Lizard: ಹಲ್ಲಿಯ ಶಕುನದ ಬಗ್ಗೆ ಹಲವಾರು ರೀತಿಯ ಮಾಹಿತಿ ಕೇಳಿರಬಹುದು. ಹಲ್ಲಿ ದೇಹದ ವಿವಿಧ ಭಾಗಗಳಲ್ಲಿ ಬಿದ್ದರೆ ಶುಭ ಮತ್ತು ಅಶುಭ ಪರಿಣಾಮ ಉಂಟಾಗುತ್ತೆ ಅನ್ನೋದನ್ನು ಸೂಚಿಸುತ್ತೆ. ಹೌದು, ಮನೆಯಲ್ಲಿ ಕಂಡುಬರುವ ಹಲ್ಲಿಗಳ (Lizard) ವರ್ತನೆಯು ಭವಿಷ್ಯದ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಎನ್ನಲಾಗುತ್ತದೆ.
ಶಾಸ್ತ್ರ ಪ್ರಕಾರ ಮನೆಯಲ್ಲಿ ಏನಾದರೂ ಬದಲಾವಣೆಗಳು ಕಂಡರೆ ಅಥವಾ ನಿಮ್ಮ ಜೀವನದಲ್ಲಿ ನಿಮಗೇನಾದರೂ ಇಂತಹ ಕೆಲವೊಂದು ಸೂಚನೆಗಳು ಸಿಕ್ಕಾಗ ಖಂಡಿತವಾಗಿಯೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಜೀವನದಲ್ಲಿ ನಿಮಗೆ ಯಾವುದೋ ಸನ್ನಿವೇಶಗಳು ಯಾವುದೋ ಘಟನೆಗಳು ಏನೋ ಸೂಚನೆ ನೀಡುತ್ತಾ ಇದೆ ಎಂಬುದರ ಅರ್ಥವಾಗಿರುತ್ತದೆ ಎನ್ನಲಾಗಿದೆ.
ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ವಿಚಾರ ತಿಳಿಸಲಾಗಿದೆ. ಕೆಲವೊಂದು ಸತ್ಯವೂ ಆಗಿದೆ. ಹಲ್ಲಿ ಶಾಸ್ತ್ರದ ಪ್ರಕಾರ, ಹಲ್ಲಿಗಳಿಗೆ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಗೊತ್ತಿರುತ್ತದೆಯಂತೆ. ಹಾಗಾಗಿ ಅವುಗಳು ಕೆಲ ಸೂಚನೆಗಳನ್ನು ನೀಡುತ್ತದೆ.
ಹಲ್ಲಿಗಳು ಜಗಳವಾಡುತ್ತಿದ್ದರೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ನಿಮ್ಮ ಗೆಳೆಯರೊಂದಿಗೆ ಜಗಳವಾಗುತ್ತದೆ ಎಂಬುದು ಇದರ ಸೂಚನೆ. ಆ ಸಂದರ್ಭದಲ್ಲಿ ನೀವು ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸಬೇಕು ಎಂಬುದೇ ಇದರ ಸೂಚನೆಯಾಗಿರುತ್ತದೆ.
ಇದರ ಹೊರತು ನೀವು ಯಾವುದಾದರೂ ಕೆಲಸಕ್ಕೆ ಹೋಗುವಾಗ, ಹಲ್ಲಿ ಕೀಟವನ್ನು ಬೇಟೆಯಾಡಿದ್ದು ಕಂಡಲ್ಲಿ, ನೀವು ಅಂದುಕೊಂಡ ಕೆಲಸ ನೆರವೇರುತ್ತದೆ ಎಂದರ್ಥ.
ಇನ್ನು ಹಲ್ಲಿ ಲೊಚಗೂಡುತ್ತಿದೆ ಎಂದರೆ, ಮನೆಯಲ್ಲಿ ಜಗಳವಾಗುತ್ತದೆ ಎಂಬ ಸೂಚನೆ ಸಿಕ್ಕಂತೆ. ಅಥವಾ ಕಚೇರಿ ಕೆಲಸದಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಸಾಮಾನ್ಯವಾಗಿ ಜ್ಯೋತಿಷ್ಯದ ಪ್ರಕಾರ, ಹಲ್ಲಿ ಪುರುಷರ ದೇಹದ ಎಡ ಭಾಗಗಳ ಮೇಲೆ ಬಿದ್ದರೆ ಮತ್ತು ಮಹಿಳೆಯರ ದೇಹದ ಬಲ ಭಾಗದ ಮೇಲೆ ಬಿದ್ದರೆ ಅದನ್ನು ಅಶುಭವೆಂದು ಹೇಳಲಾಗುತ್ತದೆ.
ಇದನ್ನೂ ಓದಿ: World’s Oceans: ಸಾಗರದ ಬಣ್ಣದಲ್ಲಿ ವ್ಯತ್ಯಾಸ; ಸಂಶೋಧನ ತಂಡ ನೀಡಿದೆ ಇದೊಂದು ವಿಚಾರದ ಅಸಲಿಯತ್ತು!
