Home » Actor Vinayakan: ಈಗಾಗಲೇ 10 ಹುಡುಗೀರ ಜತೆ ಆಗಿದೆ, ‘ನನ್ನೊಂದಿಗೆ ಮಲಗ್ತೀಯಾ ‘ ಅಂತ ನೇರ ಕೇಳ್ತೀನಿ, ಓಕೆ ಆದ್ರೆ ಓಕೆ… ಒಂದ್ವೇಳೆ ಇಲ್ಲಾ ಅಂದ್ರೆ …!!!

Actor Vinayakan: ಈಗಾಗಲೇ 10 ಹುಡುಗೀರ ಜತೆ ಆಗಿದೆ, ‘ನನ್ನೊಂದಿಗೆ ಮಲಗ್ತೀಯಾ ‘ ಅಂತ ನೇರ ಕೇಳ್ತೀನಿ, ಓಕೆ ಆದ್ರೆ ಓಕೆ… ಒಂದ್ವೇಳೆ ಇಲ್ಲಾ ಅಂದ್ರೆ …!!!

0 comments
Actor Vinayakan

Actor Vinayakan: ರಜನಿಕಾಂತ್ (Rajinikant) ಜೈಲರ್ (Jailer) ಸಿನಿಮಾ ಆಗಸ್ಟ್ 10 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಜೈಲರ್ ಸಿನಿಮಾವನ್ನು ನಿರ್ದೇಶಿಸಿದ್ದು, ಪ್ಯಾನ್ ಇಂಡಿಯಾದಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿನಾಯಕನ್​ (Actor Vinayakan) ಅವರು ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ವಿನಾಯಕನ್​ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ವಿನಾಯಕನ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಮತ್ತೆ ವೈರಲ್ ಆಗುತ್ತಿದೆ.

ಹೌದು, ನಟ ವಿನಾಯಕನ್ ಅವರು ಲೈಂಗಿಕ ವಿಷಯದ ಬಗ್ಗೆ ಮಾತನಾಡುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದರು.
ಕಳೆದ ವರ್ಷ ನಟಿ ನವ್ಯಾ ನಾಯರ್​ (Navya nayar) ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡಿದ್ದರು. ಈ ವೇಳೆ ವಿ.ಕೆ. ಪ್ರಕಾಶ್​ (V K Prakash) ನಿರ್ದೇಶನದ ‘ಒರುಥಿ’ ಚಿತ್ರದ ಪ್ರಚಾರದ ವೇಳೆ ವಿನಾಯಕನ್​ “ಮಹಿಳೆಯರಲ್ಲಿ ಲೈಂಗಿಕತೆ, ದೈಹಿಕ ಸಂಬಂಧದ ಕುರಿತು ಕೇಳುವುದು ‘ಮೀ ಟೂ’ ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ. ಇದನ್ನು ನಾನು ಹೀಗೆ ಅರ್ಥಮಾಡಿಕೊಂಡಿದ್ದೇನೆ” ಎಂದು ಹೇಳುವುದರ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಲ್ಲದೆ “ನಾನು ಈಗಾಗಲೇ 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನಗೆ ಪರಿಚಿತರಾದ ಮಹಿಳೆಯರಿಗೆಲ್ಲಾ ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ” ಎಂದು ಹೇಳಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಅಲ್ಲದೆ, ವಿನಾಯಕನ್​ ಹೇಳಿದ ಮಾತು ಮಲಯಾಳಂ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿತ್ತು. ಈ ವೇಳೆ ನಟಿ ನವ್ಯಾ ನಾಯರ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ನಟಿ ವೇದಿಕೆ ಮೇಲೆಯೇ ಇದ್ದರೂ ಅವರು ವಿನಾಯಕನ್ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಆದರೆ, ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ವಿನಾಯಕನ್ ಕ್ಷಮೆಯಾಚಿಸಿದ್ದರು. ತಾನು ಯಾವುದೇ ಮಹಿಳೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸಿಲ್ಲ ಎಂದು ಹೇಳಿದರು. ಇದೀಗ ಈ ವಿವಾದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋಗೆ ಹಲವರು ಹಲವು ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಪರ-ವಿರೋಧ ಚರ್ಚೆಗಳು ಆಗುತ್ತಿವೆ.

ಅಂದಹಾಗೆ ವಿನಾಯಕನ್​ ಅವರು ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ​ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.

ಇದನ್ನೂ ಓದಿ: Lakshmi Hebbalkar: ಉಡುಪಿ ‘ವಾಶ್ ರೂಂ ಪ್ರಕರಣ ಪ್ರಗತಿಯಲ್ಲಿದೆ’ ! ಸಿಐಡಿ ತನಿಖೆ ಬಗ್ಗೆ ಏನಂದ್ರು ಸಚಿವೆ ಹೆಬ್ಬಾಳ್ಕರ್ ?!

You may also like