Home » Assault Case: ಸಂಭೋಗಕ್ಕೆ ಒಪ್ಪದ ಲಿವ್‌ ಇನ್‌ ರಿಲೇಷನ್‌ಶಿಪ್‌ ಯುವತಿಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಭೀಕರವಾಗಿ ಹಲ್ಲೆ ಮಾಡಿದ ಪಾಪಿ ಪ್ರಿಯಕರ!

Assault Case: ಸಂಭೋಗಕ್ಕೆ ಒಪ್ಪದ ಲಿವ್‌ ಇನ್‌ ರಿಲೇಷನ್‌ಶಿಪ್‌ ಯುವತಿಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಭೀಕರವಾಗಿ ಹಲ್ಲೆ ಮಾಡಿದ ಪಾಪಿ ಪ್ರಿಯಕರ!

by Mallika
0 comments
Assault Case

Assault Case: ಇತ್ತೀಚೆಗೆ ಲಿವ್‌ಇನ್‌ ರಿಲೇಷನ್‌ಶಿಪ್‌ (Live In Relationship) ನಲ್ಲಿ ಆಗುವ ಕಿರುಕುಳ, ಕೊಲೆ, ಚಿತ್ರಹಿಂಸೆ ಇಂತಹ ಪ್ರಕರಣಗಳು( Assault Case) ಹೆಚ್ಚಾಗುತ್ತಲೇ ಇದೆ. ಈಗ ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯೋರ್ವರಿಗೆ ಸ್ಕ್ರೂ ಡ್ರೈವರ್‌ನಿಂದ ಇರಿದು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಶಿವಂ ಕುಮಾರ್‌ ಎಂಬಾತ ಗುರುಗ್ರಾಮದಲ್ಲಿ ವಾಸಿಸುತ್ತಿದ್ದು, ಈತ ತನ್ನ ಲಿವ್‌ ಇನ್‌ ರಿಲೇಷನ್‌ ಶಿಪ್‌ ಮಹಿಳೆಯ ಜೊತೆ ಸಂಭೋಗ ನಡೆಸಲು ಯತ್ನಿಸಿದ್ದಾನೆ. ಆದರೆ ಆಕೆ ಇದಕ್ಕೆ ಒಪ್ಪಲಿಲ್ಲ. ಇದಕ್ಕೆ ಸಿಟ್ಟುಗೊಂಡ ಆತ ಆಕೆಯ ಕುತ್ತಿಗೆ ಹಿಸುಕಿ, ಸ್ಕ್ರೂಡ್ರೈವರ್‌ ನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಮಹಿಳೆ ತನ್ನ ಲಿವ್‌ ಇನ್‌ ರಿಲೇಷನ್‌ಶಿಪ್‌ ಯುವಕನ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ನಾನು ನನ್ನ ಗಂಡನಿಂದ ದೂರಾಗಿದ್ದು, ನಂತರ ಶಿವಂ ಕುಮಾರ್‌ನ ಪರಿಚಯವಾಗಿದ್ದು, ಆತ ನನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ. ಆದರೆ ಆತನಿಗೆ ಮದುವೆಯಾಗಿದ್ದು, ಈ ವಿಷಯ ಮುಚ್ಚಿಟ್ಟಿದ್ದಾಗಿ ಆಕೆ ಪೊಲೀಸ್‌ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದೆ. ನನ್ನನ್ನು ಭೇಟಿ ಮಾಡಲು ಬರಬೇಡ ಎಂದೆ. ಆದರೆ ಆದ ದೈಹಿಕ ಸಂಬಂಧಕ್ಕೆ ಒತ್ತಾಯ ಮಾಡಿದ. ನಾನು ನಿರಾಕರಿಸಿದಾಗ ಈ ರೀತಿ ಭೀಕರವಾಗಿ ಹಲ್ಲೆ ಮಾಡಿದ್ದಾನೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: Bihar: ಮಗಳ ಅಂತ್ಯಸಂಸ್ಕಾರದ ನಂತರ ಬಂತೊಂದು ಕರೆ! ‘ಪಪ್ಪಾ ನಾನಿನ್ನೂ ಬದುಕಿದ್ದೀನಿ’ ಎಂದಿತು ಆ ಧ್ವನಿ, ಹಾಗಾದರೆ ಇದ್ಯಾರು?

You may also like