Home » Viral news: ರಾತ್ರಿ ಭೂತ ಕಂಡು ನಿದ್ದೆಯಿಲ್ಲದೆ ಒದ್ದಾಡಿದ ಮಹಿಳೆ! ಬೆಳಗ್ಗೆ ಎದ್ದು ನೋಡಿದಾಗ ತಿಳಿಯಿತು ಸತ್ಯ! ವೈರಲ್‌ ವೀಡಿಯೋ ಸುದ್ದಿ!!

Viral news: ರಾತ್ರಿ ಭೂತ ಕಂಡು ನಿದ್ದೆಯಿಲ್ಲದೆ ಒದ್ದಾಡಿದ ಮಹಿಳೆ! ಬೆಳಗ್ಗೆ ಎದ್ದು ನೋಡಿದಾಗ ತಿಳಿಯಿತು ಸತ್ಯ! ವೈರಲ್‌ ವೀಡಿಯೋ ಸುದ್ದಿ!!

1 comment
Viral news

Viral News: ದಿನಂಪ್ರತಿ ಒಂದಲ್ಲ ಒಂದು ವಿಡಿಯೋ(Video) ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video)ಆಗಿ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮೊಗದಲ್ಲಿ ಹಾಸ್ಯ ತರಿಸಿದರೆ, ಮತ್ತೆ ಕೆಲವು ನಮ್ಮ ಕಣ್ಣ ಮುಂದೆ ಜೀವನದ ಸ್ವಾರಸ್ಯಕರ ಸಂಗತಿಯ ಕುರಿತ ವಿಚಾರಗಳನ್ನೂ ಅನಾವರಣ ಮಾಡಿ ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ.

ಭೂತ – ಪ್ರೇತ ಎಂದರೆ ಸಾಕು ಹೆದರಿ ಮೂಲೆ ಸೇರುವವರೆ ಹೆಚ್ಚು. ಅದರಲ್ಲೂ ರಾತ್ರಿ ಹೊತ್ತಲ್ಲಿ ದೆವ್ವ ಭೂತದ ಬಗ್ಗೆ ಮಾತಾಡಿದರೆ ಹೆಚ್ಚಿನವರಿಗೆ ಭಯದಲ್ಲೇ ನಿದ್ರೆ ಮಾಡದೆ ದೇವರ ಜಪ ಮಾಡುವುದು ಗ್ಯಾರಂಟೀ!! ಹೀಗಿರುವಾಗ ಭಯದಲ್ಲಿ ಸಣ್ಣ ಹಗ್ಗ ಕಂಡರೂ ಹಾವು ಎಂದು ಹೆದರುವ ಮಂದಿಯ ಹಾಗೆ ಮಹಿಳೆಯೊಬ್ಬಳು ತಮ್ಮ ಅನುಭವವನ್ನು(Viral News)ಶೇರ್ ಮಾಡಿದ್ದಾರೆ.

ಮಹಿಳೆಯೊಬ್ಬರಿಗೆ ರಾತ್ರಿ ನಿದ್ರೆ ಬರಲಿಲ್ಲವೆಂದು ಬಾಲ್ಕನಿ (Balcony) ಯಲ್ಲಿ ತಿರುಗಾಡಲು ಹೋಗಿದ್ದಾರೆ. ಆದ್ರೆ ಅಲ್ಲಿಯ ಕಂಡ ದೃಶ್ಯ ನೋಡಿ ಹೆದರಿದ ಮಹಿಳೆ ಭಯದಿಂದ ಮನೆಯೊಳಗೆ ಬಂದು 10 – 15 ಬಾರಿ ಹನುಮಾನ್ ಚಾಲೀಸಾವನ್ನು ಕೇಳಿದ್ದಾಳಂತೆ. ಮಹಿಳೆಗೆ ಬಾಲ್ಕನಿ ಮುಂದಿದ್ದ ಮರವೊಂದರಲ್ಲಿ ಭೂತ (Ghost) ಕಂಡಿದೆ. ಹೀಗೆ, ಭಯದಲ್ಲೇ ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆದಿದ್ದಾರೆ. ರಾತ್ರಿ ಬಾಲ್ಕಿನಿಗೆ ಹೋದಾಗ ಬಟ್ಟೆ ಧರಿಸಿದ್ದ, ಮಹಿಳೆ ಆಕಾರವೊಂದು ಆಕೆ ಕಂಡಿದೆ. ಅದು ಕೂಡ ಮರದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಭೂತವೆಂದು ನಡುಗುತ್ತಾ ಮನೆಯೊಳಗೆ ಮಹಿಳೆ ಹನುಮಾನ್ ಚಾಲಿಸಾ ಕೇಳುತ್ತಾ ಬೆಳಗ್ಗೆ ಆಗುವುದನ್ನು ಕಾಯುತ್ತಾ ಕೂತಿದ್ದರಂತೆ.

