Home » Ration Card: BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯ! ಶೈಕ್ಷಣಿಕ, ವೈದ್ಯಕೀಯ ನೆರವು ಲಭ್ಯ!!!

Ration Card: BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯ! ಶೈಕ್ಷಣಿಕ, ವೈದ್ಯಕೀಯ ನೆರವು ಲಭ್ಯ!!!

1 comment
Ration card

Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government ) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ. ಅಂದಹಾಗೆ BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯವಿದೆ. ಹೌದು, ಶೈಕ್ಷಣಿಕ, ವೈದ್ಯಕೀಯ ನೆರವು ಲಭ್ಯ!!!

ಶಿಕ್ಷಣ ನೆರವು : ಬಿಪಿಎಲ್ ಕಾರ್ಡ್ (BPL Card) ಇರುವವರು ಸಾಮಾನ್ಯವಾಗಿ ವಿದ್ಯಾರ್ಥಿವೇತನ (Scholorship), ಉಚಿತ ಪಠ್ಯಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಸಂಪನ್ಮೂಲಗಳಿಗೆ ಅರ್ಹರಾಗಿರುತ್ತಾರೆ. ಇದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಆರ್ಥಿಕವಾಗಿ ನೆರವು ನೀಡುತ್ತದೆ.

ವೈದ್ಯಕೀಯ ಸೌಲಭ್ಯಗಳು : BPL ಕಾರ್ಡ್ ಹೊಂದಿರುವವರು ಸರ್ಕಾರಿ ಆಸ್ಪತ್ರೆ (government hospital) ಮತ್ತು ಆರೋಗ್ಯ ಕೇಂದ್ರಗಳಲ್ಲಿ ಉಚಿತ ಅಥವಾ ಹೆಚ್ಚು ಸಹಾಯಧನದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇದು ಔಷಧಿಗಳು, ರೋಗನಿರ್ಣಯ ಪರೀಕ್ಷೆಗಳು ಮತ್ತು ಆಸ್ಪತ್ರೆಗೆ ಅಡ್ಮಿಟ್ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತದೆ.

ಸಾಮಾಜಿಕ ಭದ್ರತಾ ಯೋಜನೆಗಳು : ವೃದ್ಧರು, ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಪಿಂಚಣಿ ಯೋಜನೆಗಳಂತಹ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಪಡೆಯುತ್ತಾರೆ.

ವಸತಿ ಮತ್ತು ವಿದ್ಯುತ್ ಪ್ರಯೋಜನಗಳು : BPL ಕಾರ್ಡುದಾರರು ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಮನೆ ನಿರ್ಮಾಣ ಅಥವಾ ಸುಧಾರಣೆ ಮಾಡುವುದಿದ್ದಲ್ಲಿ ಆಗ ಹಣಕಾಸಿನ ನೆರವು ಪಡೆಯಬಹುದು. ಅಲ್ಲದೆ, ಹೆಚ್ಚುವರಿಯಾಗಿ ಅವರು ಸಬ್ಸಿಡಿ (subsidy) ವಿದ್ಯುತ್ ಸಂಪರ್ಕಕ್ಕೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Murder: ಸ್ನೇಹಿತನ ಹೆಂಡತಿಯ ಜೊತೆ ರಹಸ್ಯ ಸಂಬಂಧ! ಕೊನೆಗೆ ಕೊಲೆಯಲ್ಲಿ ಅಂತ್ಯ! ಕಾರಣ ನೀವಂದುಕೊಂಡದ್ದಲ್ಲ, ಬೇರೆನೇ ಇದೆ!!!

You may also like

Leave a Comment