Home » Roopesh shetty: ರೂಪೇಶ್ ಶೆಟ್ಟಿ ಹೊಸ ಸಿನಿಮಾದಲ್ಲಿ ಹೀರೋಯಿನ್ ಜಾಹ್ನವಿ; ಸಾನ್ಯ ಳನ್ನು ರಿಜೆಕ್ಟ್ ಮಾಡ್ಬಿಟ್ರ ರೂಪೇಶ್?

Roopesh shetty: ರೂಪೇಶ್ ಶೆಟ್ಟಿ ಹೊಸ ಸಿನಿಮಾದಲ್ಲಿ ಹೀರೋಯಿನ್ ಜಾಹ್ನವಿ; ಸಾನ್ಯ ಳನ್ನು ರಿಜೆಕ್ಟ್ ಮಾಡ್ಬಿಟ್ರ ರೂಪೇಶ್?

2 comments
Roopesh shetty

Roopesh shetty: ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡು ನಂತರ ಟಿವಿ ಸೀಸನ್​ಗೂ ಬಂದಿದ್ದು ಇವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಬೆಳೆದಿತ್ತು. ಅಭಿಮಾನಿಗಳು ಕೂಡ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ (Roopesh shetty) ಯನ್ನು ಜೋಡಿ ಹಕ್ಕಿಗಳಾಗಿ ಕಾಣುತ್ತಿದ್ದರು.

ಸದ್ಯ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಹೌದು, ತುಳು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರು ಕನ್ನಡಕ್ಕೆ ಬರಬೇಕೆಂಬ ಸಾವಿರಾರು ಅಭಿಮಾನಿಗಳ ಆಸೆ ಇದೀಗ ನೆರವೇರಿದೆ.

ರೂಪೇಶ್ ಶೆಟ್ಟಿ ಅವರ ಹೊಸ ಸಿನಿಮಾ ಆಗಿರುವ ‘ಅಧಿಪತ್ರ’ (Adhipatra Movie) ಚಿತ್ರದಲ್ಲಿ ಅವರು ಹೀರೊ ಪಾತ್ರದಲ್ಲಿ ಕಾಣಿಸಲಿದ್ದು, ಅಭಿಮಾನಿಗಳಿಗೆ ಸಖತ್ ಎಕ್ಸಾಟ್ಮೆಂಟ್ ಇದೆ. ಅದರಲ್ಲೂ ರೂಪೇಶ್ ಗೆ ಹೀರೋಯಿನ್ ಸಾನ್ಯಾ ಆಗಿರಬಹುದು ಎಂದು ಊಹೆ ಕೂಡ ಇತ್ತು. ಇದೀಗ ಅಭಿಮಾನಿಗಳ ಊಹೆ ಸುಳ್ಳಾಗಿದೆ. ಆದರೆ ಈ ಚಿತ್ರಕ್ಕೆ ಜಾಹ್ನವಿ ನಾಯಕಿ ಆಗಿ ನೇಮಕ ಆಗಿದ್ದಾರೆ.

ಸದ್ಯ ಅಧಿಪತ್ರ ಸಿನಿಮಾ ಬಗ್ಗೆ ರೂಪೇಶ್ ಮಾಧ್ಯಮದ ಜೊತೆಗೆ ಮಾತನಾಡಿದ್ದು, ‘ನೀವು ಹೀರೋ ಆದ್ರೆ ಸಾನ್ಯಾ ನಾಯಕಿ ಆಗ್ತಾರೆ ಎಂದುಕೊಂಡಿದ್ವಿ’ ನೀವು ಸಾನ್ಯಾ ಳನ್ನು ಹೀರೋಯಿನ್ ಆಗಿ ರಿಜೆಕ್ಟ್ ಮಾಡಿದ್ರ ಅಂತಾ ಪ್ರಶ್ನೆ ಕೇಳಲಾಯಿತು.

ಸದ್ಯ ಈ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರ ನೀಡಿದ ರೂಪೇಶ್ ‘ಸಾನ್ಯಾನ ಹೀರೋಯಿನ್ ಮಾಡಿ ಅಂತ ನಾನು ಹೇಳೊಕೆ ಆಗಲ್ಲ. ಅದು ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಬಿಟ್ಟ ವಿಚಾರ. ಅಷ್ಟಕ್ಕೂ ಸಾನ್ಯಾ ಜೊತೆ ಸಿನಿಮಾ ಮಾಡಬಾರದು ಅಂತೇನಿಲ್ಲ. ಆದ್ರೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ನಾವು ಖಂಡಿತಾ ಒಟ್ಟಾಗಿ ನಟಿಸುತ್ತೇವೆ’ ಎಂದಿದ್ದಾರೆ ರೂಪೇಶ್.

ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ 14 ಕೋಟಿ ಉದ್ಯೋಗಾವಕಾಶ ಭರವಸೆ: ಪ್ರಧಾನಿ ಮೋದಿ

You may also like

Leave a Comment