Home » Viral News: ಈಕೆಯದ್ದು ವಿಶ್ವದಲ್ಲೇ ಅತ್ಯಂತ ಉದ್ದದ ಗಡ್ಡ; ಕನ್ಫ್ಯೂಸ್ ಬೇಡ, ಈತನದ್ದಲ್ಲ, ಈಕೆಯದ್ದೇ !

Viral News: ಈಕೆಯದ್ದು ವಿಶ್ವದಲ್ಲೇ ಅತ್ಯಂತ ಉದ್ದದ ಗಡ್ಡ; ಕನ್ಫ್ಯೂಸ್ ಬೇಡ, ಈತನದ್ದಲ್ಲ, ಈಕೆಯದ್ದೇ !

0 comments
Viral News

Viral News: ಸಾಮಾನ್ಯವಾಗಿ ಮಹಿಳೆಯರಿಗೆ ಗಡ್ಡ ಬೆಳೆಯುವುದಿಲ್ಲ. ಕೆಲವು ಮಹಿಳೆಯರಿಗೆ ಸ್ವಲ್ಪ ಮೀಸೆ ಬೆಳೆಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆಗೆ ಮೀಸೆ, ಗಡ್ಡ ಬೆಳೆದಿದೆ. ಅದು ಕೂಡ ಸ್ವಲ್ಪವಲ್ಲ ಮಾರುದ್ದ ಮೀಟರ್ ಗಡ್ಡ ಬೆಳೆದಿದೆ. ಈ ಗಡ್ಡದಿಂದಲೇ ಈಕೆ ಹೆಸರುವಾಸಿಯಾಗಿರೋದು. ಅಷ್ಟೇ ಅಲ್ಲ ಈಕೆ ವಿಶ್ವ ದಾಖಲೆ ಕೂಡ ಬರೆದಿದ್ದಾರೆ (Viral News).

ಹೌದು, ಅಮೆರಿಕದ (America) ಮಿಚಿಗನ್‌ನ ಮಹಿಳೆ ಎರಿನ್‌ ಹನಿಕಟ್‌ ಎಂಬವರು ಅತಿ ಉದ್ದನೆಯ ಗಡ್ಡ ಬೆಳೆಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಇವರು ಸುಮಾರು ಎರಡು ವರ್ಷಗಳಿಂದ 11.8 ಇಂಚು (29.9 cm) ಉದ್ದದ ಗಡ್ಡವನ್ನು ಬೆಳೆಸಿದ್ದಾರೆ. ಹಿಂದಿನ ದಾಖಲೆ ಮುರಿದಿದ್ದಾರೆ.

ಎರಿನ್‌ ಅವರಿಗೆ 13 ವರ್ಷದವಳಿದ್ದಾಗ ಹಾರ್ಮೋನ್‌ ಸಮಸ್ಯೆ ಕಾಣಿಸಿಕೊಂಡಿತ್ತು. ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್‌ನಿಂದ ಅವರ ಮುಖದಲ್ಲಿ ಕೂದಲು ಬೆಳೆಯಲು ಪ್ರಾರಂಭವಾಗಿತ್ತು. ಭಯಗೊಂಡ ಆಕೆ ಶೇವಿಂಗ್‌, ವ್ಯಾಕ್ಸಿಂಗ್‌ನ ಮೊರೆ ಹೋದರು.
ಆದರೆ, ಕೋವಿಡ್‌ ಸಮಯದಲ್ಲಿ ಅವರಿಗಘ ಐ ಸ್ಟ್ರೋಕ್‌ ಆಗಿದ್ದು, ಕಣ್ಣಿನ ದೃಷ್ಠಿ ಕಳೆದುಕೊಂಡರು. ದೃಷ್ಟಿ ಕಳೆದುಕೊಂಡ ಮೇಲೆ ಅವರು ಶೇವ್‌ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಇದೀಗ ಗಡ್ಡ ಉದ್ದ ಬೆಳೆದು
ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: Gruha lakshmi Scheme: ಗೃಹಲಕ್ಷ್ಮಿ ಅರ್ಜಿ ಶುಲ್ಕದಲ್ಲಿ ಮಹತ್ತರ ಬದಲಾವಣೆ ; ಕೊನೆ ಕ್ಷಣದಲ್ಲಿ ಜನರ ಭಾರ ಇಳಿಸಿದ ಸರ್ಕಾರ !

You may also like