Home » Jio Independence Day offer: ಜಿಯೋ ಬಳಕೆದಾರರಿಗೆ ದಿಲ್ ಖುಷ್ ಆಗೋ ಸುದ್ದಿ! ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಬಂಪರ್ ಆಫರ್ ನೀಡಿದ ಸಂಸ್ಥೆ!!!

Jio Independence Day offer: ಜಿಯೋ ಬಳಕೆದಾರರಿಗೆ ದಿಲ್ ಖುಷ್ ಆಗೋ ಸುದ್ದಿ! ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಬಂಪರ್ ಆಫರ್ ನೀಡಿದ ಸಂಸ್ಥೆ!!!

0 comments
Jio Independence Day offer

JIO Independence Day Offer: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ (Jio Recharge Plan) ಆಯ್ಕೆಗಳನ್ನೂ ನೀಡುತ್ತಿದೆ.

ಇದೀಗ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್’ನ್ಯೂಸ್ ನೀಡಿದೆ. ಹೌದು, ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಧಮಾಕ ಆಫರ್ ನೀಡಿದೆ. ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಬಂಪರ್ ಪ್ಲಾನ್ (JIO Independence Day Offer) ಬಿಡುಗಡೆಯಾಗಿದೆ. ಯಾವೆಲ್ಲಾ ರೀಚಾರ್ಜ್ ಪ್ಲ್ಯಾನ್ ಇದೆ ಹಾಗೂ ರೀಚಾರ್ಜ್ ಯೋಜನೆಯ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

2,999 ರೂ. ರೀಚಾರ್ಜ್ ಪ್ಲ್ಯಾನ್ :-

ವಾರ್ಷಿಕ 2,999 ರೂ. ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 912.5GB ಡೇಟಾ ಸಿಗಲಿದೆ. ಈ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 2.5GB ಡೇಟಾ ಉಚಿತ ಡೇಟಾ ಪ್ರಯೋಜನವನ್ನು ಪಡೆಯಬಹುದು. ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 SMS ಗಳನ್ನು 365 ದಿನಗಳವರೆಗೆ ಉಚಿತವಾಗಿ ಪಡೆಯುವ ಸೌಲಭ್ಯ ಈ ಯೋಜನೆಯಲ್ಲಿದೆ. ಈ ಪ್ಯಾಕ್ 5G ಡೇಟಾವನ್ನು ನೀಡುತ್ತದೆ.

ಜೊತೆಗೆ ಜಿಯೋದ ಸ್ವಾತಂತ್ರ್ಯ ದಿನದ ಕೊಡುಗೆ ಹೆಚ್ಚುವರಿವಾಗಿ ಪಡೆಯಬಹುದು. ಯಾತ್ರಾ ಮೂಲಕ ಬುಕ್ ಮಾಡಿದ ಫ್ಲೈಟ್‌ಗಳಲ್ಲಿ 1,500 ರೂ. ವರೆಗಿನ ಉಳಿತಾಯ ಮಾಡಬಹುದು. ಹೆಚ್ಚುವರಿಯಾಗಿ, ಯಾತ್ರಾ ಮೂಲಕ ದೇಶೀಯ ಹೋಟೆಲ್ ಬುಕಿಂಗ್‌ನಲ್ಲಿ ಬಳಕೆದಾರರು 15 ಪ್ರತಿಶತ ರಿಯಾಯಿತಿ (ರೂ. 4,000 ವರೆಗೆ) ಇರಲಿದೆ. 249 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ವಿಗ್ಗಿ ಆರ್ಡರ್‌ಗಳ ಮೇಲೆ 100 ರೂ. ರಿಯಾಯಿತಿ ಘೋಷಿಸಲಾಗಿದೆ.

Netmeds ನಲ್ಲಿ ಹೆಚ್ಚುವರಿ NMS ಸೂಪರ್‌ಕ್ಯಾಶ್ ಜೊತೆಗೆ ರೂ. 999 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ 20 ಪ್ರತಿಶತ ರಿಯಾಯಿತಿಯನ್ನು ಸಹ ಪಡೆಯಬಹುದು. Ajio ನಲ್ಲಿ ಆಯ್ದ ಉತ್ಪನ್ನಗಳಿಗೆ ರೂ. 999 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆರ್ಡರ್‌ಗಳ ಮೇಲೆ ರೂ. 200 ರಿಯಾಯಿತಿಯೂ ಇದೆ. ರಿಲಯನ್ಸ್ ಡಿಜಿಟಲ್‌ನಿಂದ ಖರೀದಿಸಿದ ಆಯ್ದ ಆಡಿಯೋ ಉತ್ಪನ್ನಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು.

ಆದರೆ, ಈ ಆಪಲ್ ಗಾಗಿ ನೀವೊಂದು ಕೆಲಸ ಮಾಡಬೇಕು. ಹೌದು,
ಈ ಆಫರ್ ಬೇಕಿದ್ದರೆ ಜಿಯೋ ಪ್ರಿಪೇಯ್ಡ್ ಬಳಕೆದಾರರು ಮೊದಲು ಸ್ಮಾರ್ಟ್‌ಫೋನ್‌ನಲ್ಲಿ MyJio ಅಪ್ಲಿಕೇಶನ್ ಅನ್ನು ತೆರೆಯಬೇಕು.
ಕೆಳಭಾಗದಲ್ಲಿರುವ ರೀಚಾರ್ಜ್ ಟ್ಯಾಬ್ ಅನ್ನು ಟ್ಯಾಪ್ ಮಾಡಬೇಕು. 2,999 ಪ್ಲಾನ್ ಆಫರ್ ಅನ್ನು ಆಯ್ಕೆ ಮಾಡಿ. ಮೊಬೈಲ್ ಸಂಖ್ಯೆ ನಮೂದಿಸಿ. ಪಾವತಿಯನ್ನು ಪೂರ್ಣಗೊಳಿಸಿ. ನಂತರ, ವಾರ್ಷಿಕ ಯೋಜನೆಯನ್ನು ಸಂಖ್ಯೆಯಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಆಫರ್ ಲಭ್ಯವಿದೆ. ಈ ಮೂಲಕವೂ ರೀಚಾರ್ಜ್ ಮಾಡಬಹುದು.

ಇದನ್ನೂ ಓದಿ: Airport Jobs: ಗಗನಸಖಿ ಆಗಲು ಬಯಸುವವರಿಗೆ ಸುವರ್ಣಾವಕಾಶ; ನಾಳೆ ನೇರ ಸಂದರ್ಶನ, ಇಲ್ಲಿದೆ ಕಂಪ್ಲೀಟ್ ವಿವರ

You may also like