6
Kadaba : ಕಡಬ(Kadaba) ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾಗಿ ಭವಾನಿಶಂಕರ್ ಎನ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಭವಾನಿ ಶಂಕರ್ ಅವರು ಸುಳ್ಯತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ವರ್ಗಾವಣೆಯಾಗಿ ಸುಳ್ಯಕ್ಕೆ ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರಾಜಣ್ಣ ಅವರು ಆಗಮಿಸಿದ್ದರು.
ಆದರೆ ಭವಾನಿ ಶಂಕರ್ ಅವರಿಗೆ ಸ್ಥಳ ಗುರುತಿಸರಲಿಲ್ಲ.ಇದೀಗ ಭವಾನಿ ಶಂಕರ್ ಅವರನ್ನು ಕಡಬ ತಾಲೂಕು ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ.ಪ್ರಸ್ತುತ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಭಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಕಡಬ : ಬೆಳಂದೂರಿನಲ್ಲಿ ಸಾಕು ನಾಯಿ ಮೇಲೆ ಕಾಡು ಹಂದಿಗಳ ದಾಳಿ
