Home » Donald Trump: ಭಾರತಕ್ಕೆ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್‌! ʼನಾನೇನಾದರೂ ಅಧ್ಯಕ್ಷನಾದರೆ….

Donald Trump: ಭಾರತಕ್ಕೆ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್‌! ʼನಾನೇನಾದರೂ ಅಧ್ಯಕ್ಷನಾದರೆ….

0 comments
Donald Trump

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಭಾರತದ ಮೇಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಅಮೆರಿಕಾದ ಕೆಲವು ಉತ್ಪನ್ನಗಳ ಮೇಲೆ ಭಾರತ ಸುಂಕ ವಿಧಿಸಿರುವುದಕ್ಕಾಗಿ ಅಮೆರಿಕದ (USA)ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ, ಯುಎನ್ ಭಾರತೀಯ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕವನ್ನು ವಿಧಿಸುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.ಭಾರತವು ಇಲ್ಲಿಯವರೆಗೆ ವಿಧಿಸಿರುವ ಹೆಚ್ಚಿನ ಸುಂಕಗಳನ್ನು ತಾನು ಬಲವಾಗಿ ಟೀಕೆ ಮಾಡುತ್ತಿದ್ದೇನೆ ಎಂದು ಟ್ರಂಪ್ ಸಂದರ್ಶನವೊಂದರಲ್ಲಿ ಭಾರತದ ಬಗ್ಗೆ ಟೀಕೆ ಮಾಡಿದ್ದಾರೆ.

“ಭಾರತವು ಅತಿ ಹೆಚ್ಚು ಸುಂಕಗಳನ್ನು ವಿಧಿಸುತ್ತಿದ್ದು, ಭಾರತವು ನಮ್ಮಿಂದ ಸುಂಕವನ್ನು ವಿಧಿಸಿದರೆ ನಾವು ಭಾರತದೊಂದಿಗೆ(India )ಹೇಗೆ ವ್ಯಾಪಾರ (sales)ಮಾಡಬಹುದು. ಅವರು ನಮ್ಮ ಮೇಲೆ ಶೇಕಡ 100, 150 ಮತ್ತು 200 ರಷ್ಟು ಸುಂಕವನ್ನು ವಿಧಿಸಿದ್ದು, ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ಹಾಗೆ ಅಮೆರಿಕ ಕೂಡ ಭಾರತೀಯ ಉತ್ಪನ್ನಗಳಿಗೂ ಅದೇ ರೀತಿ ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಟ್ರಂಪ್‌ ಮೇ 2019 ರಲ್ಲಿ ಯುಎನ್ ಅಧ್ಯಕ್ಷರಾಗಿದ್ದ ಸಂದರ್ಭ ಹೆಚ್ಚಿನ ತೆರಿಗೆಗಳಿಂದ (Tax )ಭಾರತವನ್ನು ‘ಸುಂಕದ ರಾಜ’ ಎಂದು ವಿಡಂಬನೆ ಮಾಡಿದ್ದಾರೆ. ಭಾರತವು ತನ್ನ ಮಾರುಕಟ್ಟೆಗಳಿಗೆ ನ್ಯಾಯಯುತ ಮತ್ತು ಸರಿಯಾದ ಯುಎಸ್‌ಗೆ ನೀಡುತ್ತಿಲ್ಲ ಎಂದು ಆರೋಪಿಸಿ ಟ್ರಂಪ್ ಭಾರತವನ್ನು ಜಿಎಸ್‌ಪಿಯಿಂದ ತೆಗೆದುಹಾಕಿದ್ದರು. GSP ಅಡಿಯಲ್ಲಿ, ಅಮೆರಿಕವು 100 ಕ್ಕೂ ಹೆಚ್ಚು ದೇಶಗಳಿಂದ ಆಮದು ಮಾಡಿಕೊಳ್ಳುವ ಸಾವಿರಾರು ಸರಕುಗಳ ಮೇಲೆ ಯಾವುದೇ ಸುಂಕ ವಿಧಿಸುವುದಿಲ್ಲ. ಅದು ಆ ದೇಶಗಳ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ.

ಇದನ್ನೂ ಓದಿ: ಮಂಗಳೂರು: ನಾಗರಾಧಕರಿಗೆ ಕೇದಗೆ ಬದಲಿಗೆ ಮುಂಡೇವು ಮಾರಾಟ! ಸಾವಿರಾರು ರೂಪಾಯಿ ಮೋಸ!

You may also like