Home » Bengaluru: ಪ್ರಯಾಣಿಕನೋರ್ವನ ಬ್ಯಾಗ್‌ನಲ್ಲಿ ಮೊಸಳೆ, ಕಾಂಗರೂ! ಏರ್ಪೋಟಲ್ಲಿ ಬಂಧನ, 234 ವನ್ಯಜೀವಿಗಳ ರಕ್ಷಣೆ!

Bengaluru: ಪ್ರಯಾಣಿಕನೋರ್ವನ ಬ್ಯಾಗ್‌ನಲ್ಲಿ ಮೊಸಳೆ, ಕಾಂಗರೂ! ಏರ್ಪೋಟಲ್ಲಿ ಬಂಧನ, 234 ವನ್ಯಜೀವಿಗಳ ರಕ್ಷಣೆ!

by Mallika
1 comment
Bengaluru

Bengaluru: ಪ್ರಯಾಣಿಕನೋರ್ವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru) ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಅಪರೂಪದಲ್ಲಿ ಅಪರೂಪವಾದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ತಂದಿಟ್ಟು ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಈತನನ್ನು ಈಗ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧನ ಮಾಡಿದ್ದಾರೆ

ಈತನ ಟ್ರಾಲಿ ಬ್ಯಾಗ್‌ನಲ್ಲಿ ಹೆಬ್ಬಾವು ಮರಿ, ಊಸರವಳ್ಳಿ, ಮೊಸಳೆ ಮರಿ, ಆಮೆಗಳು, ಮರಿ ಕಾಂಗರೂ ಸೇರಿ ಒಟ್ಟು 234 ವನ್ಯಜೀವಿಗಳು ಪತ್ತೆಯಾಗಿದೆ.

ಈತ ನಿರ್ಗಮನ ದ್ವಾರದ ಬಳಿ ಅನುಮಾನಾಸ್ಪದವಾಗಿ ವರ್ತಿಸಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಅನುಮಾನಗೊಂಡು, ಆತನನ್ನು ವಶಕ್ಕೆ ಪಡೆದಾಗ ಇವೆಲ್ಲ ದೊರಕಿದೆ. ಸೋಮವಾರ ರಾತ್ರಿ 10.30ಕ್ಕೆ ಬ್ಯಾಂಕಾಕ್‌ನಿಂದ ಎಫ್‌.ಡಿ-137 ಸಂಖ್ಯೆ ವಿಮಾನದಲ್ಲಿ ಈತ ಬಂದಿದ್ದ. ಈತನ ಮೇಲೆ ಕಸ್ಟಮ್ಸ್‌ ಅಧಿಕಾರಿಗಳು ವನ್ಯಜೀವಿಗಳ ಕಳ್ಳ ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ, ಜೊತೆಗೆ ಕೈಗೊಂಡ ಕೆಲಸ ಕೂಡಾ ಹೂ ಎತ್ತಿದಾಗೆ ಸುಲಭದಲ್ಲಿ ನಡೆಯುತ್ತೆ!!!

You may also like

Leave a Comment