School Dress Code: ಕಳೆದ ಕೆಲ ತಿಂಗಳ ಹಿಂದಷ್ಟೇ ಕರ್ನಾಟಕ(Karnataka)ಹಾಗೂ ಮಹಾರಾಷ್ಟ್ರದಲ್ಲಿನ ಹಿಜಾಬ್(Hijab )ವಿವಾದ ಭುಗಿಲೆದ್ದು , ದೊಡ್ದ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು ಯಾರು ಮರೆಯಲು ಸಾಧ್ಯವಿಲ್ಲ. ಇದರ ಬೆನ್ನಲ್ಲೇ ಸಮವಸ್ತ್ರ ಪಾಲನೆ ಕುರಿತಂತೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ(Students )ಹಿಜಾಬ್ ಧರಿಸಿ ಶಾಲೆಗೆ ಬರದಂತೆ(School Dress Code) ಈ ದೇಶ ನಿಷೇಧ ಹೇರಿದೆ.
ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಅಬಯಾ ಡ್ರೆಸ್ (Burqa) ಧರಿಸಲು ಅವಕಾಶವಿಲ್ಲ ಎಂದು ಫ್ರೆಂಚ್ ಶಿಕ್ಷಣ ಸಚಿವ ಗ್ಯಾಬ್ರಿಯಲ್ ಅಟ್ಟಲ್ ತಿಳಿಸಿದ್ದಾರೆ.ಈ ಮೊದಲೇ ಮಹಿಳೆಯರು ಇಸ್ಲಾಮಿಕ್ ಶಿರವಸ್ತ್ರವನ್ನು ಧರಿಸುವುದಕ್ಕೆ ನಿಷೇಧ ಹೇರಲಾಗಿದೆ. ಇದೀಗ, ಫ್ರೆಂಚ್ ಶಾಲೆಗಳಲ್ಲಿ ಅಬಾಯಾಗಳನ್ನು ಧರಿಸುವ ಕುರಿತಂತೆ ದೀರ್ಘಕಾಲದ ಚರ್ಚೆಯ ಬಳಿಕ ಹೊಸ ನಿಯಮ ಜಾರಿಗೆ ತರಲಾಗಿದೆ.
ಫ್ರಾನ್ಸ್‌ನ ಶಿಕ್ಷಣದಲ್ಲಿ ಈ ಉಡುಪು ಕಟ್ಟುನಿಟ್ಟಾದ ಜಾತ್ಯತೀತ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತದೆ. ಶಾಲೆಗಳಲ್ಲಿ ಅಬಾಯಾ ಉಡುಪುಗಳನ್ನು ಧರಿಸುವುದಕ್ಕೆ ಅವಕಾಶವಿಲ್ಲ. ಸೆಪ್ಟೆಂಬರ್ 4ರಿಂದ ಶಾಲೆಗಳು ಪುನಾರಾರಂಭವಾಗುವ ಹಿನ್ನೆಲೆ ರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಮುಖ್ಯಸ್ಥರಿಗೆ ಈ ಕುರಿತು ಸೂಚನೆ ನೀಡಲಾಗುವ ಕುರಿತು ಅಟ್ಟಲ್ ಅವರು ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿ ಹೊಸ ನಿಯಮವನ್ನು ರೂಪಿಸುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸುವ ಸಂದರ್ಭ ಅವರನ್ನು ಗಮನಿಸುವಾಗ ಧರ್ಮವನ್ನು ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿ ಇರಬಾರದು ಎಂದು ಅಟ್ಟಲ್ ಹೇಳಿದ್ದಾರೆ.
ಇದನ್ನೂ ಓದಿ: BPL ಕಾರ್ಡ್ ದಾರರಿಗೆ ಬಿಗ್ ನ್ಯೂಸ್! ರಿಯಾಯಿತಿ ದರದಲ್ಲಿ ಮನೆ, ನಿವೇಶನ ಹಂಚಿಕೆಗೆ ರಾಜ್ಯ ಸರ್ಕಾರ ಚಿಂತನೆ!
