Home » Sanya Iyer PhotoShoot: ಹೊಸಚಿತ್ರಕ್ಕೆ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡ ‘ಪುಟ್ಟ ಗೌರಿ’! ಸಖತ್ ಹಾಟ್ ಗುರು!!!

Sanya Iyer PhotoShoot: ಹೊಸಚಿತ್ರಕ್ಕೆ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡ ‘ಪುಟ್ಟ ಗೌರಿ’! ಸಖತ್ ಹಾಟ್ ಗುರು!!!

1 comment

Sanya Iyer Photoshoot : ‘ಪುಟ್ಟ ಗೌರಿ ಮದುವೆ’ ಮೂಲಕ ಜನಮನ ಗೆದ್ದ ನಟಿ ಸಾನ್ಯಾ ಅಯ್ಯರ್‌ (Sanya Iyer)ಮತ್ತು ಇಂದ್ರಜಿತ್‌ ಲಂಕೇಶ್‌ ಅವರ ಮಗ ಸಮರ್ಜಿತ್‌ ಜೊತೆಯಾಗಿ ಬಣ್ಣ ಹಚ್ಚಲಿರುವ ‘ಗೌರಿ’ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

 

ಸಮರ್ಜಿತ್‌ ಲಂಕೇಶ್(Samarjit Lankesh)ಹಾಗೂ ಸಾನ್ಯಾ ಇಬ್ಬರಿಗೂ ‘ಗೌರಿ’ ಮೊದಲ ಸಿನಿಮಾವಾಗಿದ್ದು, ಇಂದ್ರಜಿತ್‌ ಲಂಕೇಶ್‌ ಅವರೇ ಮಗನ ಮೊದಲ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದು ವಿಶೇಷ!! ಮೊತ್ತ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸಮರ್ಜಿತ್‌ ಲಂಕೇಶ್‌ ಮತ್ತು ಸಾನ್ಯ ಅಯ್ಯರ್ ಕೆಮಿಸ್ಟ್ರಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

 

ಗೌರಿ ಚಿತ್ರಕ್ಕೆ ಜೆಸ್ಸಿ ಗಿಫ್ಟ್‌, ಚಂದನ್‌ ಶೆಟ್ಟಿ ಸಂಗೀತ ನೀಡಿದ್ದು, ಮಾಸ್ತಿ ಅವರ ಸಂಭಾಷಣೆ, ಕೆ. ಕಲ್ಯಾಣ್‌, ನಾಗೇಂದ್ರ ಪ್ರಸಾದ್‌, ಕವಿರಾಜ್‌ ಸಾಹಿತ್ಯ ನೋಡುಗರ ಗಮನ ಸೆಳೆಯಲು ಭರದ ಸಿದ್ಧತೆಯನ್ನು ಮಾಡಿರುವ ಸಿನಿಮಾ ತಂಡ ಇಂದು ಮುಹೂರ್ತ ಆಚರಿಸಿಕೊಂಡಿದ್ದು, ಸಿನಿಮಾ ಶೂಟಿಂಗ್‌ ಎಂದಿನಿಂದ ಆರಂಭವಾಗಲಿದೆ ಎನ್ನುವುದು ಶೀಘ್ರದಲ್ಲೇ ತಿಳಿಯಲಿದೆ.ಸದ್ಯ, ಈ ಜೋಡಿಯ ಫೋಟೋ ಶೂಟ್ ವೈರಲ್(Sanya Iyer photoshoot for gowri movie) ಆಗಿದ್ದು, ನೋಡುಗರ ಮನ ಗೆದ್ದು,ಪುಟ್ಟ ಗೌರಿ ಸಖತ್ ಹಾಟ್ ಗುರು ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.

 

 

 

You may also like

Leave a Comment