Home » House vastu tips: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ, ಲಕ್ಷ್ಮಿ ನಿಮಗೊಲಿಯುತ್ತಾಳೆ ಖಂಡಿತ!!

House vastu tips: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ, ಲಕ್ಷ್ಮಿ ನಿಮಗೊಲಿಯುತ್ತಾಳೆ ಖಂಡಿತ!!

2 comments
House vastu tips

House Main Door Vastu Tips: ಮನೆಯ ವಾಸ್ತು ವಿಚಾರಕ್ಕೆ ಬಂದರೆ ಮುಖ್ಯವಾಗಿ ಮುಖ್ಯ ದ್ವಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂತೆಯೇ ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಮುಖ್ಯ. ಯಾಕೆಂದರೆ ಮನೆಯ ಮುಖ್ಯ ಬಾಗಿಲಲ್ಲಿ ಧನಾತ್ಮಕ ಶಕ್ತಿಯು ಸಂಗ್ರಹವಾಗಿರುತ್ತೆ ಎಂದು ನಂಬಲಾಗಿದೆ. ಮುಂಜಾನೆ ಮನೆಯ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯುವುದರಿಂದ ಲಕ್ಷ್ಮಿಯು ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ. ಮತ್ತು ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎನ್ನಲಾಗುತ್ತದೆ.

ಇದರ ಹೊರತು ನಿಮ್ಮ ಮನೆ ಬಾಗಿಲಿನ ಮುಂಭಾಗ ಈ ಮೂರು ವಸ್ತುಗಳನ್ನು ಬೆಳಗ್ಗೆ ಎದ್ದ ತಕ್ಷಣ ಚುಮುಕಿಸೋದ್ರಿಂದ ಲಕ್ಷ್ಮೀಯೂ ನೇರವಾಗಿ ಮನೆಗೆ ಆಗಮಿಸುತ್ತಾಳಂತೆ (House Main Door Vastu Tips) .

ಧಾರ್ಮಿಕ ನಂಬಿಕೆಗಳ ಪ್ರಕಾರ ಅರಿಶಿನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬೆಳಗಿನ ಪೂಜೆ ನಂತರ, ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಬೆಳಿಗ್ಗೆ ಮುಖ್ಯ ಬಾಗಿಲಿನ ಮೇಲೆ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಐಶ್ವರ್ಯ ಹೆಚ್ಚುತ್ತದೆ. ಮತ್ತು ಲಕ್ಷ್ಮಿ ದೇವಿಯೂ ನಿಮ್ಮ ಮನೆಯತ್ತ ಆಕರ್ಷಿತಳಾಗುತ್ತಾಳೆ.9
ಮನೆಯ ಸುತ್ತ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮತ್ತು ನಿಮ್ಮ ಮನೆಯಲ್ಲಿ ಯಾವತ್ತೂ ಯಾವುದೇ ಕೊರತೆ ಉಂಟಾಗುವುದಿಲ್ಲ.

ಧಾರ್ಮಿಕ ನಂಬಿಕೆಗಳಲ್ಲಿ ಗಂಗಾಜಲವನ್ನು ಪವಿತ್ರ ಜಲವೆಂದು ಪರಿಗಣಿಸಲಾಗಿದೆ. ಗಂಗಾಜಲಕ್ಕೆ ಎಲ್ಲಾ ರೀತಿಯ ಋಣಾತ್ಮಕತೆಯನ್ನು ಹೋಗಲಾಡಿಸುವ ಶಕ್ತಿಯಿದೆ. ಪ್ರತಿದಿನ ಮನೆಯ ಮುಖ್ಯ ಬಾಗಿಲಿಗೆ ಗಂಗಾಜಲದ ಕೆಲವು ಹನಿಗಳನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಎಲ್ಲಾ ರೀತಿಯ ನಕಾರಾತ್ಮಕತೆಯು ನಿಮ್ಮ ಮನೆಯಿಂದ ಹೊರಹೋಗುತ್ತದೆ.

ವಾಸ್ತವವಾಗಿ ಉಪ್ಪಿಗೆ ಪಾಸಿಟಿವ್ ಎನರ್ಜಿ ಇದೆ. ಆದ್ದರಿಂದ ಅನೇಕ ಜನರು ತಮ್ಮ ಮನೆಯನ್ನು ಪ್ರತಿದಿನ ಉಪ್ಪು ನೀರಿನಿಂದ ಒರೆಸುತ್ತಾರೆ. ಇದಲ್ಲದೇ ಪ್ರತಿನಿತ್ಯ ನೀರಿನೊಂದಿಗೆ ಉಪ್ಪನ್ನು ಮುಖ್ಯ ಬಾಗಿಲಿಗೆ ಚಿಮುಕಿಸಿದರೆ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಅಷ್ಟೇ ಅಲ್ಲದೇ, ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸಲು ಬಿಡುವುದಿಲ್ಲ.

ಇದನ್ನೂ ಓದಿ: ಖಾರ ತಿಂದು ನಾಲಗೆ ಧಗಧಗ ಎಂದು ಉರಿಯುತ್ತಿದ್ದರೆ ಇಲ್ಲಿದೆ ಉರಿಶಮನ ಪರಿಹಾರ! ನೀರು ಕುಡಿಯಬೇಕೇ? ಹೌದು , ಇಲ್ಲ ಎಂಬುವುದಕ್ಕೆ ಇಲ್ಲಿದೆ ಉತ್ತರ!!!

You may also like

Leave a Comment