Home » Washroom video: ಇನ್ನೊಂದು ಮೆಡಿಕಲ್ ಕಾಲೇಜಿನಲ್ಲಿ ಉಡುಪಿ ರೀತಿ ಟಾಯ್ಲೆಟ್‌ನಲ್ಲಿ ವಿಡಿಯೋ: ಮುಸ್ಲಿಂ ವಿದ್ಯಾರ್ಥಿ- ವಿದ್ಯಾರ್ಥಿನಿ ಬಂಧನ

Washroom video: ಇನ್ನೊಂದು ಮೆಡಿಕಲ್ ಕಾಲೇಜಿನಲ್ಲಿ ಉಡುಪಿ ರೀತಿ ಟಾಯ್ಲೆಟ್‌ನಲ್ಲಿ ವಿಡಿಯೋ: ಮುಸ್ಲಿಂ ವಿದ್ಯಾರ್ಥಿ- ವಿದ್ಯಾರ್ಥಿನಿ ಬಂಧನ

0 comments
Washroom video

Washroom video: ಈಗಾಗಲೇ ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್‌ ಮಾಡಿರುವ ಆರೋಪ ಪ್ರಸ್ತುತ ತೀವ್ರ ಸ್ವರೂಪ ಪಡೆದಿರುವ ಸಮಯದಲ್ಲೇ ಅಂತಹದೇ ಘಟನೆ ಉತ್ತರ ಪ್ರದೇಶ ಗಾಜೀಪುರದಲ್ಲೂ ನಡೆದಿದೆ.

ಹೌದು, ಗಾಜೀಪುರ ಸರ್ಕಾರಿ ಹೋಮಿಯೋಪಥಿ (College of Homeopathy) ಕಾಲೇಜಿನ ವಿದ್ಯಾರ್ಥಿನಿ ಮಂತಾಶಾ ಕಝ್ಮಿ (Mantasha Kazmi) ಚಾಲಾಕಿ ಹಾಸ್ಟೆಲ್‌ನಲ್ಲಿ ಗೆಳೆತನದ ಸೋಗಿನಲ್ಲಿ ತನ್ನ ಸಹಪಾಠಿಗಳ (classmate) ಖಾಸಗಿ ಫೋಟೋ, ವಿಡಿಯೋ (Washroom video) ಸೆರೆಹಿಡಿದು ಅದನ್ನು ತನ್ನ ಸೀನಿಯರ್‌ ಅಮೀರ್‌ ಎಂಬಾತನಿಗೆ ಕೊಡುತ್ತಿದ್ದಳು.

ನಂತರ ಅಮೀರ್‌ ಈ ಫೋಟೋ ಮತ್ತು ವಿಡಿಯೋ ಬಳಸಿ ಸಂತ್ರಸ್ತೆಯನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎಂಬ ಆರೋಪ ಬೆಳಕಿಗೆ ಬಂದಿದೆ.

ಈ ನೀಚ ಕೃತ್ಯ ಹಿಂದೆ ಮಂತಾಶಾ ಕಝ್ಮಿ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ಆಕೆಯ ಸಹಪಾಠಿಗಳು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಝ್ಮಿ ಮೊಬೈಲ್‌ ತಪಾಸಣೆ ಮಾಡಿದ ವೇಳೆ ಆಕೆ ಫೋಟೋ ಮತ್ತು ವಿಡಿಯೋ ಸೆರೆಹಿಡಿದು ಅದನ್ನು ಅಮೀರ್‌ಗೆ ರವಾನಿಸಿದ್ದು ಖಚಿತಪಟ್ಟಿದೆ. ಇದೀಗ ಈ ಹಿನ್ನೆಲೆಯಲ್ಲಿ ಇಬ್ಬರನ್ನು 6 ತಿಂಗಳ ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ಇನ್ನು ಸಂತ್ರಸ್ತ ವಿದ್ಯಾರ್ಥಿನಿಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದೂರು ಆಧರಿಸಿ ಅಮೀರ್‌ (Amir) ಮತ್ತು ಕಝ್ಮಿಯನ್ನು(Kazmi) ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಕರಿಗೆ ಶಾಕಿಂಗ್ ನ್ಯೂಸ್! BEd ಆದವರು ಪ್ರಾಥಮಿಕ ಶಾಲಾ ಟೀಚರ್ ಆಗುವಂತಿಲ್ಲ: ಸುಪ್ರೀಂ ಕೋರ್ಟ್ ಹೊಸ ಆದೇಶ !

You may also like