ಭೂತದ ಭಯದಲ್ಲೇ ರಾತ್ರಿ ಕಳೆದ ಮಹಿಳೆ ಬೆಳಿಗ್ಗೆ ಕೂಡ ಭೂತ ಕಾಣುತ್ತಾ ಎಂಬುದನ್ನು ನೋಡುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದಾರೆ. ದೇವರ ಜಪ ಮಾಡುತ್ತಾ ಭಯದಲ್ಲಿ ಬಾಲ್ಕನಿಗೆ ಹೋದಾಗ ಅಲ್ಲಿ ಕಂಡ ದೃಶ್ಯ ಆಕೆಯ ಮುಖದಲ್ಲಿ ನಗು ತರಿಸಿದೆ.ಹಿಂದಿನ ರಾತ್ರಿ ತಾನು ಹೆದರಿದ್ದನ್ನು ಕಂಡು ಈ ವಿಚಾರಕ್ಕೆ ಅಷ್ಟು ಹೆದರಿದೇನಾ ಎಂದುಕೊಂಡಿದ್ದಾರೆ. ಅಷ್ಟಕ್ಕೂ ಏನಿತ್ತು ಅಲ್ಲಿ ಎಂದು ನೀವು ಕೂಡ ಯೋಚಿಸುತ್ತಿದ್ದೀರಾ ಅಲ್ಲವೇ?

ಮಹಿಳೆಯೊಬ್ಬರು ತಮ್ಮ ನೈಟಿಯನ್ನು ವಿಚಿತ್ರವಾಗಿ ಒಣ ಹಾಕಿದ್ದು, ನೈಟಿಗೆ ಹ್ಯಾಂಗರ್ ಹಾಕಿ ಅದನ್ನು ಮರಕ್ಕೆ ನೇತು ಹಾಕಿದ್ದಾರೆ. ಆದ್ರೆ, ಈ ಮಹಿಳೆಗೆ ರಾತ್ರಿ ನೈಟಿ ಮಾತ್ರ ಕಾಣಿಸಿದೆಯೇ ವಿನಃ ಹ್ಯಾಂಗರ್ ಕಂಡಿಲ್ಲ. ಇದರಿಂದಾಗಿಯೇ ಮಹಿಳೆ ಅದನ್ನು ಭೂತ ಎಂದುಕೊಂಡಿದ್ದಾಳೆ. ಯಾರಾದ್ರೂ ನೈಟಿಯನ್ನು ಹೀಗೆ ಒಣ ಹಾಕ್ತಾರಾ ಎಂದು ಮಹಿಳೆ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದು, ಅನಿರುದ್ಧ ಜೋಶಿ ಹೆಸರಿನ ಟ್ವಿಟರ್(Twitter ) ಖಾತೆಯಲ್ಲಿ ಮಹಿಳೆ ವಿಡಿಯೋವನ್ನು ಹಂಚಿಕೊಂಡಿದ್ದು, ಟ್ವಿಟರ್ ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು 77 ಸಾವಿರಕ್ಕೂ ಹೆಚ್ಚಿನ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ವೈರಲ್ ವೀಡಿಯೋ ನೋಡಿ ನೆಟ್ಟಿಜನ್ಸ್ ತರಹೇವಾರಿ ಕಾಮೆಂಟ್ಸ್ ಮಾಡಿದ್ದಾರೆ.

ಇದನ್ನೂ ಓದಿ: Canara Bank: ಕೆನರಾ ಬ್ಯಾಂಕ್‌ನಿಂದ ಮಹತ್ತರ ಹೆಜ್ಜೆ; ಕೆನರಾ ಡಿಜಿಟಲ್‌ ರುಪೀ ಆಪ್‌ ಬಿಡುಗಡೆ!!! ಗ್ರಾಹಕರೇ ಇದರ ಪ್ರಯೋಜನವೇನು?

You may also like

Leave a Comment