Aroodha Bharathi Swamiji : ಸದ್ಯ ಲವ್ ಜಿಹಾದ್ ಪ್ರಕರಣ ಹೆಚ್ಚಾಗಿಯೇ ಇದೆ. ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಅನ್ಯಕೋಮಿನ ಯುವಕರು ಮತಾಂತರ ಮಾಡುವ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ಸಿದ್ದರೂಢ ಇಂಟರ್ನ್ಯಾಷನಲ್ ಗುರುಕುಲಮ್ನ ಆರೂಢ ಭಾರತೀ ಸ್ವಾಮೀಜಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಮುಸ್ಲಿಂ ಯುವತಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತೆ ಎಂದು ಎಚ್ಚರಿಕೆಯ ಮಾತನ್ನಾಡಿದ್ದಾರೆ.
ಮುಸ್ಲಿಮರಿಗಷ್ಟೆ (Muslim) ಗಂಡಸ್ತನ, ಮೀಸೆ ಇರುವುದಲ್ಲ. ಹಿಂದೂ (Hindu) ಯುವಕರಿಗೂ ಇದೆ. ಹಿಂದೂ ಯುವಕರು ಕೂಡ ಮುಸ್ಲಿಂ ಹುಡುಗಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತದೆ ಎಂದು ಆರೂಢ ಭಾರತೀ ಸ್ವಾಮೀಜಿ (Aroodha Bharathi Swamiji ) ಹೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಡೆದ ಸಂತರ ಸಭೆಯಲ್ಲಿ ಮಾತನಾಡಿದ ಅವರು,
ಭಾರತದ ಸ್ವಾತಂತ್ರ್ಯ ನಂತರ ಹಿಂದೂ, ಜೈನ, ಸಿಖ್, ಬೌದ್ದರ ಜನಸಂಖ್ಯೆ ಇಳಿಕೆಯಾಗುತ್ತಿದೆ. ಮುಸ್ಲಿಂ, ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಬಲವಂತದ ಮತಾಂತರದಿಂದಲೇ ಮುಸ್ಲಿಂ, ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಿದ್ದು. ಸ್ವಪ್ರೇರಣೆಯಿಂದ ಮತಾಂತರ ಆದರೆ ತಪ್ಪಿಲ್ಲ. ಆದರೆ ಬಲವಂತವಾಗಿ ಮಾಡುವುದು ಅಪರಾಧ ಎಂದು ಸ್ವಾಮೀಜಿ ಹೇಳಿದರು.
ಬೈಬಲ್ ಹಾಗೂ ಕುರಾನ್ ಅಲ್ಲಿ ಹಿಂದೂಗಳ ದೇವಸ್ಥಾನ, ಮಂದಿರಗಳನ್ನು ಒಡೆದು ಹಾಕಿ ಎಂದು ಬರೆದಿದೆ. ಬೈಬಲ್, ಕುರಾನ್ ಓದಿದ್ದೇನೆ. ಆ ಧರ್ಮದ ಅನುಯಾಯಿಗಳು ನೆಲೆನಿಲ್ಲದಂತೆ ನಾಶ ಮಾಡಬೇಕು ಅಂತ ಬೈಬಲ್ ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಮುಸ್ಲಿಮರು ಕೂಡ ಇದನ್ನೇ ಮಾಡೋದು ಎಂದು ಸ್ವಾಮೀಜಿ ಹೇಳಿದರು.
