Indian women: ಭಾರತೀಯ ಮಹಿಳೆ (Indian women) ಕೆನಡಾದಲ್ಲಿ
ಓದುತ್ತಿದ್ದು, ‘ಭಾರತವನ್ನು ತೊರೆದು ಕೆನಡಾಕ್ಕೆ ಹೋಗುವುದು ನನ್ನ ಕನಸು’ ಎಂದು ಹೇಳುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ತನ್ನ ಹೆಸರು ಏಕ್ತಾ ಎಂದು ಹೇಳಿರುವ ವಿದ್ಯಾರ್ಥಿನಿ ವಿಡಿಯೋದಲ್ಲಿ ‘ಭಾರತ ತೊರೆಯುವುದು ತನ್ನ ಕನಸು’ ಎಂದು ಹೇಳಿರುವುದು ಎಲ್ಲೆಡೆ ವೈರಲ್ ಆಗಿದೆ.
ಅದಲ್ಲದೆ ಕೆನಡಾದಲ್ಲಿ ವಾಸಿಸುವ ತನ್ನ ನೆಚ್ಚಿನ ವಿಷಯವೆಂದರೆ ‘ಇಲ್ಲಿನ ಪರಿಸರ, ಸೂರ್ಯೋದಯ ಮತ್ತು ಸೂರ್ಯಾಸ್ತ’ವನ್ನು ಆನಂದಿಸುವುದು ಎಂದು ಮಹಿಳೆ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
ಈ ಕುರಿತು ಟ್ರೂ ಕಾಲರ್ (Truecaller) ಸಿಐಒ ಅಲನ್ ಮಮೆಡಿ ಆಕೆಗೆ ಬೆಂಬಲ ನೀಡಿದ್ದಾರೆ. `ಹೊರಗಿನ ಪ್ರಪಂಚಕ್ಕೆ ಕಿವಿಗೊಡಬೇಡಿ. ನೀವು ಅಧ್ಯಯನ ಪೂರ್ಣಗೊಳಿಸಿದ ನಂತರ ವಿಶ್ವದಾದ್ಯಂತ ಯಾವುದೇ ಟ್ರೂ ಕಾಲರ್ ಕಚೇರಿಯಲ್ಲಿ ಕೆಲಸ ಮಾಡಲು ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಇಂಟರ್ನೆಟ್‌ನಲ್ಲಿರುವ ಅನೇಕ ವ್ಯಕ್ತಿಗಳು ಏಕ್ತಾ ಅವರ ದೃಷ್ಟಿಕೋನದಿಂದ ಮನನೊಂದಿದ್ದು ಅಲ್ಲದೇ, ಟ್ವಿಟರ್‌ನಲ್ಲಿ ಗಮನಾರ್ಹ ಸಂಖ್ಯೆಯ ವ್ಯಕ್ತಿಗಳು ಅವರನ್ನು ಟೀಕಿಸುತ್ತಿದ್ದಾರೆ.
https://twitter.com/AlanMamedi/status/1687075637423464448?ref_src=twsrc%5Etfw%7Ctwcamp%5Etweetembed%7Ctwterm%5E1687075637423464448%7Ctwgr%5E0dccfc460830783871ea4007d89628bee5ece544%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-dh71ad7b0a01d347d2a0a68e5f262fdb7d%2Fbhaaratatoreyuvudenannakanasuendavaligetruecallersiiobembalanettigarindhafulklaaswatchvideo-newsid-n524859180




ಇದನ್ನು ಓದಿ: Heart attack: ವಾರದ 7 ದಿನಗಳಲ್ಲಿ ಈ ದಿನ ಮಾತ್ರ ಅತ್ಯಂತ ಹೆಚ್ಚು ಹೃದಯಾಘಾತ, ಶಾಕಿಂಗ್ ಸತ್ಯ ಬಹಿರಂಗ ಏನಿದು ಬ್ಲೂ ಡೇ ?
