Bengaluru: ಪ್ರೀತಿಗೆ ವಯಸ್ಸು ಮುಖ್ಯವಲ್ಲ, ಪ್ರೀತಿ ಕುರುಡು ಎಂಬಂತೆ ಅನೇಕ ಮಂದಿ ಪ್ರೀತಿಯ ಬಲೆಯಲ್ಲಿ ಬಿದ್ದು ಮೋಸ ಹೋಗಿರುವ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಇದೀಗ, 63ರ ಹರೆಯದ ವೃದ್ದೆಯೊಬ್ಬರು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ ಆಪಾದನೆ ಮೇರೆಗೆ ವೃದ್ದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ(Bengaluru).
ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು 63ರ ವೃದ್ಧೆಯೊಬ್ಬರು 70ರ ಅಜ್ಜನ ವಿರುದ್ಧ ಪೊಲೀಸ್(Police Station)ಠಾಣೆಯ ಮೆಟ್ಟಿಲೇರಿದ್ದಾರೆ. 70 ವರ್ಷದ ಲೋಕನಾಥನ್ ಎಂಬ ವ್ಯಕ್ತಿ ಪ್ರೀತಿಸಿ (Love)ಮದುವೆಯಾಗಿ (Marraige)ವಂಚಿಸಿದ್ದಾನೆ ಎಂದು 63ರ ದಯಾಮಣಿ ಎಂಬವರು ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ನಿವಾಸಿಗಳಾದ ದಯಾಮಣಿ ಮತ್ತು ಲೋಕನಾಥನ್ ನಡುವೆ ಪ್ರೇಮಾಂಕುರವಾಗಿದ್ದು, ಈ ಜೋಡಿ ಜೊತೆಯಾಗಿ ತಿರುಗಾಟ ನಡೆಸಿದ್ದಾರೆ. ಆದರೆ, ಈ ನಡುವೆ ಲೋಕನಾಥನ್ ದಯಾಮಣಿಯಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ ಎಂದು ವೃದ್ದೆ ಆರೋಪ ಮಾಡಿದ್ದಾರೆ.
ಕರೆದಾಗ ಹೋಗಿಲ್ಲ ಎಂಬ ಕಾರಣಕ್ಕೆ ಕೆಟ್ಟ ಪದಗಳನ್ನು ಬಳಸಿ ಕೊಲೆ ಮಾಡುವ ಬೆದರಿಕೆಯನ್ನು ಲೋಕನಾಥನ್ ಹಾಕಿದ್ದು, ಸದ್ಯ ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ವೃದ್ಧ ಲೋಕನಾಥ್ ವಿರುದ್ಧ ದಯಾಮಣಿ ದೂರು ನೀಡಿದ್ದಾರೆ. ಈ ಸಂಬಂಧ ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಿಳೆಯರೇ ‘ಗೃಹಲಕ್ಷ್ಮಿ’ ಯೋಜನೆ ಕುರಿತು ಬಿಗ್ ಅಪ್ಡೇಟ್! ಸಿಗಲಿದೆ ‘ಸ್ಮಾರ್ಟ್ ಕಾರ್ಡ್’
