Viral News: ಯುವತಿಯೋರ್ವಳು ಗನ್ (Gun) ಹಿಡಿದುಕೊಂಡು ಬೈಕ್ ನಲ್ಲಿ (bike) ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಯುವಕ ಬೈಕ್ ಸವಾರಿ ಮಾಡುತ್ತಿದ್ದು ಆತನ ಹಿಂಬದಿ ಹುಡುಗಿಯೊಬ್ಬಳು ಕುಳಿತುಕೊಂಡಿದ್ದು, ಬೈಕ್ ವೇಗವಾಗಿ ಸಾಗುತ್ತಿದ್ದಾಗ ಯುವತಿ ಎರಡೂ ಕೈಗಳಲ್ಲಿ ಗನ್ ಹಿಡಿದು ಗಾಳಿಯಲ್ಲಿ ಬೀಸುತ್ತಿರುವ ದೃಶ್ಯ ಸಖತ್ ವೈರಲ್ (Viral News) ಆಗಿದೆ.
ಟಾಪ್ ಮತ್ತು ಶಾರ್ಟ್ಸ್ ಧರಿಸಿದ ಹುಡುಗಿ, ಚಲಿಸುವ ಬೈಕಿನ ಮೇಲೆ ನಿಂತು, ಗಾಳಿಯಲ್ಲಿ ಗನ್ ಬೀಸುತ್ತಾ ಪ್ರದರ್ಶನ ಮಾಡುತ್ತಿದ್ದು, ಇಬ್ಬರ ಪಕ್ಕದಲ್ಲಿ ಸವಾರಿ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗಿದೆ ವಿಡಿಯೋ ಪೊಲೀಸ್ ಗಮನಿಸಿದ್ದು, ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿದ್ದು, ಶೀಘ್ರದಲ್ಲೇ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
