4
Soujanya case: ಬೆಳ್ತಂಗಡಿಯ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು(Soujanya case) ಮರು ತನಿಖೆ ಆಗಬೇಕು ಎಂದು ಹೇಳುವವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು.ನ್ಯಾಯಾಲಯ ಏನು ನಿರ್ದೇಶನ ನೀಡುತ್ತದೋ ಅದನ್ನು ಆಧರಿಸಿ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸರಕಾರ ನೇರವಾಗಿ ಪ್ರಕರಣದ ಮರುತನಿಖೆ ಮಾಡುವಂತಿಲ್ಲ. ಆದರೆ ನ್ಯಾಯಾಲಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿದಲ್ಲಿ ಸರಕಾರದಿಂದ ಮರುತನಿಖೆ ನಡೆಸಬಹುದು ಎಂದರು.
ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸರಕಾರದ ನಿಲುವಿನ ಪ್ರಶ್ನೆ ಅಲ್ಲ. ಈಗ ಮರು ತನಿಖೆ ಆಗಬೇಕು ಎನ್ನುತ್ತಿರುವವರು ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸಬೇಕು. ನ್ಯಾಯಾಲಯವು ಮರು ತನಿಖೆ ಮಾಡಿ ಎಂದು ನಿರ್ದೇಶಿಸಿದರೆ ಸರಕಾರ ಮರು ತನಿಖೆ ಮಾಡಬಹುದು. ಅದನ್ನು ಬಿಟ್ಟು ಈಗ ಸರಕಾರ ಏನೂ ಮಾಡಲಾಗದು ಎಂದಿದ್ದಾರೆ.
