Home » SpiceJet Flight: ವಿಮಾನ ಪ್ರಯಾಣದಲ್ಲಿ ಕದ್ದು ಗಗನಸಖಿಯ ಫೋಟೋ ಕ್ಲಿಕ್ಕಿಸಿದ ಮುದುಕ! ಫೋನ್‌ನಲ್ಲಿತ್ತು ಫೋಟೋ ರಹಸ್ಯ!

SpiceJet Flight: ವಿಮಾನ ಪ್ರಯಾಣದಲ್ಲಿ ಕದ್ದು ಗಗನಸಖಿಯ ಫೋಟೋ ಕ್ಲಿಕ್ಕಿಸಿದ ಮುದುಕ! ಫೋನ್‌ನಲ್ಲಿತ್ತು ಫೋಟೋ ರಹಸ್ಯ!

by Mallika
0 comments
SpiceJet Flight

SpiceJet Flight: ವಿಮಾನಯಾನದಲ್ಲಿ ಈಗ ಅನುಚಿತ ವರ್ತನೆಗಳ ಕುರಿತು ಒಂದಲ್ಲ ಒಂದು ವರದಿಯಾಗುತ್ತಲೇ ಇರುತ್ತದೆ. ವಿಮಾನ ಸಿಬ್ಬಂದಿಗಳ ಜೊತೆ ಜಗಳ, ಪ್ರಯಾಣಿಕರ ಜೊತೆ ಜಗಳ ಮಾಡುವ ಘಟನೆಗಳು ಹೆಚ್ಚುತ್ತಲೇ ಇದೆ. ಈಗ ನಡೆದಿರುವ ಘಟನೆಯೊಂದರ ಪ್ರಕಾರ, ಇಲ್ಲೊಬ್ಬ ವೃದ್ಧ ಗಗನಸಖಿಯರ ಫೋಟೋ ತೆಗೆದಿದ್ದಾನೆ. ಈ ಕುರಿತು ವಿಚಾರಿಸಿದಾಗ ಆತ ನಾ ಮಾಡೇ ಇಲ್ಲ ಎಂಬಂತೆ ವರ್ತಿಸಿದ್ದಾನೆ.

ಈ ಕುರಿತು ಮಹಿಳೆಯೊಬ್ಬರು ವೀಡಿಯೋ ಮಾಡಿದ್ದು, ಅವರು ಹೇಳಿರುವ ಪ್ರಕಾರ, ಆ ವೃದ್ಧ ಗಗನಸಖಿಯರ ಕಾಲಿನ ಫೋಟೋ ತೆಗೆದಿರುವುದಾಗಿ, ಇದನ್ನು ಪಕ್ಕದಲ್ಲಿದ್ದಾಕೆ ಹೇಳಿದಾಗ ಆತ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅನಂತರ ಆತನ ಫೋನ್‌ ಚೆಕ್‌ ಮಾಡಿದಾಗ ಅದರಲ್ಲಿ ಗಗನಸಖಿಯ ಫೋಟೋ, ಪಕ್ಕದಲ್ಲಿದ್ದಾಕೆಯ ಫೋಟೋ ಕೂಡಾ ಇದ್ದು, ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾಗಿ ಆ ಯುವತಿ ಹೇಳಿದ್ದಾಳೆ.

ಈ ಘಟನೆ ದೆಹಲಿಯಿಂದ ಹೊರಟಿದ್ದ ಸ್ಪೈಸ್‌ಜೆಟ್‌(SpiceJet Flight) 157 ವಿಮಾನದಲ್ಲಿ ನಡೆದಿದೆ. ಈ ವೃದ್ಧನ ವರ್ತನೆಯನ್ನು ವಿಮಾನಯಾನ ಸಂಸ್ಥೆ ಖಚಿತಪಡಿಸಿದೆ. ದೆಹಲಿ ಮಹಿಳಾ ಆಯೋಗ ನೋಟಿಸ್‌ ನೀಡಿದೆ.

ಇದನ್ನೂ ಓದಿ: ಇಡೀ ಏರಿಯಾದ ಕರೆಂಟ್ ಕಿತ್ತದ್ದು ಒಂದು ಮೀನು, ಅದಕ್ಕೆ ಸಾಥ್ ನೀಡಿದ್ದು ಒಂದು ಹಕ್ಕಿ – Viral News!

You may also like