Home » Crocodile Attack: ಈಜಲು ನದಿಗಿಳಿದ ಫುಟ್ ಬಾಲ್ ಆಟಗಾರ ಮೊಸಳೆ ದಾಳಿಗೆ ಬಲಿ

Crocodile Attack: ಈಜಲು ನದಿಗಿಳಿದ ಫುಟ್ ಬಾಲ್ ಆಟಗಾರ ಮೊಸಳೆ ದಾಳಿಗೆ ಬಲಿ

0 comments
Crocodile Attack

Crocodile Attack: ಯಾವುದೇ ಜೀವಿ ಆಗಿರಲಿ ನೀರಿಗಿಳಿದ ಮೇಲೆ ಮೊಸಳೆ ತನ್ನ ಬೇಟೆಯನ್ನು ಮಾಡದೇ ಬಿಡುವುದಿಲ್ಲ. ಅಂತೆಯೇ ನದಿಯಲ್ಲಿ ಈಜಲು ಇಳಿದ ಫುಟ್‌ಬಾಲ್‌ ಆಟಗಾರನನ್ನು ಬೇಟೆಯಾಡಿ, ಆತನನ್ನು ಮೊಸಳೆ ಕೊಂದು (Crocodile Attack) ಹಾಕಿರುವ ಭಯಾನಕ ಘಟನೆ ನಡೆದಿದೆ.

ರಾಜಧಾನಿ ಸ್ಯಾನ್ ಜೋಸ್‌ನಿಂದ 140 ಮೈಲುಗಳಷ್ಟು ದೂರದಲ್ಲಿ ಗ್ವಾನಾಕಾಸ್ಟ್ ಪ್ರಾಂತ್ಯದ ಸಾಂಟಾ ಕ್ರೂಜ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, 29 ವರ್ಷದ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್ ಮೃತ ಪಟ್ಟಿರುವ ವ್ಯಕ್ತಿಯಾಗಿದ್ದಾರೆ. ಸದ್ಯ ಲೋಪೆಜ್‌ ರ ಮೃತದೇಹವನ್ನು ಮೊಸಳೆ ಬಾಯಲ್ಲಿ ಕಚ್ಚಿ ಎಳೆದುಕೊಂಡು ಈಜುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಸ್ವಯಂಪ್ರೇರಿತವಾಗಿ ಕೆನಸ್ ನದಿಗೆ ಹಾರಿದ ನಂತರ ಮೊಸಳೆ ಆಕ್ರಮಣ (Crocodile Attack) ಮಾಡಿದೆ. ಇದನ್ನು ಗಮನಿಸಿ ಸ್ಥಳೀಯರು ಮೊಸಳೆಯನ್ನು ಬೆನ್ನಟ್ಟಿ ಹೋಗಿದ್ದರಾದರೂ ಅಷ್ಟಕ್ಕಾಗಲೇ ಲೋಪೆಜ್‌ ಕೊನೆಯುಸಿರೆಳೆದಿದ್ದರು. ಸದ್ಯ ಮೊಸಳೆಯನ್ನು ಗುಂಡಿಕ್ಕಿ ಸಾಯಿಸಿದ ಸ್ಥಳೀಯರು ಮೃತದೇಹವನ್ನು ದಡಕ್ಕೆ ತಂದಿದ್ದಾರೆ.

ಇನ್ನು ಡಿಪೋರ್ಟಿವೊ ರಿಯೊ ಕ್ಯಾನಾಸ್ ತಂಡದ ಫುಟ್ಬಾಲ್ ಆಟಗಾರರಾಗಿರುವ ಲೋಪೆಜ್ ರಿಗೆ ಎಂಟು ಮತ್ತು ಮೂರು ವರ್ಷದ ಇಬ್ಬರು ಮಕ್ಕಳಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿದ್ದ ಲೋಪೆಜ್‌ ಕುಟುಂಬ ಆಟಗಾರನ ಅಂತ್ಯಕ್ರಿಯೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದು, ಅವರ ಫುಟ್‌ಬಾಲ್ ತಂಡದ ಮ್ಯಾನೇಜರ್ ಲೂಯಿಸ್ ಕಾರ್ಲೋಸ್ ಮಾಂಟೆಸ್ ಅವರು ಲೋಪೆಜ್‌ ಕುಟುಂಬಕ್ಕಾಗಿ ನಿಧಿ ಸಂಗ್ರಹವನ್ನು ಮಾಡಿ, ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ.

ಸದ್ಯ “ಚುಚೋ” ಎಂದೂ ಕರೆಯಲ್ಪಡುವ ಒರ್ಟಿಜ್, ಹವ್ಯಾಸಿ ಫುಟ್‌ಬಾಲ್ ಕ್ಲಬ್ ಡಿಪೋರ್ಟಿವೊ ರಿಯೊ ಕ್ಯಾನಸ್‌ನ ಮರಣವನ್ನು ಕ್ಲಬ್ ಫೇಸ್‌ಬುಕ್‌ನಲ್ಲಿ ಹೇಳಿಕೆಯಲ್ಲಿ ಖಚಿತಪಡಿಸಿದೆ.

https://twitter.com/fjmilhome/status/1687445921880031232?ref_src=twsrc%5Etfw%7Ctwcamp%5Etweetembed%7Ctwterm%5E1687445921880031232%7Ctwgr%5E71d3bd07aebc1406cd766c4e74c21bfde469423f%7Ctwcon%5Es1_c10&ref_url=https%3A%2F%2Fd-7515625852232105220.ampproject.net%2F2307212240000%2Fframe.html

ಇದನ್ನೂ ಓದಿ: ಯುವಕ ಯುವತಿಯರಿಗೆ ಬಂಪರ್ ಸುದ್ದಿ: ಇನ್ನು PUC ಮುಗಿಯೋ ವಯಸ್ಸಲ್ಲಿ MLA – MP ಆಗ್ಬೋದು !

You may also like