Director: ನಟಿಸಲು ಅವಕಾಶ ನೀಡುತ್ತೇನೆಂದು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ನಿರ್ದೇಶಕ(Director)ಬಂಧನ (Arrest)ಮಾಡಿದ ಘಟನೆ ವರದಿಯಾಗಿದೆ.
ಕೊಚ್ಚಿಯಲ್ಲಿ(Kochhi )ಅಪ್ರಾಪ್ತೆ ಮೇಲೆ ದೈಹಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಾಲಿವುಡ್ ನಿರ್ದೇಶಕರೊಬ್ಬರನ್ನು ಪೊಲೀಸರು (Police)ಬಂಧಿಸಿದ್ದಾರೆ.ಈ ವರ್ಷ ತೆರೆಕಂಡ ಮಲಯಾಳಂ ಸಿನಿಮಾ (Malayalam )‘ಬೈನರಿ’ಯನ್ನು ಜಾಸಿಕ್ ಅಲಿ ನಿರ್ದೇಶನ ಮಾಡಿದ್ದಾರೆ. ಅಪ್ರಾಪ್ತೆಗೆ ನಟನೆಯಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ವಿವಿಧ ಸ್ಥಳಕ್ಕೆ ಕರೆದೊಯ್ದು ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಸಿನಿಮಾದಲ್ಲಿ ನಟನೆಯ ಅವಕಾಶ ನೀಡುವುದಾಗಿ ಅಪ್ರಾಪ್ತೆಯನ್ನು ನಂಬಿಸಿ ವಂಚಿಸಿದ ಜೊತೆಗೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ದೂರಿನ ಹಿನ್ನೆಲೆಯಲ್ಲಿ ಮಲಯಾಳಂ ನಿರ್ದೇಶಕ ಜಾಸಿಕ್ ಅಲಿ (36)ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋಝಿಕ್ಕೋಡ್ ಕುರುವಂಗಡ್ ಮೂಲದ ಜಾಸಿಕ್ ಅಲಿಯನ್ನು ನಡಕ್ಕಾವುವಿನ ಮನೆಯೊಂದರಿಂದ ಪೋಕ್ಸೋ ಆರೋಪದಡಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ. ದೂರು ದಾಖಲಾದ ದಿನದಿಂದ ನಿರ್ದೇಶಕ ಜಾಸಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದನಂತೆ. ಪೊಲೀಸರು ವಿವಿಧ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿ ನಡಕ್ಕಾವುವಿನ ಮನೆಯೊಂದರಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು: ಪೊಲೀಸ್ ಅಧಿಕಾರಿ ಎಂದು ನಾಟಕವಾಡಿದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್!
