Nithyananda: ಈಗಾಗಲೇ ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ (Nithyananda) ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ಬಿಂದಾಸ್ ಆಗಿ ಬದುಕುತ್ತಿದ್ದಾರೆ .
ಹೌದು, ದೇವರ ಹೆಸರಲ್ಲಿ ಹೊಸ ಸಾಮ್ರಾಜ್ಯ ಕಟ್ಟಿಕೊಂಡಿರುವ ನಿತ್ಯಾನಂದ ಸ್ವಾಮೀಜಿ, ತನ್ನ ಕೈಲಾಸದಲ್ಲಿ ನಟಿ ರಂಜಿತಾ ಪ್ರಧಾನಿ ಅನ್ನೋ ಘೋಷಣೆಯನ್ನು ಮಾಡಿದ್ದ. ಬಳಿಕ ಇದೀಗ ನಿತ್ಯಾನಂದ, ಶಿವರಾಜ್ ಕುಮಾರ್ ಅಭಿಯನದ ಕನ್ನಡ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಬಾರಿ ವೈರಲ್ ಆಗಿದೆ.
ಕೈಲಾಸದಲ್ಲಿ ನಿತ್ಯಾನಂದ ದೇವರ ಹಾಡಿನ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಸ್ಯಾಂಡಲ್‍ವುಡ್‌ನ ಜೋಗಯ್ಯ ಚಿತ್ರದ ಯಾರೋ ಅವನ್ಯಾರೋ ಜೋಗಯ್ಯ ಜೋಗಯ್ಯ ಹಾಡಿಗೆ, ಕಾರ್ಯಕ್ರಮದಲ್ಲಿ ಸ್ವತಃ ನಿತ್ಯಾನಂದ ಡ್ರಮ್ಸ್ ಬಾರಿಸಿದ್ದಾರೆ. ನಿತ್ಯಾನಂದ ಡ್ರಮ್ಸ್ ಭಾರಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಭಕ್ತರು ಸಂತಸಗೊಂಡು, ಪ್ರೋತ್ಸಾಹ ನೀಡಿದ್ದಾರೆ.
ಇನ್ನು ನಿತ್ಯಾನಂದ ಇತರ ಕೆಲ ಹಾಡುಗಳಿಗೂ ಡ್ರಮ್ಸ್ ಬಾರಿಸಿದ್ದಾರೆ. ಅದಲ್ಲದೆ ಕೈಲಾಸದ ನಿತ್ಯಾನಂದನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಮುಖ್ಯವಾಗಿ ದಕ್ಷಿಣ ಅಮೆರಿಕದ ದೇಶ ಈಕ್ವೇಡರ್ ಬಳಿ ದ್ವೀಪ ಪ್ರದೇಶವೊಂದನ್ನು ಖರೀದಿಸಿರುವ ನಿತ್ಯಾನಂದ ಶ್ರೀ, ಅದನ್ನೇ ‘ಕೈಲಾಸ’ ದೇಶವನ್ನಾಗಿ ಸೃಷ್ಟಿಸಿದ್ದಾನೆ. ಅಲ್ಲದೆ ರಿಸರ್ವ್ ಬ್ಯಾಂಕ್, ಪಾಸ್‌ಪೋರ್ಟ್, ಧ್ವಜ, ಚಿಹ್ನೆ ಮತ್ತು ವೆಬ್‌ಸೈಟ್ ಸಹ ಇದೆ. ಅಲ್ಲದೆ ಈಗಾಗಲೇ ಕೈಲಾಸ ಪ್ರವಾಸ ಕೈಗೊಳ್ಳುವವರಿಗೆ ವೀಸಾ ವಿತರಣೆಯನ್ನು ಸಹ ಆರಂಭಿಸಲಾಗಿದೆಯಂತೆ.
https://twitter.com/SriNithyananda/status/1690567179379281920?ref_src=twsrc%5Etfw%7Ctwcamp%5Etweetembed%7Ctwterm%5E1690567179379281920%7Ctwgr%5Ee883ff834412910a82cc59e9785a987438ac1418%7Ctwcon%5Es1_c10&ref_url=https%3A%2F%2Fd-36373756833318831856.ampproject.net%2F2307272333000%2Fframe.html
ಇದನ್ನೂ ಓದಿ: 68 ರ ಅಜ್ಜಿಯ ಸಕತ್ ವೈಟ್ ಲಿಫ್ಟಿಂಗ್; ಜಿಮ್ ಟ್ರೈನರ್ ಮಗನೊಂದಿಗೆ ಅಮ್ಮನ ವರ್ಕೌಟ್ ವೈರಲ್
