Home » Murder Attempt: ಜಮೀನು ಆಸೆಗಾಗಿ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ನೀಡಿದ ಪತ್ನಿ! ಪತಿಯ ಸ್ಥಿತಿ ಚಿಂತಾಜನಕ!

Murder Attempt: ಜಮೀನು ಆಸೆಗಾಗಿ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ನೀಡಿದ ಪತ್ನಿ! ಪತಿಯ ಸ್ಥಿತಿ ಚಿಂತಾಜನಕ!

by Mallika
0 comments
Murder Attempt

Murder Attempt: ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನು ಸಾಯಿಸಲು ಪತ್ನಿಯೊಬ್ಬಳು ಯತ್ನಿಸಿದ (Murder Attempt) ಘಟನೆಯೊಂದು ಸವದತ್ತಿ ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಆತನ ಮನೆಯ ನಾಯಿ, ಬೆಕ್ಕು ಸಾವಿಗೀಡಾಗಿದ್ದು, ಗಂಡ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಸಾವಕ್ಕ ನಿಂಗಪ್ಪ ಹಮಾನಿ (32) ಎಂಬ ಪತ್ನಿಯೇ ನಿಂಗಪ್ಪ ಪಕೀರಪ್ಪ ಹಮಾನಿ (35) ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ನೀಡಿದ್ದಾಳೆ. ಉಪ್ಪಿಟ್ಟು ತಿಂದ ಪತಿಯ ಆರೋಗ್ಯ ತೀವ್ರ ಅಸ್ವಸ್ಥನಾಗಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.

ಗಂಡನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನಿಗಾಗಿ ತನ್ನ ಸಹೋದರ ಪಕೀರಪ್ಪ ಲಕ್ಷ್ಮಣ ಸಿಂದೋಗಿ ಜೊತೆ ಸೇರಿ ಈ ಕೃತ್ಯವೆಸಗಿದ್ದಾಳೆ ಪತ್ನಿ. ಈ ಪ್ರಕರಣ ಸವದತ್ತಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪತ್ನಿ ಸಾವಕ್ಕ, ಆಕೆಯ ಸಹೋದರ ಪಕೀರಪ್ಪ ಲಕ್ಷ್ಮಣ ಸಿಂದೋಗಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ITI ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ! 1060 ಹುದ್ದೆ, ಆ.31 ರೊಳಗೆ ಅರ್ಜಿ ಸಲ್ಲಿಸಿ,

You may also like