Youth Dies Of Rabies : ಬೆಂಗಳೂರು ಗ್ರಾಮಾಂತರದ ನೆಲಮಂಗಲ ನಿವಾಸಿ ಕಿರಣ್ (22) ಎಂಬಾತ ರೇಬಿಸ್ ರೋಗಕ್ಕೆ (Rabies disease) ತುತ್ತಾಗಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ. ತನ್ನ ಕೊನೆಯ ಕ್ಷಣದಲ್ಲಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಮನದ ಮಾತು ಹೇಳಿಕೊಂಡಿದ್ದಾನೆ. ಹಾಗೇ ಮಾತನಾಡುತ್ತಲೇ ಪ್ರಾಣ ಬಿಟ್ಟಿದ್ದಾನೆ (Youth Dies Of Rabies). ಈ ಘಟನೆ ಆ. 9ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಿರಣ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆಯನ್ನೇ ಮದುವೆಯಾಗಬೇಕು ಎಂದಿದ್ದ. ಆದರೆ, ಯುವತಿಯ ತಂದೆಗೆ ಈ ಮದುವೆ ಇಷ್ಟವಿರಲಿಲ್ಲ. ಹಾಗಾಗಿ ಮಗಳ ಪ್ರೀತಿಯ ವಿಷಯ ತಿಳಿಯುತ್ತಿದ್ದಂತೆ ಆಕೆಗೆ ಬೈದು ಬುದ್ದಿ ಹೇಳಿದ್ದರು.
ಆದರೆ, ಈ ಮಧ್ಯೆ ಯುವಕ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾನೆ.
ಕೊನೆಗೆ ಕಾಯಿಲೆ ಉಲ್ಬಣಗೊಂಡು ಯುವಕ ಆಸ್ಪತ್ರೆ ಸೇರಿದ್ದ. ಆದರೆ ಇತ್ತ ಕಿರಣ್ ಕುಟುಂಬಸ್ಥರು ನನ್ನ ಮಗನಿಗೆ ಯುವತಿ ಕುಟುಂಬಸ್ಥರೇ ಎನೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ರೇಬಿಸ್ ಉಲ್ಬಣಗೊಂಡು ತೀವ್ರ ಅಸ್ವಸ್ಥಗೊಂಡಿದ್ದ ಕಿರಣ್, ತಾನಿನ್ನೂ ಬದುಕುವುದಿಲ್ಲ ಎಂದು ತಿಳಿದು ಪ್ರಿಯತಮೆಗೆ ವಿಡಿಯೋ ಕಾಲ್ ಮಾಡಿದ್ದಾನೆ.
ನಾನಿನ್ನು ಹೆಚ್ಚು ದಿನಗಳು ಬದುಕುವುದಿಲ್ಲ. ನಿನ್ನನ್ನು ಮದುವೆಯಾಗಿ ಒಟ್ಟಿಗೆ ಕೊನೆವರೆಗೂ ಇರುವ ಅದೃಷ್ಟ ನನಗಿಲ್ಲ. ನಿಮ್ಮ ತಂದೆ ಹೇಳಿದಂತೆ ಕೇಳು. ಅವರು ತೋರಿಸಿರ ಹುಡುಗನನ್ನೇ ಮದುವೆ ಆಗು. ಹಾಗೇ ಒಂದು ಮಾತು ನೆನಪಿಟ್ಟುಕೋ ನಿನಗೆ ಹುಟ್ಟುವ ಮಗುವಿಗೆ ನನ್ನದೇ ಹೆಸರಿಡ್ತೀಯಾ??. ಹಾಗೂ ನನ್ನ ಅಂತ್ಯಕ್ರಿಯೆಗೆ ನೀನು ಬಂದು ಹೋಗಲೇಬೇಕು ಎಂದು ತನ್ನ ಕೊನೆಯ ಆಸೆಯನ್ನು ಹೇಳಿ ಪ್ರಿಯತಮೆಯನ್ನು ನೋಡುತ್ತಲೇ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Aruda Bharathi Swamiji: ಮುಸ್ಲಿಂ ಯುವತಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತೆ: ಎಚ್ಚರಿಕೆ ನೀಡಿದ ಭಾರತೀ ಶ್ರೀ !
