Home » Rishi sunak: ಶ್ರೀರಾಮ ನನ್ನೆಲ್ಲ ಕಾರ್ಯಕ್ಕೆ ಶಕ್ತಿ ತುಂಬಿದ್ದಾನೆ :ರಾಮ ಕಥಾ ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ!

Rishi sunak: ಶ್ರೀರಾಮ ನನ್ನೆಲ್ಲ ಕಾರ್ಯಕ್ಕೆ ಶಕ್ತಿ ತುಂಬಿದ್ದಾನೆ :ರಾಮ ಕಥಾ ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ!

0 comments
Rishi sunak

Rishi sunak: ಬ್ರಿಟನ್ ಕೇಂಬ್ರಿಡ್ಡ್ ವಿಶ್ವವಿದ್ಯಾಲಯದಲ್ಲಿ ಹಿಂದೂ ಧಾರ್ಮಿಕ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಮ ಕಥಾ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಶಿ ಸುನಕ್(Rishi sunak) ಭಾಗಿಯಾಗಿದ್ದರು.

ಹಿಂದೂ (Hindu)ನಂಬಿಕೆ ತನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ಮಾರ್ಗದರ್ಶನ ನೀಡುತ್ತದೆ. ಭಾರತ ಸ್ವಾತಂತ್ರ್ಯ ದಿನಾಚರಣೆಯ( Independece Day) ದಿನದಂದೇ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಚ್ಚು ಸಂತೋಷ ತಂದಿದೆ ಎಂದು ರಿಶಿ ಸುನಕ್ ಹೇಳಿಕೊಂಡಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜೀಸಸ್ ಕಾಲೇಜಿನಲ್ಲಿ ಆಧ್ಯಾತ್ಮಿಕ ಗುರು ಮೊರಾರಿ ಬಾಪು ನಡೆಸುತ್ತಿರುವ ‘ರಾಮ ಕಥಾ’ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ರಿಷಿ ಸುನಕ್ ಮಾತನಾಡಿದ್ದಾರೆ.

ಬ್ರಿಟನ್‌ ಪ್ರಧಾನಿಯಾಗಿ ಅತ್ಯುತ್ತಮವಾದುದನ್ನು ಮಾಡಲು ಧೈರ್ಯ ನೀಡುತ್ತದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಂಗಳವಾರ ಹೇಳಿದ್ದಾರೆ.ರಾಮ ಕಥಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಿಷಿ ಸುನಕ್, ಜೈ ಶ್ರೀರಾಮ್ ಘೋಷಣೆ ಮಾಡಿದ್ದಾರೆ.ರಾಮಾಯಣದ ಜೊತೆ ಭಗವದ್ ಗೀತಾ ಹಾಗೂ ಹನುಮಾನ್ ಚಾಲೀಸಾ ಕೂಡ ನಮಗೆ ಹೆಚ್ಚು ಮುಖ್ಯವಾಗಿದ್ದು, ನನಗೆ ಸಾವಿರಾರು ಸವಾಲುಗಳು, ಅಡೆತಡೆಗಳು ಸೋಲು ಗೆಲುವುಗಳನ್ನು ಕಂಡಾಗ ಪ್ರತಿ ಬಾರಿ ಶ್ರೀರಾಮ ಧೈರ್ಯ ನೀಡಿ ಸ್ಪೂರ್ತಿ ನೀಡಿದ್ದಾನೆ ಎಂದು ರಿಶಿ ಸುನಕ್ ಹೇಳಿಕೊಂಡಿದ್ದಾರೆ

2020 ರಲ್ಲಿ ಮೊದಲ ಬ್ರಿಟಿಷ್ ಭಾರತೀಯ ಚಾನ್ಸೆಲರ್ ಆಗಿ ನಂ. 11 ಡೌನಿಂಗ್ ಸ್ಟ್ರೀಟ್‌ನ ಹೊರಗೆ ದೀಪಾವಳಿ ಹಬ್ಬ ಆಚರಿಸಿದ್ದನ್ನು ಕಾರ್ಯಕ್ರಮದ ವೇಳೆ ಸುನಕ್, 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ತನ್ನ ಮೇಜಿನ ಮೇಲೆ ಚಿನ್ನದ ಗಣೇಶ ವಿಗ್ರಹವಾಗಿದ್ದು, ಸಂತೋಷದಿಂದ ಕುಳಿತಿರುವುದನ್ನ ನೆನಪಿಸಿಕೊಂಡಿದ್ದಾರೆ. ಈ ನಿರ್ಣಯ ಕೈಗೊಳ್ಳುವ ಮುನ್ನ ಸಮಸ್ಯೆಗಳನ್ನು ತಿಳಿಯಬೇಕಾಗುತ್ತದೆ.

ಸೌತಾಂಪ್ಟನ್‌ನಲ್ಲಿನ ಬಾಲ್ಯದ ಜೀವನ ತಮ್ಮ ಮೇಲೆ ಬೀರಿರುವ ಪ್ರಭಾವದ ಕುರಿತು ಮಾತನಾಡಿದ್ದಾರೆ. ಆಗ ಕುಟುಂಬದವರೊಂದಿಗೆ ನೆರಹೊರೆಯಲ್ಲಿದ್ದ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಕುರಿತು ತಮ್ಮ ಕುಟುಂಬದ ಜೊತೆಗೆ ಪೂಜೆ ಹವನಗಳು,ಆರತಿಗಳನ್ನು ಆಯೋಜಿಸಲಾಗಿತ್ತಿತ್ತು. ನಾನು ಬ್ರಿಟಿಷ್ ಮತ್ತು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಕರ್ತವ್ಯ ಇಲ್ಲವೇ ಸೇವೆಯೇ ಶ್ರೇಷ್ಠ ಮೌಲ್ಯವಾಗಿದ್ದು, ಹಿಂದೂ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳಲ್ಲಿ ಸೇರಿಕೊಂಡಿವೆ. ನನಗೆ, ಜೀವನದ ಸವಾಲುಗಳನ್ನು ಎದುರಿಸುವ ಜೊತೆಗೆ ಧೈರ್ಯದಿಂದ ಎದುರಿಸಲು ವಿನಮ್ರತೆಯಿಂದ ಆಡಳಿತ ಮಾಡಲು ಮತ್ತು ಕೆಲಸ ಮಾಡಲು ಶ್ರೀರಾಮನು ಯಾವಾಗಲೂ ಸ್ಫೂರ್ತಿ ನೀಡುತ್ತಾನೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: Death News:ಸಮುದ್ರಕ್ಕೆ ಹಾರಿ ಪ್ರಾಣ ಕೊಟ್ಟ ಮಗ: ಮಗನ ದಾರಿಯಲ್ಲೇ ಕಡಲ ಮಾರ್ಗ ಹಿಡಿದು ಸಾಗಿದ ಅಪ್ಪ! ಶೋಕ ‘ ಸಾಗರ’ ದಲ್ಲಿ ಕುಟುಂಬ !

You may also like