Udupi Toilet Video: ಉಡುಪಿ: ಕಾಲೇಜೊಂದರಲ್ಲಿ ಟಾಯ್ಲೆಟ್‌ನಲ್ಲಿ (Udupi Toilet Video) ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯ ದೃಶ್ಯ ಸೆರೆ ಹಿಡಿದಿರುವ ಘಟನೆಯೊಂದು ಬಹಳ ರೋಚಕ ತಿರುವುಗಳನ್ನು ಪಡೆದಿತ್ತು. ಇದೀಗ ಆರೋಪ ಹೊತ್ತಿರುವ ಅದೇ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಸ್ಫೋಟಕ ವಿಷಯವನ್ನು ಬಹಿರಂಗ ಪಡಿಸಿದ್ದು, ತನಿಖೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನಾವು ತಮಾಷೆಗಾಗಿ ವೀಡಿಯೋ ಮಾಡಿದ್ದಾಗಿ, ನಂತರ ವೀಡಿಯೋ ಡಿಲೀಟ್ ಮಾಡಿದ್ದಾಗಿಯೂ, ನಾವು ಉದ್ದೇಶಪೂರ್ವಕವಾಗಿ ಈ ರೀತಿ ವೀಡಿಯೋ ಮಾಡಿಲ್ಲ. ಬೇರೊಬ್ಬ ವಿದ್ಯಾರ್ಥಿನಿಯ ವೀಡಿಯೋ ಮಾಡಲು ಹೋಗಿ ಇನ್ನೊಬ್ಬ ವಿದ್ಯಾರ್ಥಿನಿಯ ವೀಡಿಯೋ ಮಾಡಿದ್ದೇವೆ. ಅದು ಗೊತ್ತಾದ ಕೂಡಲೇ ಡಿಲೀಟ್ ಮಾಡಿದ್ದಾಗಿಯೂ, ವೀಡಿಯೋ ರಿಟ್ರೈವ್ ಮಾಡಿದರೆ ಎಲ್ಲವೂ ಗೊತ್ತಾಗುತ್ತದೆ ಎಂದು ವಿದ್ಯಾರ್ಥಿನಿಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿಯ ನೇತ್ರಜ್ಯೋತಿ ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ಜು.18 ರಂದು ಈ ಟಾಯ್ಲೆಟ್‌ನಲ್ಲಿ ವೀಡಿಯೋ ರೆಕಾರ್ಡ್ ಘಟನೆ ನಡೆದಿದ್ದು, ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರನ್ನು ಆಗಲೇ ಅಮಾನತು ಮಾಡಿತ್ತು. ಈ ಕುರಿತು ಯಾವುದೇ ಪ್ರಕರಣ ದಾಖಲು ಮಾಡಿರಲಿಲ್ಲ. ಆದರೆ ಈ ಘಟನೆ ಕುರಿತು ಯಾವಾಗ ಚರ್ಚೆ ಪ್ರಾರಂಭವಾಯಿತೋ, ಪ್ರತಿಭಟನೆಗಳು ನಡೆಯಿತೋ ಆವಾಗ ಪೊಲೀಸರು ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿ ಪ್ರಕರಣವನ್ನು ದಾಖಲಿಸಿದ್ದರು.
ಇದನ್ನೂ ಓದಿ: Mobile App: IRCTCಯಿಂದ ಮತ್ತೊಮ್ಮೆ ಅಲರ್ಟ್ ಸಂದೇಶ; ಈ ʼತಪ್ಪುʼ ಖಂಡಿತಾ ಮಾಡಬೇಡಿ!!!
