದು, ಈಗ ಫಲಾನುಭವಿಗಳು ಮಾತ್ರ ನಾವು ಅಷ್ಟು ಬಳಸೇ ಇಲ್ಲ ಮೀಟರ್ ಸರಿ ಇಲ್ಲ ಎಂದು ತಗಾದೆ ಶುರುಮಾಡಿಕೊಂಡಿದ್ದಾರೆ.

ಕೆಲ ಫಲಾನುಭವಿಗಳು ನಮ್ಮ ಮೀಟರ್ ಸರಿ ಇಲ್ಲ. ಹೀಗಾಗಿ, ನಮಗೆ 200 ಯೂನಿಟ್​ಗಿಂತ ಜಾಸ್ತಿ ಬಿಲ್ ಬಂದಿದೆ ಅಂತಿದ್ದಾರೆ. ಜಿರೊ ಬಿಲ್ ಬದಲಾಗಿ ನಮಗೆ ಬಿಲ್ ಬಂದಿದೆ ಎಂದು ಕೆಲವು ಗ್ರಾಹಕರು ಹೊಸ ವರಸೆ ಶುರು ಮಾಡಿದ್ದಾರೆ.

ಈಗಾಗಲೇ ಯೋಜನೆ ಪ್ರಕಾರ ಸರ್ಕಾರ ಗೃಹ ಜ್ಯೋತಿ ಸ್ಕೀಂನಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಸರಾಸರಿಯ ಮಾನದಂಡ ಫಿಕ್ಸ್ ಮಾಡಿದೆ. ಸರಾಸರಿ ಬಳಕೆಗೆ ಶೇ.10 ಪರ್ಸೆಂಟ್ ಹೆಚ್ಚುವರಿಗೆ ಜಿರೊ ಬಿಲ್ ನೀಡುತ್ತಿದೆ.

ಸರಾಸರಿಗಿಂತ ಹೆಚ್ಚು ಬಳಕೆದಾರರಿಗೆ ಯೂನಿಟ್ ಗೆ 7 ರೂನಂತೆ ದರ ಚಾರ್ಚ್ ಮಾಡುತ್ತಿದೆ. ಆದ್ರೆ, 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುವವರಿಗೆ ಸಂಪೂರ್ಣ ಬಿಲ್ ನೀಡಲಾಗುತ್ತಿದೆ. ಆದ್ರೆ ಕೆಲವು ಗ್ರಾಹಕರು ಉಚಿತ್ ವಿದ್ಯುತ್ ಬೆನ್ನಲ್ಲೇ ಕಳೆದ ತಿಂಗಳು ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದು 200 ಯೂನಿಟ್ ಕ್ರಾಸ್ ಮಾಡಿದ್ದಾರೆ. ಸರಾಸರಿ ಟಾರ್ಗೆಟ್ ದಾಟಿ 50 ರಿಂದ 70 ಯೂನಿಟ್ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಈಗ ಬಿಲ್ ಬರುತ್ತಿದ್ದಂತೆ ಗೃಹ ಜ್ಯೋತಿ ಉಚಿತ ಸ್ಕೀಂ ಸಿಕ್ಕಿಲ್ಲ ನಾವು ವಿದ್ಯುತ್ ಬಳಸೇ ಇಲ್ಲ. ನಮಗೆ ಸಂಪೂರ್ಣ 200 ಯೂನಿಟ್ ಬಿಲ್ ಬಂದಿದೆ ಅಂತಿದ್ದಾರೆ.

ಸದ್ಯ ಈ ಬಗ್ಗೆ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ನೀಡಿದ್ದು, ಗೃಹ ಜ್ಯೋತಿ ಯೋಜನೆಯ ನೋಂದಣಿಯನ್ನು ಜುಲೈ 1 ರಂದು ಪ್ರಾರಂಭಿಸಲಾಗಿದ್ದು, ಜುಲೈ 27 ರವರೆಗೆ ನೋಂದಾಯಿಸಿಕೊಂಡವರು ಜುಲೈ ತಿಂಗಳಲ್ಲಿ ಸರಾಸರಿ ಮಿತಿಯ ಒಳಗೆ ವಿದ್ಯುತ್ ಬಳಸಿದ್ದರೆ ಅವರಿಗೆ ‘ಶೂನ್ಯ’ ಬಿಲ್ ಬರಲಿದೆ. ಜುಲೈ 27ರ ನಂತರ ನೋಂದಾಯಿಸಿಕೊಂಡವರನ್ನು ಆಗಸ್ಟ್ ಬಿಲ್ಲಿಂಗ್​ಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Aadhaar – Pan card Link: ಆಧಾರ್ – ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಸುದ್ದಿ ; ಸರ್ಕಾರ ಕೊಟ್ಟಿದೆ ಫ್ರೆಶ್ ಸ್ಪಷ್ಟನೆ ! 

You may also like