Accident: ತಮಿಳುನಾಡಿನಲ್ಲಿ ಮಕ್ಕಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಐಸ್ಕ್ರೀಮ್ ಪಾರ್ಲರ್ (Ice Cream) ಹೋಗುತ್ತಿರುವ ಸಂದರ್ಭ ಪಿಕಪ್ ವ್ಯಾನ್ ಗುದ್ದಿದ ಪರಿಣಾಮ(Accident )ನಾಲ್ವರು ಗಾಯಗೊಂಡ ಘಟನೆ ವರದಿಯಾಗಿದೆ.
ತಮಿಳುನಾಡಿನ (Tamilnadu )ಕೊಯಮತ್ತೂರು ಜಿಲ್ಲೆಯಮೆಟ್ಟುಪಾಳ್ಯಂನಲ್ಲಿ ರಸ್ತೆಯ ಎದುರು ಬದಿಯಿಂದ ವೇಗವಾಗಿ ಬಂದ ಪಿಕಪ್ ವ್ಯಾನ್ ನಾಲ್ವರ ಮೇಲೆ ಹರಿದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.ವ್ಯಕ್ತಿಯೊಬ್ಬರು ತಮ್ಮ ಮಕ್ಕಳನ್ನು ಮೀನಾಕ್ಷಿ ಆಸ್ಪತ್ರೆ ಬಳಿಯ ಐಸ್ ಕ್ರೀಮ್ ಪಾರ್ಲರ್ಗೆ ಕರೆದೊಯ್ಯುವ ವೇಳೆ ಅವಘಡ ಸಂಭವಿಸಿದೆ.
ತಂದೆ ಬೈಕ್‌ನಿಂದ ಇಳಿಸುತ್ತಿದ್ದಾಗ ಇಬ್ಬರು ಮಕ್ಕಳು ಇಳಿದಿದ್ದು, ಇನ್ನೆರಡು ಮಕ್ಕಳು ಕೆಳಗಿಳಿಯಲು ಸಹಾಯ ಮಾಡುತ್ತಿದ್ದ ಸಂದರ್ಭ ಮೆಟ್ಟುಪಾಳ್ಯಂನಿಂದ ಕರಾಮಡೈ ಕಡೆಗೆ ವೇಗವಾಗಿ ಬಂದ ಪಿಕಪ್ ವ್ಯಾನ್ ರಸ್ತೆಯ ಎದುರು ಬದಿಗೆ ನುಗ್ಗಿ ಟ್ರಾಫಿಕ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಆ ಬಳಿಕ ವ್ಯಾನ್ (van)ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತ (Accident)ನಡೆದ ತಕ್ಷಣವೇ ಅಲ್ಲಿದ್ದ ದಾರಿಹೋಕರು ಸಂತ್ರಸ್ತರಿಗೆ ನೆರವಾಗಲು ಸ್ಥಳಕ್ಕೆ ಧಾವಿಸಿದ್ದು, ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
