Home » RTO News: ವಾಹನ ಸವಾರರಿಗೆ ಬಿಗ್ ನ್ಯೂಸ್! ಇನ್ಮುಂದೆ ಡಿಎ, ಆರ್ ಸಿ ಕಾರ್ಡ್ ಶೀಘ್ರವಾಗಿ ನಿಮ್ಮ ಮನೆ ಬಾಗಿಲಿಗೆ!

RTO News: ವಾಹನ ಸವಾರರಿಗೆ ಬಿಗ್ ನ್ಯೂಸ್! ಇನ್ಮುಂದೆ ಡಿಎ, ಆರ್ ಸಿ ಕಾರ್ಡ್ ಶೀಘ್ರವಾಗಿ ನಿಮ್ಮ ಮನೆ ಬಾಗಿಲಿಗೆ!

0 comments
RTO News

RTO News: ವಾಹನ ಸವಾರರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ವಾಹನ ಸವಾರರಿಗೆ ರಾಜ್ಯ ಸಾರಿಗೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಡಿಎಲ್, ಆರ್‌ಸಿ ಕಾರ್ಡ್‌ಗಾಗಿ ಇನ್ನು RTO (regional transport office) ಕಚೇರಿಗೆ ಆಗಾಗ ಅಲೆದಾಡಬೇಕಾಗಿಲ್ಲ. ಡಿಎಲ್ (driving license) ಹಾಗೂ RC (registration certificate) ಕಾರ್ಡ್‌ಗಳನ್ನು ಮನೆಗಳಿಗೆ ತಲುಪಿಸಲು ಆರ್‌ಟಿಓ (RTO news) ವ್ಯವಸ್ಥೆ ಮಾಡಲಾಗುತ್ತದೆ.ರಾಜ್ಯ ಸಾರಿಗೆ ಇಲಾಖೆ ಈ ಕುರಿತು ಹೊಸ ಪ್ರಕಟಣೆ ಹೊರಡಿಸಲಾಗಿದೆ.

ಆರ್‌ಸಿ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಂಚೆ ಮೂಲಕವೇ ಮನೆಗಳಿಗೆ ಆರ್‌ಟಿಓ ಕಚೇರಿ ಕೊರಿಯ‌ರ್ ಮಾಡುವ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. DL & RC ಕಾರ್ಡ್ ಮನೆಗೆ ರವಾನೆ ಸಂಬಂಧ ಸರ್ಕಾರದಿಂದ ಕೂಡ ಅನುಮೋದನೆ ದೊರೆತಿದೆ. ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಆದೇಶ ನೀಡಲಾಗಿದೆ. ಮುಖ್ಯ ಅಂಚೆ ಕಚೇರಿ ಆಯುಕ್ತ ಸಾರಿಗೆ ಮುಖ್ಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಿ ನೂತನ ವ್ಯವಸ್ಥೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಎನ್ವಲಪ್ ಕವರ್‌ ಮೂಲಕ ವಿಶೇಷ ಸೂಚನೆಗಳ ಜೊತೆಗೆ ಕೊರಿಯ‌ರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಕುರಿತು ಅಂಚೆ ಇಲಾಖೆಯೊಂದಿಗೆ RTO ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.ಇನ್ನು ಮುಂದೆ ಸ್ಪೀಡ್ ಪೋಸ್ಟ್ ಮುಖಾಂತರ RC- DL ಕಾರ್ಡ್‌ಗಳು ಮನೆಬಾಗಿಲಿಗೆ ಬರಲಿದ್ದು,.ಅರ್ಜಿದಾರರು ಆನ್‌ಲೈನ್‌ ಮೂಲಕ ಕೂಡ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡಲಾಗಿದೆ.

ಇದನ್ನೂ ಓದಿ: ಗಂಡನಿಂದ ಬೆತ್ತಲೆ ವೀಡಿಯೋಗೆ ಕರೆ ಮಾಡಿ ಹೆಂಡತಿಗೆ ಒತ್ತಾಯ! ಇದರ ಹಿಂದಿತ್ತು ಒಂದು ರಹಸ್ಯ ಕಾರಣ, ಪೊಲೀಸ್ ಠಾಣೆ ಮೆಟ್ಟಿಲೇರೇ ಬಿಟ್ಟಳು ಹೆಂಡತಿ!!!

You may also like