Home » Karnika Prediction: ಜನರಿಗೆ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಿದ ಕಾರ್ಣಿಕ! ಏನದು?

Karnika Prediction: ಜನರಿಗೆ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಿದ ಕಾರ್ಣಿಕ! ಏನದು?

1 comment
Karnika Prediction

Karnika Prediction: ಇತ್ತೀಚಿಗೆ ಕೋಡಿಶ್ರೀಗಳು (Kodi Mut Swamiji)ನೀಡಿದ ಭವಿಷ್ಯದ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆಯ ಸಂದೇಶ ಸಾರುವ ಕಾರ್ಣಿಕ( Karnika Prediction)ಹೊರಬಿದ್ದಿದೆ.

ಶ್ರಾವಣ ಮಾಸದ ಮಧ್ಯಂತರದ ಸಂದರ್ಭ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆ ಸುರಿಯಲಿದೆ. ಅಂತಾರಾಷ್ಟ್ರೀಯ(International level)ಮಟ್ಟದಲ್ಲಿ ಯುದ್ಧ(War )ಭೀತಿಯಿದ್ದು, ವಿಷಾನಿಲ ಬೀಸುವ ಸಂಭವ ಕೂಡ ಇದ್ದು, ಇದು ಎಲ್ಲೆಡೆಗೂ ಪಸರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು – ನೋವು(Death )ಸಂಭವಿಸುವ ಕುರಿತು ಕೋಡಿ ಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನೆ ಮಾಡುವ ಕಾರ್ಣಿಕ ಹೊರ ಬಿದ್ದಿದೆ.

ಪ್ರತಿ ವರ್ಷ ದಾವಣಗೆರೆ (Davanagere)ಜಿಲ್ಲೆಯ ಹರಿಹರದ ಕೋಮಾರನಹಳ್ಳಿ ಬಳಿಯಲ್ಲಿರುವ ಲಕ್ಷ್ಮೀ ರಂಗನಾಥ್ ಸ್ವಾಮಿ ದೇವಾಲಯದಲ್ಲಿ ಕಾರ್ಣಿಕ (Karnika) ನುಡಿಯಲಾಗುತ್ತದೆ.ಕಾರ್ಣಿಕವನ್ನು ಜನರು ಹೆಚ್ಚು ನಂಬುತ್ತಾರೆ(Trust)ಎಂಬುದಕ್ಕೆ ಸಾಗರೋಪಾತಿಯಲ್ಲಿ ಲಕ್ಷ್ಮೀ ರಂಗನಾಥ್ ಸ್ವಾಮಿ ದೇವಾಲಯದಲ್ಲಿ ಜಾತ್ರೆಯ ರೀತಿಯಲ್ಲಿ ಸೇರುವ ಜನಸ್ತೋಮವೇ ಸಾಕ್ಷಿ. ಪ್ರತಿ ವರ್ಷದ ನಾಗರ ಪಂಚಮಿ ನಂತರ ನಡೆಯುವ ಕಾರ್ಣಿಕವನ್ನು ಹರಳಹಳ್ಳಿ ಅಂಜನೇಯಸ್ವಾಮಿ ಪೂಜಾರಿ ನುಡಿಯುತ್ತಾರೆ. ಈ ಸಂದರ್ಭದಲ್ಲಿ ಭವಿಷ್ಯದ ಆಗು ಹೋಗುಗಳ ಬಗ್ಗೆ ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಒಗಟಾಗಿ ಅವರು ಭವಿಷ್ಯ ನುಡಿಯುತ್ತಾರೆ. ಇವರು ಹೇಳುವ ಕಾರ್ಣಿಕ ನುಡಿ ನಿಜವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ‌ಯಾಗಿದೆ.

” ಮುತ್ತಿನ ರಾಶಿಗೆ ಸರ್ಪ ಸುತ್ತಿತಲೆ, ಸರ್ಪಕ್ಕೆ ಹದ್ದು ಕಾದೀತಲೇ ಎಚ್ಚರ ” ಎಂದು ಹರಳಹಳ್ಳಿ ಅಂಜನೇಯಸ್ವಾಮಿ ಪೂಜಾರಿ ಕಾರ್ಣಿಕ ನುಡಿದಿದ್ದಾರೆ. ಕಾರ್ಣಿಕದ ಅರ್ಥವೇನು ಎಂದು ಗಮನಿಸಿದರೆ, ಮಳೆ ಬೆಳೆಯಲ್ಲಿ ರೈತರಿಗೆ ಸಂಕಷ್ಟ ಎದುರಾಗಲಿದ್ದು, ರಾಜಕೀಯದಲ್ಲಿ ಸಾಕಷ್ಟು ವೈಪರೀತ್ಯವಾಗಲಿದೆ ಎಂದು ಇಲ್ಲಿನ ಕೆಲ ಜನರು ಕಾರ್ಣಿಕವನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ, ಮುಂದೇನು ಕಾದಿದೆಯೋ ಎಂಬ ಭೀತಿ ಇಲ್ಲಿನ ಜನರನ್ನು ಕಾಡುತ್ತಿದೆ..

ಇದನ್ನೂ ಓದಿ: ಮಂಗಳೂರು: ಹೆಂಡತಿಗೆ ಕರೆ ಮಾಡ್ತೀಯಾ? ಎಂದು ಬಸ್ ಕಂಡಕ್ಟರ್ ಗೆ ಹಲ್ಲೆ ಯತ್ನ! ಸಾರ್ವಜನಿಕರ ತಡೆ

You may also like

Leave a Comment