Yaduveer Krishnadatta Chamaraja Wadiyar: ಮೈಸೂರಿನಲ್ಲಿ ಅಪರಾಧ ಕೃತ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ಅವರು ಅಪರಾಧ ತಡೆಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಹೌದು, ಈಗಾಗಲೇ ಸಾಂಸ್ಕೃತಿಕ ನಗರಿಯಾಗಿ ಹೆಸರುವಾಸಿ ಆಗಿರುವ ಮೈಸೂರಿನಲ್ಲಿ ಇತ್ತೀಚೆಗೆ ಸೈಬರ್ ಅಪರಾಧಗಳು(Cyber Crime) ಹೆಚ್ಚುತ್ತಿವೆ. ಮಾಹಿತಿ ಪ್ರಕಾರ ಜನವರಿಯಿಂದ ಜುಲೈವರೆಗೆ ನಡೆದ ಒಟ್ಟು 63 ಅಪರಾಧ ಪ್ರಕರಣಗಳನ್ನು ಜಿಲ್ಲಾ ಪೊಲೀಸರು(Mysuru Police) ಭೇದಿಸಿದ್ದಾರೆ. ಈ ಪ್ರಕರಣಗಳಲ್ಲಿ 1,34,66,697 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಮಾಧ್ಯಮ ಜೊತೆ ಮಾತನಾಡಿದ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಒಳ್ಳೆಯ ಕೆಲಸಕ್ಕೆ ಸರ್ಕಾರದ ಜೊತೆ ಕೆಲಸ ಮಾಡಲು ನಾನು ಸಿದ್ದ. ಸಮಾಜಮುಖಿ ಕೆಲಸಕ್ಕಾಗಿ ನಾನು ಸರ್ಕಾರದ ಜೊತೆ ಕೈ ಜೋಡಿಸುತ್ತೇನೆ. ನಾನು ಸೈಬರ್ ಅಪರಾಧ ತಡೆಗೆ ರಾಯಭಾರಿ ಆಗಲು ಸಿದ್ದ. ಸರ್ಕಾರ ಈ ಬಗ್ಗೆ ಕೇಳಿದರೆ ಖಂಡಿತಾ ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಸೈಬರ್ ಮೂಲಕ ನನಗೆ ಯಾವುದೇ ರೀತಿಯ ಮೋಸ ಆಗಿಲ್ಲ. ಆದರೆ ಪ್ರತಿದಿನ ಆಗುವ ಮೋಸಗಳು ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕೆ ಮೈಸೂರಿನಲ್ಲಿ ಸೈಬರ್ ಭದ್ರತೆಗೆ ಆದ್ಯತೆ ನೀಡಬೇಕು. ಬೆಂಗಳೂರು ಐಟಿ ಹಬ್ ಮೈಸೂರು ಅದಕ್ಕೆ ಹತ್ತಿರದಲ್ಲೇ ಇದೆ. ಒಳ್ಳೆಯ ಸಮಾಜ ಜವಾಬ್ದಾರಿಯುತ ಸಮಾಜ ನಿರ್ಮಣಕ್ಕಾಗಿ ಜಾಗೃತಿ ಮೂಡಿಸುವೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಅದಲ್ಲದೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೈಬರ್ ಅಪರಾಧ ತಡೆಗೆ ಸೈಬರ್ ವರ್ಸ್ ಪ್ರತಿಷ್ಠಾನ ಆರಂಭ ಮಾಡಿದ್ದಾರೆ. ಈ ಮೂಲಕ ಹಲವು ಕೋರ್ಸ್‌ಗಳನ್ನು ಆರಂಭಿಸಿದ್ದಾರೆ. ಸೈಬರ್ ವರ್ಸ್ ಪ್ರತಿಷ್ಠಾನದ ಮೂಲಕ ಶಿಕ್ಷಕರಿಗಾಗಿ ಒಂದು ದಿನದ ಉಚಿತ ಸೈಬರ್ ಹೈಜಿನ್ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ. ತಂತ್ರಜ್ಞಾನ ತುಂಬಾ ಒಳ್ಳೆಯದು. ಆದರೆ ಕೆಲವು ದುಷ್ಟ ಪ್ರವಾಹಗಳಿಂದ ಅನಾಹುತ ಆಗುತ್ತಿದೆ. ಪ್ರತಿಷ್ಠಾನದ ಮೂಲಕ ಸಮಾಜದ ಪ್ರತಿಯೊಬ್ಬರಿಗೆ ಸೈಬರ್ ಭದ್ರತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಶಾಲಾ ಶಿಕ್ಷಕರಿಗೂ ಸಮವಸ್ತ್ರ: ಮಕ್ಕಳಂತೆ ಶಿಕ್ಷಕರೂ ಸಮವಸ್ತ್ರದಲ್ಲಿ ಬರೋದು ಎಲ್ಲಿ ?
