Chikkamagaluru: ಮಾಂಸಾಹಾರಿ ಹೋಟೆಲ್ ಒಂದರಲ್ಲಿ ಕುರಿ ಮಾಂಸದ ಬದಲು ದನದ ಮಾಂಸ ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾದ ಆತಂಕಕಾರಿ ಘಟನೆ ವರದಿಯಾಗಿದೆ. ಕುರಿ ಮಾಂಸದ ಬದಲು ದನದ ಮಾಂಸ ಹಾಕಿ ಬಿರಿಯಾನಿ ಬೇಯಿಸಿದ ಹೋಟೆಲ್ ನವರನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ.
ಚಿಕ್ಕಮಗಳೂರು(Chikkamagaluru) ನಗರದ ಐಜಿ ರಸ್ತೆಯಲ್ಲಿರುವ ಎರಡು ಹೋಟೆಲ್ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಹೋಟೆಲ್ ಮತ್ತು ಎವರೆಸ್ಟ್ ಹೋಟೆಲ್ ಎಂಬ ಎರಡು ಹೋಟೆಲ್ಗಳಲ್ಲಿ ಪೊಲೀಸರ ದಾಳಿ ನಡೆದಾಗ ಮಾಂಸ ಪತ್ತೆಯಾಗಿದೆ.
ಈ ಎರಡು ಹೋಟೆಲ್ಗಳಲ್ಲಿ ಊಟ ಮಾಡಿದ್ದ ಸ್ಥಳೀಯರು ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು ಖಚಿತ ಮಾಹಿತಿ ಪಡೆದುಕೊಂಡೆ ಬಂದಿದ್ದ ಪೊಲೀಸರು ದಾಳಿ ನಡೆಸಿದಾಗ ಸುಮಾರು 5 ಕೆಜಿಗೂ ಹೆಚ್ಚು ತೂಕದ ದಿನದ ಮಾಂಸ ಹೋಟೆಲ್ ನಲ್ಲಿ ಪತ್ತೆಯಾಗಿದೆ. ಜೊತೆಗೆ ಅದರಿಂದ ತಯಾರಿಸಿದ ಬಿರಿಯಾನಿ ಕೂಡ ಪೊಲೀಸರ ದಾಳಿಯ ಸಂದರ್ಭ ಸಿಕ್ಕಿದೆ. ದನದ ಮಾಂಸ ಮಿಕ್ಸ್ ಮಾಡಿ ಬಿರಿಯಾನಿ ಮತ್ತು ಮಾಂಸದ ಆಹಾರ ತಯಾರಿಸುತ್ತಿದ್ದ ಎರಡು ಹೋಟೆಲ್ಗಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ರಾಜ್ಯದ ಕಾಫಿನಾಡು ಮತ್ತು ಪ್ರವಾಸಿ ಕೇಂದ್ರಗಳನ್ನು ಹೊಂದಿರುವ ಆಕರ್ಷಕ ಟೂರಿಸ್ಟ್ ಪ್ಲೇಸ್ ಆಗಿರುವ ಚಿಕ್ಕಮಗಳೂರಿನಲ್ಲಿ ಹಣ ಮಾಡಲು ದನದ ಮಾಂಸ ಹಾಕಿ ಬಿರಿಯಾನಿ ಸೇರಿದಂತೆ ಹಲವು ನಾನು ಮಾಡುತ್ತಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಕುರಿ ಮಾಂಸದ ಬೆಲೆ ರೂ.700 ಕೆಜಿ ಗಟಿ ದಾಟಿ ಹೋದ ನಂತರ, ಕೆಜಿಗೆ ಕೇವಲ ರೂ. 200 ರಿಂದ 300 ಅವಳಗೆ ಸಿಗುವಾದರೆ ಮಾಂಸ ಉಪಯೋಗಿಸಿ ಅಡುಗೆ ತಯಾರಿಸಲಾಗುತ್ತಿತ್ತು. ಅದನ್ನು ಪ್ರವಾಸಿಗರಿಗೆ ಬಡಿಸಿ ಸಿಕ್ಕಾಪಟ್ಟೆ ಹಣ ಮಾಡಲಾಗುತ್ತಿತ್ತು. ಆದರೆ ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ಬಂದ ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದರು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಿಂದುಗಳು ಪವಿತ್ರವಾಗಿ ಪೂಜಿಸುವ ಗೋವಿನ ಮಂತ್ರವನ್ನು ಹಿಂದುಗಳಿಗೆ ತಿನ್ನಿಸಿದ ದುಷ್ಕರ್ಮಿಗಳ ಮೇಲೆ ಧಾರ್ಮಿಕ ಭಾವನೆಯನ್ನು ಧಕ್ಕೆ ಮಾಡಿದ ಮತ್ತಿತರ ಕಠಿಣ ಪ್ರಕರಣಗಳನ್ನು ದಾಖಲಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ರಾಜ್ಯದ ಈ ಪ್ರವಾಸಿಧಾಮದಲ್ಲಿ ಕೇವಲ 20 ರೂ.ಗೆ ಊಟೋಪಚಾರ : ನಂದಿಬೆಟ್ಟ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಗುಡ್‌ನ್ಯೂಸ್
