Liquor Price: ಹೆಣ್ಣು, ಹೊನ್ನು, ಮಣ್ಣು ಇದೆಲ್ಲಕ್ಕಿಂತ ಮದ್ಯಪ್ರಿಯರು ಮದ್ಯವನ್ನೇ ಹೆಚ್ಚು ಇಷ್ಟಪಡುತ್ತಾರೆ. ಹೌದು, ಮದ್ಯಪ್ರಿಯರು ಸಾರಾಯಿ ಶೀಷೆಯಲ್ಲಿ ನನ್ನ ದೇವಿ ಕಾಣುವಳು ಅಂತಾ ಜೊತೆಗೆ ಹಾಡು ಹಾಡಿಕೊಂಡು ಕುಡಿಯೋರೆ ಹೆಚ್ಚು. ಇದೀಗ ಈ ಸುದ್ದಿ ಕೇಳಿದರೆ ಮದ್ಯಪ್ರಿಯರು ಖುಷಿ ಹೆಚ್ಚಾಗಿ ಎಕ್ಸ್ಟ್ರಾ ಒಂದು ಪೆಗ್ ಕುಡಿಯೋದು ಪಕ್ಕಾ! ಯಾಕೆ ಅಂತೀರಾ ಬನ್ನಿ ನೋಡೋಣ.
ಈಗಾಗಲೇ ಬೆಲೆ ಏರಿಕೆಯಿಂದ (Liquor Price) ಮದ್ಯ ಪ್ರಿಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಲೆ ಏರಿಕೆ ನಡುವೆ ಸುಸ್ತಾಗಿರುವ ಮದ್ಯಪ್ರಿಯರು ತಮ್ಮ ಮೇಲಾಗುತ್ತಿರುವ ಬೆಲೆ ದೌರ್ಜನ್ಯ ಖಂಡಿಸಿ ಅಬಕಾರಿ ಇಲಾಖೆ ಮೊರೆ ಹೋಗಿದ್ದಾರೆ.
ಇದೀಗ ಮದ್ಯ ಪ್ರಿಯರ ಮನವಿಗೆ ಸ್ಪಂದಿಸಿರುವ ಅಬಕಾರಿ ಇಲಾಖೆ, ಹೆಚ್ಚು ಹಣ ಪಡೆಯುವ ಬಾರ್ಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಅನೇಕ ಬಾರ್ ಮಾಲೀಕರು ಸರ್ಕಾರದ ಹೆಸರಲ್ಲಿ ಮದ್ಯಪ್ರಿಯರಿಂದ ಮನಬಂದಂತೆ ಹಣ ಪಡೆದುಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಶೇ.20ರಷ್ಟು ಅಬಕಾರಿ ಶುಲ್ಕಕ್ಕೆ ಹೆಚ್ಚುವರಿ 40-45% ಬಾರ್ ಮಾಲೀಕರು ಹಣ ಪಡೆಯುತ್ತಿದ್ದಾರೆ ಎಂದು ಮದ್ಯಪ್ರಿಯರು ಆರೋಪಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಇನ್ನು ಮುಂದೆ ಬ್ರೇಕ್ ಬೀಳಲಿದೆ.
ಹೌದು, ಮಾಲೀಕರು,ಪ್ರತಿ ಮದ್ಯದ ದರಕ್ಕಿಂತ 60-70 ರೂ. ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಹೆಚ್ಚುವರಿ ಹಣ ಕೇಳುತ್ತಿರುವ ಬಾರ್ಗಳ ವಿರುದ್ಧ ಅಬಕಾರಿ ಇಲಾಖೆಗೆ ಸಾಲು ಸಾಲು ದೂರುಗಳು ಬಂದಿವೆ. ದೂರುಗಳ ಬಂದ ಹಿನ್ನೆಲೆ ಹಣ ವಸೂಲಿ ಮಾಡುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡಲು ಅಬಕಾರಿ ಇಲಾಖೆ ತಂಡ ರಚನೆ ಮಾಡಿದೆ. ಹೆಚ್ಚುವರಿ ಹಣ ಪಡೆಯುವ ಬಾರ್ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾರುವೇಷದಲ್ಲಿ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಚ್ಚುವರಿ ಹಣ ಪಡೆಯೋದು ಸಾಬೀತಾದ್ರೆ ಲೈಸೆನ್ಸ್ ರದ್ದಾಗಲಿದೆ ಎಂದು ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ.
ಅಬಕಾರಿ ಕಮಿಷನರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುತ್ತಿದೆ. ಒಂದು ವೇಳೆ ತನಿಖೆ ವೇಳೆ ಸಿಕ್ಕರೆ ನಿಮ್ಮ ಬಾರ್ ಲೈಸನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಅಬಕಾರಿ ಇಲಾಖೆಯ ಆಯುಕ್ತರಾದ ನಾಗರಾಜಪ್ಪ ಹೇಳಿದ್ದಾರೆ.
ದೂರು ಕೇಳಿ ಬಂದಿರುವ ಬಾರ್ಗಳ ಮೇಲೆ ಶೀಘ್ರದಲ್ಲಿ ದಾಳಿ ನಡೆಯುವ ಸಾಧ್ಯತೆಗಳಿವೆ. ಈ ಸುದ್ದಿಯನ್ನು ಕೇಳಿದ ಮದ್ಯಪ್ರಿಯರು ಖುಷಿ ಪಡೆಯದೇ ಇರಲು ಸಾಧ್ಯವಿಲ್ಲ.
ಇದನ್ನೂ ಓದಿ: Gruhajyothi Scheme: ಇನ್ನೂ ಬೆಳಗದ ಗೃಹಜ್ಯೋತಿ: ನೋಂದಣಿ ಆಗಿದ್ರೂ ಬಿಲ್ ಬಂದ್ರೆ ಏನು ಮಾಡ್ಬೇಕು ?
