Home » IAS Interesting Questions: ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?

IAS Interesting Questions: ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?

by ಹೊಸಕನ್ನಡ
144 comments
IAS Interesting Questions

IAS Interesting Questions: ಇದು ಮತ್ತೊಂದು ಆಸಕ್ತಿಕರ ಮತ್ತು ಐಎಎಸ್ ಪ್ರಶ್ನೆಗಳಲ್ಲಿ ಕೇಳಬಹುದಾದ ಪ್ರಶ್ನೆ (IAS Interesting Questions). ಒಂದಷ್ಟು ಓದಿಕೊಂಡು, ವಿಜ್ಞಾನದ ಬಗ್ಗೆ ಆಸಕ್ತಿ ಇಟ್ಟುಕೊಂಡ ಸಾಮಾನ್ಯರೂ ಕೂಡ ಇಂತಹ ಪ್ರಶ್ನೆಗೆ ಉತ್ತರಿಸುವುದುಂಟು. ನೀವು ಕೂಡ ಅಂತಹ ಬುದ್ಧಿವಂತರಲ್ಲಿ ಒಬ್ಬರೇ ? ನಿಮಗೆ ನೀವೇ ಪ್ರಶ್ನೆ ಮಾಡಿಕೊಂಡು, ನಿಮ್ಮನ್ನು ನೀವೇ ಮೌಲ್ಯ ಮಾಪನ ಮಾಡಿಕೊಳ್ಳಿ. ಒಂದು ವೇಳೆ ನೀವು ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದೀರಿ ಎಂದಾದರೆ ನಿಮ್ಮ ಬೆನ್ನಿಗೆ ನೀವೇ ತಟ್ಟಿಕೊಂಡು ‘ ಶಬಾಷ್ ‘ ಹೇಳಿ ಹೆಮ್ಮೆ ಪತ್ತುಕೊಳ್ಳಲು ಮುಜುಗರ ಬೇಡ.

ಪ್ರಶ್ನೆ : ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?

ಈ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಸಣ್ಣ ಎಲಿಮೆಂಟರಿ ಲೆವೆಲಿನ ಪಾಠ ಮಾಡೋಣ ಅನ್ನಿಸುತ್ತಿದೆ. ತೂಕ (Weight) ಮತ್ತು ದ್ರವ್ಯರಾಶಿ (Mass) ಎನ್ನುವ ಎರಡು ಪದಗಳನ್ನು ನಾವು ಕೇಳಿದ್ದೇವೆ. ತೂಕ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ಎತ್ತರದಿಂದ ಇನ್ನೊಂದು ಎತ್ತರಕ್ಕೆ, ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಬದಲಾಗುತ್ತದೆ. ಆದರೆ ದ್ರವ್ಯರಾಶಿ ಬದಲಾಗದೆ ಅಷ್ಟೇ ಇರುತ್ತದೆ !

