Home » Madhya Pradesh: ಹಣ, ಬೇರೆ ವಸ್ತು ಅಲ್ಲ, ಚಾಕ್ಲೆಟ್‌ ಕಳ್ಳತನ! ಹುಡುಗಿಯರ ಗ್ಯಾಂಗ್‌ನಿಂದ ಅಂಗಡಿಯಲ್ಲಿ ಬೆಲೆಬಾಳುವ ಚಾಕ್ಲೇಟ್‌ ಕಳ್ಳತನ! ಯಾಕಾಗಿ?

Madhya Pradesh: ಹಣ, ಬೇರೆ ವಸ್ತು ಅಲ್ಲ, ಚಾಕ್ಲೆಟ್‌ ಕಳ್ಳತನ! ಹುಡುಗಿಯರ ಗ್ಯಾಂಗ್‌ನಿಂದ ಅಂಗಡಿಯಲ್ಲಿ ಬೆಲೆಬಾಳುವ ಚಾಕ್ಲೇಟ್‌ ಕಳ್ಳತನ! ಯಾಕಾಗಿ?

2,111 comments
Madhya Pradesh: ಹಣ, ಬೇರೆ ವಸ್ತು ಅಲ್ಲ, ಚಾಕ್ಲೆಟ್‌ ಕಳ್ಳತನ! ಹುಡುಗಿಯರ ಗ್ಯಾಂಗ್‌ನಿಂದ ಅಂಗಡಿಯಲ್ಲಿ ಬೆಲೆಬಾಳುವ ಚಾಕ್ಲೇಟ್‌ ಕಳ್ಳತನ! ಯಾಕಾಗಿ?

Madhya Pradesh: ಹುಡುಗಿಯರ ಗ್ಯಾಂಗ್‌ನಿಂದ (girls gang) ಅಂಗಡಿಯಲ್ಲಿ ಬೆಲೆಬಾಳುವ ಚಾಕ್ಲೇಟ್‌ ಕಳ್ಳತನ (chocolate theft) ಮಾಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್​ನಲ್ಲಿ ನಡೆದಿದೆ. ಈ ಕೃತ್ಯವು ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (cctv) ಕ್ಯಾಮೆರಾದಿಂದ ಬಹಿರಂಗವಾಗಿದೆ.

ಡಿಡಿ ನಗರದ ಗೇಟ್ ಬಳಿಯ ಅಂಗಡಿಯ ಮಾಲೀಕರು ಸಂಜೆ ಅಂಗಡಿಯಲ್ಲಿ ನಿರತರಾಗಿದ್ದಾಗ, ನಾಲ್ಕು ಹುಡುಗಿಯರು ಅಂಗಡಿಯಲ್ಲಿ ಸೇರಿಕೊಂಡು ಕಳ್ಳತನವನ್ನು ನಡೆಸಿದ್ದಾರೆ. ಆದರೆ, ಇವರು ಹಣ ಕದ್ದಿಲ್ಲ ಬದಲಾಗಿ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಇಟ್ಟಿದ್ದ ದುಬಾರಿ ಬೆಲೆಯ ಚಾಕೊಲೇಟ್‌ಗಳನ್ನು ಕದ್ದಿದ್ದಾರೆ.

ಅಂಗಡಿಯಲ್ಲಿ ಚಾಕೊಲೇಟ್‌ಗಳ ಕೊರತೆ ಕಂಡುಬಂದಿದ್ದು, ಅನುಮಾನ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯರಂತೆ ಕಾಣುವ ನಾಲ್ಕು ಹುಡುಗಿಯರಲ್ಲಿ ಕೆಲವರು ಕೌಂಟರ್ ಬಳಿ ನಿಂತಿದ್ದಾರೆ. ಅದರಲ್ಲಿ ಒಬ್ಬ ಹುಡುಗಿ ಅಂಗಡಿಯೊಳಗೆ ಹೋಗಿ ಫ್ರಿಡ್ಜ್‌ನಿಂದ ನಾಲ್ಕಾರು ಬಾರಿ ಚಾಕಲೇಟ್‌ಗಳನ್ನು ತೆಗೆದು ಜೀನ್ಸ್‌ನ ಜೇಬಿನಲ್ಲಿ ಇಟ್ಟುಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕದ್ದ ಚಾಕಲೇಟ್ ಬೆಲೆ ಸುಮಾರು 400 ರಿಂದ 500 ರೂಪಾಯಿ ಇದೆ ಎನ್ನಲಾಗಿದೆ. ಈ ಬಗ್ಗೆ ಮಳಿಗೆಗಳ ನಿರ್ವಾಹಕರು ಪೊಲೀಸರಿಗೂ ದೂರು ನೀಡಿದ್ದು, ಸಮೀಪದ ಹಾಸ್ಟೆಲ್‌ಗಳಲ್ಲಿ ವಾಸಿಸುವ ಬಾಲಕಿಯರೇ ಈ ಕೃತ್ಯ ಎಸಗಿದ್ದಾರೆ ಎಂದು ಅಂದಾಜಿಸಲಾಗಿದೆ. ದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Post Office Updates: ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಉಳಿತಾಯ ಖಾತೆ ಇದೆಯೇ? ಹಾಗಾದರೆ ಈ 3 ಬದಲಾವಣೆ ಬಗ್ಗೆ ಗಮನಿಸಿ!

You may also like

Leave a Comment