UT Khadar: ಹಿಂದೂ ಧರ್ಮದಲ್ಲಿ(Hindu Religion)ನಾಗಾರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಅದರಲ್ಲಿಯೂ ದಕ್ಷಿಣ ಕನ್ನಡ , ಕರಾವಳಿ ಭಾಗದಲ್ಲಿ ನಾಗಾರಾಧನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಆದ್ರೆ, ಎಲ್ಲರಿಗೂ ಗೊತ್ತಿರುವ ಹಾಗೆ,ಯು. ಟಿ. ಖಾದರ್( UT Khadar) ಅವರು ಎಲ್ಲರೊಂದಿಗೆ ಸಾಮರಸ್ಯದಿಂದ ಬೆರೆಯುತ್ತಾರೆ.ಆದ್ರೆ, ಇದೀಗ ಹೆಚ್ಚು ಗಮನ ಸೆಳೆಯುತ್ತಿರುವ ವಿಚಾರ ಒಂದಿದೆ. ಅದೇನು ಅಂತೀರಾ?
ತಮ್ಮ ಉದಾರ ಮನೋಭಾವ, ನೋವಿಗೆ ಸ್ಪಂದಿಸುವ ಗುಣದಿಂದ ಮನೆ ಮಾತಾಗಿರುವ ಯು. ಟಿ. ಖಾದರ್ ಇದೀಗ ತಮ್ಮ ವಿಶಾಲ ಮನೋಭಾವದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು!!ವಿಟ್ಲ ಸಮೀಪದ ಪುಣಚ ಪರಿಯಾಲಡ್ಕದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್(U. T. Khader) ಅವರಿಗೆ ಸೇರಿದ ಎಕ್ರೆಗಟ್ಟಲೆ ಫಲವತ್ತಾದ ಫಸಲು ಬರುವಂತಹ ಜಮೀನಿದ್ದು, ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗರ ಪಂಚಮಿ ವಿಜ್ರಂಭಣೆಯಿಂದ ನಡೆಯುತ್ತಂತೆ.

ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರ ಪಾಲಿಗೆ ಜಮೀನು ದೊರಕಿತ್ತು. ಪಾಲು ಮಾಡುವಾಗ ಪಿತ್ರಾರ್ಜಿತ ಸೊತ್ತಾಗಿ ಜಾಗ ಖಾದ ಪಾಲಾಗಿ ಹೋಗಿತ್ತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಲ್ಲಿತ್ತು. ದಳವಾಯಿ ಕುಟುಂಬದ ನಾಗನಕಟ್ಟೆ ಮುಸ್ಲಿಂ ಧರ್ಮದವರ ಸ್ಥಳದಲ್ಲಿ ಇದ್ದ ಹಿನ್ನೆಲೆ ಅಲ್ಲಿನ ಜನರು ಬೇರೆ ಕಡೆ ಆರಾಧನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿ ಬೇರೆ ಕಡೆ ಪೂಜೆ ನಡೆಸುತ್ತಿದ್ದರಂತೆ.
ಆದ್ರೆ, ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದ ಹಿನ್ನೆಲೆ ದಳವಾಯಿ ಕುಟುಂಬಕ್ಕೆ ಅಷ್ಟಮಂಗಳ ಪ್ರಶ್ನೆ ಇಟ್ಟ ಸಂದರ್ಭ ಮೂಲ ಜಾಗದಲ್ಲಿ ಪೂಜೆ ನಡೆಯಬೇಕೆಂಬ ವಿಚಾರ ಗೊತ್ತಾಗಿದೆ. ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಗೆ ಲೋಪವಾಗಬಾರದೆಂಬ ಕಾರಣಕ್ಕೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಜನರ ಮನವಿಗೆ ಸ್ಪಂದಿಸಿದ ಸಚಿವ ಖಾದರ್ ತಾನೊಬ್ಬ ಮುಸಲ್ಮಾನ ಎಂದು ಜಾತಿಯ ಚಕಾರ ಎತ್ತದೆ ಉದಾರ ಮನೋಭಾವದಿಂದ ಆ ಪರಿಸರದ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ನೀಡಿದ್ದು ಈ ಮೂಲಕ ತಮ್ಮ ವಿಶಾಲ ಮನೋಭಾವದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
