Home » BJP MP: ಬಿಜೆಪಿ ಸಂಸದನ ಮನೆಯಲ್ಲಿ 10 ವರ್ಷದ ಬಾಲಕನ ಶವ ಪತ್ತೆ ; ಬಾಲಕನ ಸಾವಿನ ಸುತ್ತ ಅನುಮಾನದ ಹುತ್ತ !!!

BJP MP: ಬಿಜೆಪಿ ಸಂಸದನ ಮನೆಯಲ್ಲಿ 10 ವರ್ಷದ ಬಾಲಕನ ಶವ ಪತ್ತೆ ; ಬಾಲಕನ ಸಾವಿನ ಸುತ್ತ ಅನುಮಾನದ ಹುತ್ತ !!!

1 comment
BJP MP

BJP MP: ಬಿಜೆಪಿ ಸಂಸದ (BJP MP) ಆಗಿರುವ ರಾಜದೀಪ್ ರಾಯ್ ಅವರ ನಿವಾಸದಲ್ಲಿ 10 ವರ್ಷದ ಬಾಲಕನ ಶವ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡ ಸ್ಥಿತಿಯಲ್ಲಿ ಶನಿವಾರ ಅಸ್ಸಾಂನ ಸಿಲ್ಚಾರ್‌ನಲ್ಲಿ ಪತ್ತೆಯಾಗಿರುವುದಾಗಿ ಮಾಹಿತಿ ದೊರೆತಿದೆ.

ಶಾಸಕ ರಾಜ್‌ದೀಪ್ ರಾಯ್ ಅವರ ಹೇಳಿಕೆ ಪ್ರಕಾರ, ಮೂಲತಃ ಧೋಲೈ ಪ್ರದೇಶದ ಮೃತ ಬಾಲಕನ ತಾಯಿ, ನನ್ನ ಮನೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದರು. ಮನೆಕೆಲಸದಾಕೆಯ ಮಗ ನೇಣು ಬಿಗಿದುಕೊಂಡಿರುವ ಕುರಿತು ಕರೆ ಬಂದಿತ್ತು ಕೂಡಲೇ ಮನೆಗೆ ಬಂದು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಮನೆಕೆಲಸದ ಕುಟುಂಬಕ್ಕೆ ನನ್ನ ಮನೆಯ ಮೊದಲ ಮಹಡಿಯನ್ನು ಅವರಿಗೆ ಬಿಟ್ಟುಕೊಡಲಾಗಿದ್ದು, ಅಲ್ಲಿಯೇ ವಾಸವಿದ್ದರು. ಇನ್ನು ಒಳ್ಳೆಯ ಸಂಸ್ಕಾರವನ್ನು ಹೊಂದಿದ ಕುಟುಂಬ ಎಂದು ಸಂಸದ ರಾಜದೀಪ್ ರಾಯ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಬಾಲಕನೂ ಉತ್ತಮ ನಡತೆ ಹೊಂದಿದ್ದ ಎಂದು ಹೇಳಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದಿದ್ದು, ಮೊದಲು ಬಾಲಕ ವಿಡಿಯೋ ಗೇಮ್ ಆಡಲು ತಾಯಿ ಬಳಿ ಮೊಬೈಲ್ ಕೇಳಿದ್ದ ಎನ್ನಲಾಗಿದೆ ಇದಕ್ಕೆ ತಾಯಿ ಮೊಬೈಲ್ ಕೊಡದಿದ್ದಾಗ ಕೋಪಗೊಂಡಿದ್ದನಂತೆ. ಇದಾದ ಬಳಿಕ ತಾಯಿ ತನ್ನ ಸಹೋದರಿಯ ಜೊತೆ ಮಾರುಕಟ್ಟೆಗೆ ಹೋಗಿ ಬರುವಷ್ಟರಲ್ಲಿ ಬಾಲಕ ನೇಣು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಪೊಲೀಸ್ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಿದ್ದಾರೆ. ಹೆಚ್ಚಿನ ತನಿಖೆ ಇನ್ನಷ್ಟೇ ನಡೆಯಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸುಬ್ರತಾ ಸೇನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Uttara Kannada College: ಈ ಕಾಲೇಜಿನಲ್ಲಿ ಒಂದು ಕೆಲಸ ಮಾಡಿದ್ರೆ ಸಿಗುತ್ತೆ ಎಕ್ಸ್ಟ್ರಾ 5 ಮಾರ್ಕ್ ! ಏನ್ ಮಾಡ್ಬೇಕು ಗೊತ್ತಾ ?

You may also like

Leave a Comment