Home » Viral video: 68 ರ ಅಜ್ಜಿಯ ಸಕತ್ ವೈಟ್ ಲಿಫ್ಟಿಂಗ್; ಜಿಮ್ ಟ್ರೈನರ್ ಮಗನೊಂದಿಗೆ ಅಮ್ಮನ ವರ್ಕೌಟ್ ವೈರಲ್

Viral video: 68 ರ ಅಜ್ಜಿಯ ಸಕತ್ ವೈಟ್ ಲಿಫ್ಟಿಂಗ್; ಜಿಮ್ ಟ್ರೈನರ್ ಮಗನೊಂದಿಗೆ ಅಮ್ಮನ ವರ್ಕೌಟ್ ವೈರಲ್

by ಹೊಸಕನ್ನಡ
0 comments
Viral video

Viral video : ವ್ಯಾಯಾಮ ದೂರ ಆಗುತ್ತಿರುವ ದಿನಗಳಲ್ಲಿ, ಸೋಮಾರಿತನ ಹೆಚ್ಚುಗೊಳ್ಳುತ್ತಿರುವ ಕ್ಷಣಗಳಲ್ಲಿ ಫಿಟ್ ನೆಸ್ ಬದ್ಧತೆ ಇಟ್ಟುಕೊಂಡು ವರ್ಕ್ ಔಟ್ ಮಾಡುವ ಅಜ್ಜಿ ಒಬ್ಬಳ ಉದಾಹರಣೆ ಇದೀಗ ಜನರ ಗಮನ ಸೆಳೆಯುತ್ತಿದೆ. ಎಲ್ಲರಿಗೂ ಮಾದರಿ ಎಂಬಂತೆ 68 ರ ಇಳಿ ಪ್ರಾಯದ ವೃದ್ಧೆಯೊಬ್ಬರು ಜಿಮ್ ನಲ್ಲಿ ವೈಟ್ ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral video) ಆಗಿದೆ.

ಈ ವೈರಲ್ ವಿಡಿಯೋದಲ್ಲಿ ಕಂಡಂತೆ 68 ರ ಈ ವೃದ್ಧೆ ತಮ್ಮ ಪುತ್ರ ಜಿಮ್ ಟ್ರೈನರ್ ಸಾಂಗ್ವಾನ್ ಅವರೊಂದಿಗೆ ವ್ಯಾಯಾಮ ಮಾಡುವುದನ್ನು ನಾವು ಕಾಣಬಹುದು. ಆ ಜಿಮ್ ನಲ್ಲಿ ಮಹಿಳೆಯ ಪುತ್ರ ತರಬೇತಿದಾರರಾಗಿ ಕೆಲಸ ಮಾಡುತ್ತಾರೆ. ಯುವಕ-ಯುವತಿಯರು ಎತ್ತಲು ಹರಸಾಹಸ ಪಡುವಂತ ತೂಕಗಳನ್ನು ಈ ಬಲಿಷ್ಠ ಅಜ್ಜಿ ಸಲೀಸಾಗಿ ಲಿಫ್ಟ್ ಮಾಡುತ್ತಾರೆ. ಈಕೆಯ ಜೀವನ ಉತ್ಸಾಹ, ಚೈತನ್ಯ ಮತ್ತು ಶಕ್ತಿ ನೋಡುಗರಿಗೆ ಆಶ್ಚರ್ಯವನ್ನು ಉಂಟು ಮಾಡಿದ್ದು, ಇತರರಿಗೆ ಸ್ಪೂರ್ತಿದಾಯಕವಾಗಿದೆ. ತಮ್ಮ ತಾಯಿ ತೂಕವನ್ನು ಎತ್ತಿಕೊಳ್ಳುವ ದೃಶ್ಯವನ್ನು ಅವರ ಮಗಈಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನ ಅದರಿಂದ ಪ್ರೇರಿತರಾಗಿ ಸ್ವಯಂ ಪ್ರೇರಿತವಾಗಿ ವೈಟ್ ಲಿಫ್ಟರ್ ಅಜ್ಜಿ ಬಗ್ಗೆ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

ಅಜ್ಜಿಯ ಉತ್ಸಾಹಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ನಿಮ್ಮ ತಾಯಿ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಅಮ್ಮ ವೈಟ್ ಲಿಫ್ಟ್ ಮಾಡುವ ದೃಶ್ಯವನ್ನು ಹಂಚಿಕೊಂಡಿರುವ ಮಗ ಸಾಂಗ್ವಾನ್ ಅವರು, ನನ್ನ ತಾಯಿ ಅವರಲ್ಲಿರುವ ಉತ್ತಮ ವರ್ಶನ್ ಅನ್ನು ಹೊರಹಾಕಲು ತನ್ನಲ್ಲೇ ಪ್ರಮಾಣ ಮಾಡಿಕೊಂಡಿದ್ದಾರೆ ಎಂಬ ಶೀರ್ಷಿಕೆಯಡಿ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. ಮತ್ತಷ್ಟು ಜನರಿಗೆ ಸ್ಪೂರ್ತಿ ಕೊಡುವ ಕೆಲಸ ಆಗಿದೆ.

https://www.instagram.com/reel/CvvtEXdtybX/?utm_source=ig_embed&utm_campaign=loading

ಇದನ್ನೂ ಓದಿ: Job Alert: ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬೊಂಬಾಟ್ ನ್ಯೂಸ್ ; 6000 ಕ್ಕೂ ಮಿಕ್ಕಿ ಉದ್ಯೋಗ ಅವಕಾಶ !

You may also like