Aparna Nair death: ಅಸಹಜ ಸಾವುಗಳ ಸಂಖ್ಯೆ ಕೇವಲ ಸಾಮಾನ್ಯರಿಗೆ ಮಾತ್ರ ಸೀಮಿತವಾಗಿಲ್ಲ ಭಾರತೀಯ ಸಿನಿಮಾರಂಗದಲ್ಲಿ ಕೂಡ ಅಸಹಜ ಸಾವುಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಅನುಮಾನಾಸ್ಪದ ಸಾವುಗಳಿಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಈ ಹಿಂದೆ ಬಾಲಿವುಡ್ ನಟ ಸುಶಾಂತ ಸಿಂಗ್ ರಾಜ್ ಪೂತ್, ತುನಿಶಾ ಶರ್ಮಾ ಮುಂತಾದವರ ಸಾಲಿಗೆ ಇದೀಗ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಕೇವಲ 31 ವರ್ಷ ವಯಸ್ಸಿಗೆ ಕೇರಳ ಚಿತ್ರರಂಗ ಮತ್ತು ಸಿನಿ ರಂಗದಲ್ಲಿ ಪ್ರಖ್ಯಾತಿಗಳಿಸಿದ ನಟಿ ಅಪರ್ಣ ನಾಯರ್ (Aparna Nair) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಿರುತೆರೆ ನಟಿ ಅವರ ದೇಹ ನಿನ್ನೆ ಸಂಜೆ 7:30 ಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದನ್ನು ಕಂಡ ಆಕೆಯ ತಾಯಿ ಮತ್ತು ಸಹೋದರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಅಪರ್ಣ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೇರಳದ ತಿರುವನಂತಪುರದ ತಮ್ಮ ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳು ತಾಯಿ ಮತ್ತು ಸಹೋದರಿಯರೊಂದಿಗೆ ಅಪರ್ಣ ವಾಸಿಸುತ್ತಿದ್ದರು.
ಹಲವು ಸಿನಿಮಾ ಮತ್ತು ಕಿರುತೆರೆಗಳಲ್ಲಿ ನಟಿಸುತ್ತಿದ್ದ ಅಪರ್ಣಗೆ ತುಂಬಾ ಬೇಡಿಕೆ ಇತ್ತು. ಸಾಕಷ್ಟು ಅವಕಾಶಗಳು ಇದ್ದರೂ ಅಪರ್ಣ ಇಂತದ್ದೊಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು ಏನಕ್ಕೆ ಎನ್ನುವ ಬಗ್ಗೆ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ. ಈ ನಟಿಯಾಗಲಿಕೆಗೆ ಕೇರಳ ಸಿನಿಮಾ ಮತ್ತು ಟಿವಿ ಉದ್ಯಮ ಕಂಬನಿ ಹಾಕಿದೆ.
ಇದನ್ನೂ ಓದಿ: ಭಾರತದ GDP ಯಲ್ಲಿ ಅಬ್ಬರ ಉಬ್ಬರ ! ವಿಶ್ವದಲ್ಲಿ ಮೊದಲ ಸ್ಥಾನ ಮತ್ತು ಲಾಸ್ಟ್ ಯಾರು ಇರಬಹುದು ಊಹಿಸಿ !