ಚಂದ್ರನ ಮೇಲೆ, 1 ಕಿಲೋಗ್ರಾಂ ತೂಕವನ್ನು ಎತ್ತಲು ನಿಮಗೆ ಆರು ಪಟ್ಟು ಕಡಿಮೆ ಶಕ್ತಿಯ ಅಗತ್ಯವಿರುತ್ತದೆ. ಭೂಮಿಯಲ್ಲಿ ಒಂದು ಕೆಜಿ ತೂಕ ಇರುವ ವಸ್ತುವು ಚಂದ್ರನಲ್ಲಿ ಕೇವಲ 162 ಗ್ರಾಂ ತೂಗುತ್ತದೆ. ಆ ವಸ್ತುವಿನ ದ್ರವ್ಯರಾಶಿ ಅಂದರೆ ಮಾಸ್ ಅಷ್ಟೇ ಇದ್ದರೂ ತೂಕದಲ್ಲಿ ವ್ಯಾಪಕ ಕಡಿಮೆ ಆಗುತ್ತದೆ. ಇದು ಏಕೆ ಹೀಗೆ ಎಂದು ನೀವೆಲ್ಲ ಸೋಜಿಗ ಪಡಬಹುದು. ಅದಕ್ಕೆ ಇದೆ ಅದೊಂದು ಕಾರಣ. ಚಂದ್ರನ ಗುರುತ್ವಾಕರ್ಷಣೆಯು ಭೂಮಿಗಿಂತ ಆರು ಪಟ್ಟು ದುರ್ಬಲವಾಗಿರುತ್ತದೆ. ಆದುದರಿಂದ ಚಂದ್ರನಲ್ಲಿ ಎಲ್ಲಾ ವಸ್ತುಗಳು 6 ಪಟ್ಟು ಹಗುರವಾಗಿ ಕಾಣುತ್ತವೆ. ಭೂಮಿಯಲ್ಲಿ ನೀವು ನಿಮ್ಮ ಪತ್ನಿಯನ್ನು ಎತ್ತಿದ್ರೆ, ಅದೇ ಚಂದ್ರನಲ್ಲಿ ಅಷ್ಟೇ ಶಕ್ತಿಗೆ ನೀವು ಮನೆ ಮಂದಿಯನ್ನೆಲ್ಲ ಎತ್ತಬಹುದು.

ಅದೇ ಕಾರಣಕ್ಕೆ, ಚಂದ್ರದಲ್ಲಿ ನಾವು ನಡೆದಾಡಲು ಓಡಲು ಸುಲಭ. ಅಲ್ಲಿ ನಡೆದಾಡಿದರೆ ನಾವು ಸಿನಿಮಾಗಳಲ್ಲಿ ಸ್ಲೋ ಮೋಷನ್ ನಲ್ಲಿ ನಡೆದಾಡಿದಂತೆ ಭಾಸವಾಗುತ್ತದೆ. ಬಹುಷಃ ಮೂನ್ ವಾಕ್ (Moon walk) ಪದವನ್ನು ನೀವು ಕೇಳಿಯೇ ಇದ್ದೀರಿ. ವಿಶ್ವವಿಖ್ಯಾತ ಡ್ಯಾನ್ಸರ್ ಮೈಕಲ್ ಜಾಕ್ಸನ್ ಪ್ರಸ್ತುತಪಡಿಸಿದ ಮೂನ್ ಡ್ಯಾನ್ಸ್ ಚಂದ್ರನ ಮೇಲೆ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಸಹವರ್ತಿ ಇಟ್ಟ ಹೆಜ್ಜೆಗಳ ಅನುಕರಣೆಯಿಂದ ಮೂಡಿಬಂದ ಡ್ಯಾನ್ಸ್ ಸ್ಟೆಪ್ ಗಳಾಗಿವೆ.

ಭೂಮಿಯ ಮೇಲೆ, 1 ಕೆಜಿ ಎತ್ತಲು ಅಗತ್ಯವಿರುವ ಬಲವು 9.81 ನ್ಯೂಟನ್ ಬಲವಾಗಿರುತ್ತದೆ. ಇದು ಗುರುತ್ವಾಕರ್ಷಣ ಶಕ್ತಿ. ಚಂದ್ರನ ಮೇಲೆ ಇರುವ ಗುರುತ್ವಾಕರ್ಷಣ ಶಕ್ತಿ ಕೇವಲ 1.62 N ಮಾತ್ರ. ಅಂದರೆ, ಚಂದ್ರನ ಮೇಲೆ ಒಂದು ಕಿಲೋಗ್ರಾಂ ಭೂಮಿಯ ಮೇಲೆ ಕೇವಲ 162 ಗ್ರಾಂಗಳನ್ನು ಎತ್ತುವಂತೆ ಭಾಸವಾಗುತ್ತದೆ.

ಇದನ್ನೂ ಓದಿ: IAS Interesting Question: ಯಾವ ಊರಿನಲ್ಲಿ ದಿನ ಮತ್ತು ವರ್ಷಗಳು ಒಂದೇ ಆಗಿರುತ್ತವೆ ?

You may also like

Leave a Comment